ಸ್ಟಾರ್​ ಕ್ರಿಕೆಟರ್​ಗೆ ಜಾಕ್​ಪಾಟ್​​; ಪಂಜಾಬ್​ ಕಿಂಗ್ಸ್​​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಕ್ಯಾಪ್ಟನ್​​

author-image
Ganesh Nachikethu
Updated On
ಶ್ರೇಯಸ್​ ಅಯ್ಯರ್​ಗೆ ಜಾಕ್​ಪಾಟ್​​; 26.75 ಕೋಟಿ ಜತೆ ಬಿಗ್​ ಆಫರ್​ ಕೊಟ್ಟ ಪಂಜಾಬ್​​
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಮೆಗಾ ಹರಾಜು
  • ಬರೋಬ್ಬರಿ 26.75 ಕೋಟಿಗೆ ಶ್ರೇಯಸ್​ ಅಯ್ಯರ್​ ಖರೀದಿ!
  • ಶ್ರೇಯಸ್​ ಅಯ್ಯರ್​​ಗೆ ಪಂಜಾಬ್​ ಕಿಂಗ್ಸ್​ನಿಂದ ಭರ್ಜರಿ ಆಫರ್​

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಚಾಂಪಿಯನ್​ ಮಾಡಿದ್ದು ಶ್ರೇಯಸ್​ ಅಯ್ಯರ್​​. ಇವರು ಇತ್ತೀಚೆಗೆ ನಡೆದ ಮೆಗಾ ಹರಾಜಿನಲ್ಲಿ ದಾಖಲೆ ಬೆಲೆಗೆ ಪಂಜಾಬ್​ ತಂಡದ ಪಾಲಾಗಿದ್ದಾರೆ.

ಶ್ರೇಯಸ್ ಅಯ್ಯರ್ 2 ಕೋಟಿ ಬೇಸ್​ ಪ್ರೈಸ್​ನೊಂದಿಗೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರು. ಇವರ ಖರೀದಿಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಶ್ರೇಯಸ್ ಅಯ್ಯರ್ ಬರೋಬ್ಬರಿ 26.75 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದ್ರು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರ ಪಟ್ಟಿಗೆ ಇವರು ಸೇರಿದ್ರು.

ಹರಾಜಿಗೂ ಮೊದಲು ಶ್ರೇಯಸ್ ಅಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ, ಶ್ರೇಯಸ್​ ಅಯ್ಯರ್​ ದಿಢೀರ್​​ ಪಂಜಾಬ್​ ಸೇರಲು ಕಾರಣ ಹೆಡ್​ ಕೋಚ್​​​ ರಿಕಿ ಪಾಂಟಿಂಗ್. ಸದ್ಯ ಪಂಜಾಬ್ ತಂಡದಲ್ಲಿರೋ ಇವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್​ ಭಾಗವಾಗಿದ್ರು.

ಅಯ್ಯರ್ ಪಂಜಾಬ್ ಕ್ಯಾಪ್ಟನ್‌

ಪಂಜಾಬ್​ ಶ್ರೇಯಸ್‌ ಅಯ್ಯರ್ ಅವರನ್ನು ಖರೀದಿಸಲು ಮತ್ತೊಂದು ಕಾರಣ ಕ್ಯಾಪ್ಟನ್ಸಿ. ಪಂಜಾಬ್ ಕಿಂಗ್ಸ್‌ ತಂಡಕ್ಕೆ ನಾಯಕನ ಅಗತ್ಯವಿತ್ತು. ಈಗ ಅಯ್ಯರ್ ಅವರಿಗೆ ಪಂಜಾಬ್​ ತಂಡದ ನಾಯಕತ್ವ ನೀಡುವ ಸಾಧ್ಯತೆ ಇದೆ. ಶ್ರೇಯಸ್ ಅಯ್ಯರ್ ಮತ್ತು ರಿಕಿ ಪಾಂಟಿಂಗ್ ಜೋಡಿ ಪಂಜಾಬ್‌ ಕಿಂಗ್ಸ್‌ ಗೆಲುವಿಗೆ ಬುನಾದಿ ಆಗಬಹುದು ಎಂಬುದು ಎಲ್ಲರ ಅಭಿಪ್ರಾಯ. ಸದ್ಯದಲ್ಲೇ ಪಂಜಾಬ್​ ಕಿಂಗ್ಸ್​ ತಂಡವು ಶ್ರೇಯಸ್​ ಅಯ್ಯರ್​ ಅವರನ್ನು ಕ್ಯಾಪ್ಟನ್​ ಆಗಿ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment