ಇಂಡಿಯಾ ಸಿ ತಂಡದಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್
ಮೂರು ವಿಕೆಟ್ ಕಿತ್ತು ಟೀಂ ಇಂಡಿಯಾ ಡೋರ್ ಬಡಿದಿದ್ದಾರೆ
ಕಂಬ್ಯಾಕ್ ಕನಸು ಕಂಡಿದ್ದ ಅಯ್ಯರ್ಗೆ ಬಿಗ್ ಶಾಕ್
ದುಲೀಪ್ ಟ್ರೋಫಿಯಲ್ಲಿ ಕನ್ನಡಿಗ ವಿಜಯಕುಮಾರ್ ವೈಶಾಕ್ ಸಂಚಲನ ಸೃಷ್ಟಿಸಿದ್ದಾರೆ. ಇಂಡಿಯಾ ಸಿ ತಂಡವನ್ನು ಪ್ರತಿನಿಧಿಸುತ್ತಿರುವ ಆರ್ಸಿಬಿ ಬೌಲರ್, ಮಿಂಚಿನ ಬೌಲಿಂಗ್ ನಡೆಸಿದ ಟೀಂ ಇಂಡಿಯಾದ ಡೋರ್ ತಟ್ಟಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಇಂಡಿಯಾ ಸಿ ತಂಡವು ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ವೇಳೆ ವೈಶಾಕ್, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. 12 ಓವರ್ಗಳಲ್ಲಿ ಕೇವಲ 19 ರನ್ ನೀಡಿ, ಮೂರು ಮೇಡಿನ್ ಓವರ್ ಮಾಡಿದರು. ಅಲ್ಲದೇ ಮೂರು ವಿಕೆಟ್ ಪಡೆದು ಇಂಡಿಯಾ ಡಿ ತಂಡವನ್ನು ಕೇವಲ 164 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ:ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?
ಶ್ರೇಯಸ್ ಅಯ್ಯರ್ ಅವರನ್ನು 9 ರನ್ಗೆ ಪೆವಿಲಿಯನ್ಗೆ ಕಳುಹಿಸಿ ಬಿಗ್ ಶಾಕ್ ನೀಡಿದ್ದು ಇದೇ ವೈಶಾಕ್. ದುಲೀಪ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡುವ ಕನಸನ್ನು ಅಯ್ಯರ್ ಕಂಡಿದ್ದರು. ಆದರೆ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೇ ಅಯ್ಯರ್ ನಿರಾಸೆ ಆಗಿದೆ. ಅಯ್ಯರ್ ಮಾತ್ರವಲ್ಲ, ರಜತ್ ಪಾಟಿದಾರ್, ಅರ್ಷದೀಪ್ ಸಿಂಗ್ ವಿಕೆಟ್ ಕೂಡ ಕಬಳಿಸಿದರು. ಇಂಡಿಯಾ ಡಿ ತಂಡವು 164 ರನ್ಗಳಿಗೆ ಆಲ್ಔಟ್ ಆಗಿದ್ದು, ಇಂಡಿಯಾ ಸಿ ತಂಡವು 4 ವಿಕೆಟ್ ಕಳೆದುಕೊಂಡು 91 ರನ್ಗಳಿಸಿ ಆಡುತ್ತಿದೆ.
ಇದನ್ನೂ ಓದಿ: ಈ 5 ದಿಗ್ಗಜರಿಗೆ ಟೀಂ ಇಂಡಿಯಾದ ಡೋರ್ ಕ್ಲೋಸ್; ಕ್ರಿಕೆಟ್ ವೃತ್ತಿ ಬದುಕು ಬಹುತೇಕ ಅಂತ್ಯ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್