newsfirstkannada.com

VIDEO: ಬಾಲರಾಮನಿಗೆ ಸೂರ್ಯ ತಿಲಕ.. ಅಯೋಧ್ಯೆಯಲ್ಲಿ ನಡೆದ ಮೊದಲ ಪ್ರಯೋಗ ಹೇಗಿತ್ತು ಗೊತ್ತಾ?

Share :

Published April 16, 2024 at 10:07pm

Update April 16, 2024 at 10:14pm

    ನಾಳೆ ದೇಶಾದ್ಯಂತ ಮನೆ ಮಾಡಲಿದೆ ಶ್ರೀರಾಮನವಮಿ ಆಚರಣೆ ಸಡಗರ

    ಜ. 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ

    ಶ್ರೀರಾಮ ಜನ್ಮಭೂಮಿ ಟ್ರಸ್ಟ್​ ವತಿಯಿಂದ ಎಲ್ಲಾ ರೀತಿಯಿಂದ ಸಕಲ ಸಿದ್ಧತೆ

ಅಯೋಧ್ಯೆ: ನಾಳೆ ದೇಶಾದ್ಯಂತ ರಾಮನವಮಿ ಆಚರಣೆ ಬಹಳ ಸಂಭ್ರಮ ಸಡಗರದಿಂದ ನಡೆಯಲಿದೆ. ರಾಮನವಮಿಯೂ ಹಿಂದೂ ಧರ್ಮದಲ್ಲಿ ತುಂಬಾ ವಿಶೇಷವಾದದ್ದು. ನಾಳೆ ಶ್ರೀ ರಾಮಚಂದ್ರನ ಜನ್ಮದಿನ. ಜನವರಿ 22ರಂದು ಅಯೋಧ್ಯೆಯ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಲಕ್ಷ, ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ.

ಇದೀಗ ನಾಳೆ ರಾಮನವಮಿ ಪ್ರಯುಕ್ತ ಅಯೋಧ್ಯೆಯ ಬಾಲಕ ರಾಮನ ದರ್ಶನಕ್ಕೆ ಜನಸಾಗರವೇ ಹರಿದು ಬರುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಅಯೋಧ್ಯೆ ದೇವಸ್ಥಾನ ನಿರ್ಮಾಣವಾದ ಮೊದಲ ಬಾರಿಗೆ ಶ್ರೀ ರಾಮನವಮಿ ಆಚರಿಸಲಾಗುತ್ತಿದೆ. ಹೀಗಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ ವತಿಯಿಂದ ಎಲ್ಲ ರೀತಿಯಲ್ಲೂ ಸಕಲ ತಯಾರಿ ನಡೆಸಲಾಗುತ್ತಿದೆ. ಇದರ ಮಧ್ಯೆ ಈ ಬಾರಿಯ ರಾಮನವಮಿ ಬಹಳ ವಿಶೇಷವಾದದ್ದು.

ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾನಿಗೂ ತಟ್ಟಿದ ಬಿಸಿಲಿನ ಬವಣೆ.. ಶ್ರೀರಾಮಜನ್ಮಭೂಮಿ ಟ್ರಸ್ಟ್​ನಿಂದ ಮಹತ್ವದ ನಿರ್ಧಾರ; ಏನದು?

ಏಕೆಂದರೆ ಇದೇ ಮೊದಲ ಬಾರಿಗೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯ ತಿಲಕವನ್ನು ಇಡಲಾಗುತ್ತದೆ. ಹಾಗಾಗಿ ಇಡೀ ಅಯೋಧ್ಯೆ ರಾಮನವಮಿಯಂದು ಸಂಭ್ರಮ ಮನೆ ಮಾಡಲಿದೆ. ಈಗಾಗಲೇ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕವನ್ನು ಇಡುವ ಅಭ್ಯಾಸವನ್ನೂ ಮಾಡಲಾಗಿದೆ. ಬೇಕಾದ ಸಿದ್ದತೆಗಳನ್ನೂ ಕೂಡ ಟ್ರಸ್ಟ್​ ಮಾಡಿಕೊಂಡಿದೆ. ಮಾಹಿತಿ ಪ್ರಕಾರ ನಾಲ್ಕು ನಿಮಿಷಗಳ ಕಾಲ ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಲಿದೆ. ಈ ಅಭ್ಯಾಸದ ವೇಳೆ ಸೂರ್ಯ ತಿಲಕ ಯಶಸ್ವಿಯಾಗಿ ಮೂಡಿಬಂದಿದೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ನಾಳೆ ಮಧ್ಯಾಹ್ನ 11.58 ರಿಂದ 12.03ರವರೆಗೆ ದರ್ಶನ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಾಲರಾಮನಿಗೆ ಸೂರ್ಯ ತಿಲಕ.. ಅಯೋಧ್ಯೆಯಲ್ಲಿ ನಡೆದ ಮೊದಲ ಪ್ರಯೋಗ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2024/04/rama4.jpg

Load More