ಮತ್ತೆ ಮುನ್ನೆಲೆಗೆ ಬಂದ ಪತ್ರಕರ್ತೆ ಗೌರಿ ಲಂಕೇಶ್ ಹ*ತ್ಯೆ ಕೇಸ್​; ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಆರೋಪಿ

author-image
Gopal Kulkarni
Updated On
ಮತ್ತೆ ಮುನ್ನೆಲೆಗೆ ಬಂದ ಪತ್ರಕರ್ತೆ ಗೌರಿ ಲಂಕೇಶ್ ಹ*ತ್ಯೆ ಕೇಸ್​; ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಆರೋಪಿ
Advertisment
  • ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಗೌರಿ ಲಂಕೇಶ್ ಹತ್ಯೆ ಆರೋಪಿ
  • ಆರೋಪಿ ಶ್ರೀಕಾಂತ್ ಪಂಗರ್ಕರ್ ಸೇರ್ಪಡೆಯಿಂದ ‘ಮಹಾ’ ಚರ್ಚೆ
  • 2001 ರಿಂದ 2006ರವರೆಗೆ ಶಿವಸೇನೆಯಲ್ಲಿ ಶ್ರೀಕಾಂತ್ ಕಾರ್ಯ ನಿರ್ವಹಣೆ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಅನ್ನೋ ಕೂಗು ಕೇಳಿ ಬರ್ತಿರೋ ಹೊತ್ತಲ್ಲೇ ಆರೋಪಿಗಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದು ಹೊಸ ಚರ್ಚೆಗೆ ನಾಂದಿ ಹಾಡಿದೆ.

2017 ಸೆಪ್ಟೆಂಬರ್ 5ರ ಸಂಜೆ ಸಮಯ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್​ರನ್ನ ಬೆಂಗಳೂರಿನ ಮನೆಯ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಂದೂಕುಧಾರಿಯ ಗುಂಡಿನೇಟಿಗೆ ಉಸಿರು ನಿಂತಿತ್ತು. ಈ ಘಟನೆ ಬರೀ ರಾಜ್ಯವಲ್ಲ, ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇನ್ನೂ ಕೂಡ ಈ ಪ್ರಕರಣ ಇತ್ಯರ್ಥವಾಗಿಲ್ಲ. ಹೀಗಿರುವ ಹೊತ್ತಲ್ಲೇ ಕೊಲೆ ಕೇಸ್​ನ ಆರೋಪಿಯೋರ್ವನ ರಾಜಕೀಯಕ್ಕೆ ಎಂಟ್ರಿಯಾಗಿದೆ.
ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಗೌರಿ ಲಂಕೇಶ್ ಹತ್ಯೆ ಆರೋಪಿ.

ಇದನ್ನೂ ಓದಿ:ಕರ್ನಾಟಕ ಬೈ ಎಲೆಕ್ಷನ್​​​; ಚನ್ನಪಟ್ಟಣ ಟಿಕೆಟ್​​ ಸಸ್ಪೆನ್ಸ್​​​; ಎರಡು ಕ್ಷೇತ್ರಗಳಿಗೆ BJP ಅಭ್ಯರ್ಥಿಗಳ​ ಘೋಷಣೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಾಗಿದ್ದಾರೆ. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೂ ಮುನ್ನ ಈ ಬೆಳವಣಿಗೆ ನಡೆದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಶ್ರೀಕಾಂತ್ ಪಂಗರ್ಕರ್​ಗೆ ರಾಜಕೀಯ ಹೊಸದೇನಲ್ಲ. 2001 ಮತ್ತು 2006ರ ಸಮಯದಲ್ಲಿ ಶಿವಸೇನೆ ಜಲ್ನಾ ಪುರಸಭೆಯ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ಶಿವಸೇನೆ ಟಿಕೆಟ್ ನೀಡದ ಕಾರಣ, ಪಂಗರ್ಕರ್ ಹಿಂದೂ ಜನಜಾಗೃತಿ ಸಮಿತಿಗೆ ಸೇರ್ಪಡೆಯಾಗಿದ್ರು. ಈ ನಡುವೆ ಗೌರಿ ಲಂಕೇಶ್ ಹತ್ಯೆ ಕೇಸ್​ನಲ್ಲಿ ಪಂಗರ್ಕರ್​ರನ್ನ 2018ರ ಆಗಸ್ಟ್​ನಲ್ಲಿ ಅರೆಸ್ಟ್ ಮಾಡಲಾಗಿತ್ತು. ಆದ್ರೆ ಇದೇ ವರ್ಷ ಸೆಪ್ಟೆಂಬರ್ 4 ರಂದು ರಾಜ್ಯ ಹೈಕೋರ್ಟ್​ ಜಾಮೀನು ನೀಡಿತ್ತು. ಈ ಬೆನ್ನಲ್ಲೇ ಮಹಾರಾಷ್ಟ್ರ ರಾಜಕಾರಣಕ್ಕೆ ಪಂಗರ್ಕರ್ ರೀ ಎಂಟ್ರಿ ಕೊಟ್ಟಿದ್ದಾರೆ. ಶಿವಸೇನೆ ಶಿಂಧೆ ಬಣಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿ ಕೇಸರಿ ಪಡೆಯ ಬಿಲ್ಲನ್ನು ಹಿಡಿದಿದ್ದಾರೆ. ಅಲ್ಲದೇ ಜಲ್ನಾ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿಯೂ ನೇಮಿಸಲಾಗಿದೆ.

ಇದನ್ನೂ ಓದಿ:ಸ್ಯಾಂಡಲ್​​ವುಡ್​ ನಟ ಮಯೂರ್ ಪಾಟೀಲ್ ವಿರುದ್ಧ ಎಫ್​ಐಆರ್; ಆಗಿದ್ದೇನು..?

ಸದ್ಯ, ಮಹಾರಾಷ್ಟ್ರದ ರಾಜಕಾರಣಕ್ಕೆ ಗೌರಿ ಕೊಲೆ ಕೇಸ್​ನ ಆರೋಪಿ ಎಂಟ್ರಿ ಕೊಟ್ಟಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಮಹಾ ರಾಜಕೀಯ ಜಟಾಪಟಿಗೂ ಕಾರಣವಾದ್ರೂ ಅಚ್ಚರಿ ಏನಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment