/newsfirstlive-kannada/media/post_attachments/wp-content/uploads/2024/12/SHUBHAMSHU-SHUKLA-GAGANAYAAN.jpg)
ಇಸ್ರೋ ಕನಸಿನ ಕೂಸು ಗಗನಯಾನಕ್ಕೆ ಮತ್ತೊಬ್ಬ ಗಗನಯಾತ್ರಿಯನ್ನು ಆಯ್ಕೆ ಮಾಡಲಾಗಿದ್ದು. ಅವನ್ನು ಎಎಕ್ಸ್-4 ಮಿಷನ್ ಜೊತೆಗೆ ಬಾಹ್ಯಾಕಾಶಯಾನಕ್ಕೆ ಕಳುಹಿಸಲು ಇಸ್ರೋ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ. ಆಯ್ಕೆಯಾಗಿದ್ದ ನಾಲ್ವರ ಪೈಕಿ ಈಗ ಶುಭಾಂಶು ಶುಕ್ಲಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅಮೆರಿಕಾದ ಕಂಪನಿಯೊಂದಿಗೆ ಇಸ್ರೋ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದ್ದರು ಅದರ ಅನ್ವಯ ಗ್ರೂಪ್ ಕ್ಯಾಪ್ಟನ್ ಶುಂಭಾಶು ಶುಕ್ಲಾಗೆ ಯುರೋಪಿಯನ್ ಸ್ಪೇಸ್ ಎಜಿನ್ಸಿಯಲ್ಲಿ ತರಬೇತಿ ನೀಡಲಾಗುತ್ತದೆ.
ಯುರೋಪಿಯನ್ ಸ್ಪೇಸ್ ಎಜೆನ್ಸಿ ಜೊತೆಗೆ ನಾಸಾದಲ್ಲಿಯೂ ತರಬೇತಿ ಪಡೆಯಲಿದ್ದಾರೆ ಶುಭಾಂಶು ಶುಕ್ಲಾ. ಬಳಿಕ ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೊರೇಷನ್ ಏಜೆನ್ಸಿಯಲ್ಲಿಯೂ ಕೂಡ ತರಬೇತಿ ಪಡೆಯಲಿದ್ದಾರೆ. ಐಎಸ್ಎಸ್ ಕಮ್ಯೂನಿಕೇಷನ್ ಸಿಸ್ಟಂ, ಎಮರ್ಜೆನ್ಸಿ ರೆಸ್ಪಾನ್ಸ್ ಪ್ರಕ್ರಿಯೆ ಟ್ರೇನಿಂಗ್ ಜೊತೆಗೆ ಹಲವು ತರಬೇತಿಗಳನ್ನು ಪಡೆಯಲಿದ್ದಾರೆ ಶುಭಾಂಶು ಶುಕ್ಲಾ.
ಇದನ್ನೂ ಓದಿ:ದೊಡ್ಡ ದುರಂತದಿಂದ ಪಾರು ಮಾಡಿದ AI.. ಈ ಗ್ರೇಟ್ ಜಾಬ್ಗೆ ಸೆಲ್ಯೂಟ್ ಹೊಡೆಯಲೇಬೇಕು!
ಒಟ್ಟು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಲ್ಲಿರಲಿರುವ ಶುಕ್ಲಾ, ಬಾಹ್ಯಾಕಾಶ ಕೇಂದ್ರದಲ್ಲಿ 5 ಪ್ರಯೋಗಗಳನ್ನು ನಡೆಸಲಿದ್ದಾರೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಶುಭಾಂಶು ಶುಕ್ಲಾ ಹೋಗಲಿದ್ದು. ಈಗಾಗಲೇ ಭೂಮಿಗೆ ಬಂದಾಗ ರಿಸೀವ್ ಮಾಡಿಕೊಳ್ಳವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಶುಕ್ಲಾರನ್ನು ಸಮುಮದ್ರದಲ್ಲಿ ಇಳಿಸಿ ಅವರನ್ನು ಬರಮಾಡಿಕೊಳ್ಳುವ ತರಬೇತಿಯನ್ನು ಶುರು ಮಾಡಲಾಗಿದೆ. ಕೊನೆ ಕ್ಷಣದಲ್ಲಿ ಸಮಸ್ಯೆಯಾದರೆ ಪ್ರಶಾಂತ್ ನಾಯರ್ ಅವರನ್ನು ಕಳುಹಿಸಲು ತೀರ್ಮಾನವನ್ನು ಮಾಡಲಾಗಿದೆ. ಬ್ಯಾಕ್ ಪ್ಲ್ಯಾನ್ ಆಗಿ ಪ್ರಶಾಂತ್ ನಾಯರ್ಗೂ ಕೂಡ ತರಬೇತಿಯನ್ನು ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ