/newsfirstlive-kannada/media/post_attachments/wp-content/uploads/2025/07/Shubhan-shuShukla.jpg)
ಬಾಹ್ಯಾಕಾಶಕ್ಕೆ ಹಾರಿರುವ ಭಾರತದ ಶುಭಾಂಶು ಶುಕ್ಲಾ (Shubhanshu Shukla) ಅವರು ಭೂಮಿಗೆ ವಾಪಸ್ ಬರೋದು ಕೊಂಚ ತಡವಾಗಲಿದೆ ಎಂದು ನಾಸಾ ತಿಳಿಸಿದೆ. 14 ದಿನಗಳ ಅಧ್ಯಯನಕ್ಕಾಗಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದಾರೆ. ಅವರ ಬಾಹ್ಯಾಕಾಶದ ಗಗನಯಾನದ ಅವಧಿಯು ನಿನ್ನೆಗೆ ಮುಕ್ತಾಯಗೊಂಡಿದೆ.
ಜೂನ್ 25 ರಂದು ಭಾರತದ ಶುಭಾಂಶು ಶುಕ್ಲಾ ಸೇರಿ ಒಟ್ಟು ನಾಲ್ವರು ಗಗನಯಾತ್ರಿಗಳು (Astronaut) ಅಮೆರಿಕಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದಾರೆ. ನಿಗದಿಯಂತೆ ಅವರು, ಜುಲೈ 10 ರಂದು ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ಭೂಮಿಗೆ ನಾಲ್ಕು ದಿನ ತಡವಾಗಿ ಬರಲಿದ್ದಾರೆ. ಅಂದರೆ ಜುಲೈ 14 ರಂದು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಭೂಮಿಗೆ ಲ್ಯಾಂಡ್ ಆಗಲಿದ್ದಾರೆ. ಗಗನಯಾತ್ರಿಗಳು ಅಮೆರಿಕ ಕರಾವಳಿಗೆ ಬಂದಿಳಿಯಲಿದ್ದಾರೆ. ಅವರು ಬಂದಿಳಿಯುತ್ತಿದ್ದಂತೆಯೇ ರಕ್ಷಣೆಗೆ ಬೇಕಾಗಿರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಮಯವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ನಾಲ್ಕು ದಿನ ತಡವಾಗಲಿದೆ.
ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..
ಇನ್ನು, ಶುಭಾಂಶು ಶುಕ್ಲಾ ಮತ್ತು ಅವರ ಆಕ್ಸಿಯಮ್ -4 ಸಿಬ್ಬಂದಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 230 ಸೂರ್ಯೋದಯಗಳನ್ನ ವೀಕ್ಷಿಸಿದ್ದಾರೆ. ಆಕ್ಸಿಯಮ್ ಮಿಷನ್-4 ಸಿಬ್ಬಂದಿ ಭೂಮಿಯ ಸುತ್ತ ಸುಮಾರು 230 ಕಕ್ಷೆಗಳನ್ನ ಪೂರ್ಣಗೊಳಿಸಿದ್ದಾರೆ ಮತ್ತು 6 ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣಿಸಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಅಧ್ಯಯನಗಳನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಆಕ್ಸಿಯಮ್ -4 ಗಗನಯಾತ್ರಿಗಳು 60 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಒಂದೇ ಕಾರ್ಯಾಚರಣೆಯಲ್ಲಿ ಐಎಸ್‌ಎಸ್‌ನಲ್ಲಿ ಇಷ್ಟೊಂದು ಪ್ರಯೋಗಗಳನ್ನು ನಡೆಸುವುದು ಒಂದು ದಾಖಲೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ