ಆಕಾಶದಲ್ಲಿ ಶುಭಾಂಶು ಶುಕ್ಲಾ ಹೊಸ ಚರಿತ್ರೆ.. ನಾಲ್ವರು ಗಗನಯಾನಿಗಳು ಭೂಮಿಗೆ ಕಾಲಿಡಲು ಕ್ಷಣಗಣನೆ..!

author-image
Ganesh
Updated On
ಭೂಮಿಗೆ ಮರಳೋ ಮುನ್ನ ಭಾರತವನ್ನ ಹಾಡಿ ಹೊಗಳಿದ ಶುಭಾಂಶು ಶುಕ್ಲಾ.. ಏನ್ ಹೇಳಿದರು?
Advertisment
  • ಆಗಸದಲ್ಲಿ ‘ಶುಭಾ’ರಂಭ.. ಶುಕ್ಲಾ ಅಂತರಿಕ್ಷ ಯಾನ ಅಂತ್ಯ
  • ಇಂದು ಭೂಮಿಗಿಳಿಯಲಿರುವ ನಾಲ್ವರು ಗಗನಯಾನಿಗಳು
  • ಇಂದು ಮಧ್ಯಾಹ್ನ ಭೂಮಿಗೆ ಕಾಲಿರಿಸಲಿರೋ ಶುಭಾಂಶು!

18 ದಿನ.. ಬಾಹ್ಯಾಕಾಶದಲ್ಲೇ ವಾಸ.. ವಿವಿಧ ಅಧ್ಯಯನ.. ಬಾಹ್ಯಾಕಾಶಕ್ಕೆ ನೆಗೆದಿದ್ದ ಶುಭಾಂಶು ಶುಕ್ಲಾ, ಶುಭ ಸುದ್ದಿಗಳನ್ನ ಹೊತ್ತು ಭೂಮಿಗೆ ಮರಳ್ತಿದ್ದಾರೆ.. ಗಗನಯಾತ್ರಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ಕಿದ್ದು, ಇಂದು ಕ್ಯಾಲಿಫೋರ್ನಿಯಾ ಕರಾವಳಿಗೆ ಲ್ಯಾಂಡ್​ ಆಗ್ಲಿದ್ದಾರೆ.. ಶುಭಾಂಶು ಟೀಂನ ಸ್ವಾಗತಕ್ಕೆ ಇಡೀ ವಿಶ್ವ ಕಾದು ನಿಂತಿದೆ.

ಆಗಸದಲ್ಲಿ ‘ಶುಭಾ’ರಂಭ.. ಅಂತರಿಕ್ಷ ಯಾನ ಅಂತ್ಯ!

ಶುಭಾಂಶು ಸಫಲತೆಯ ಯಾನ ಅಂತ್ಯ ಆಗ್ತಿದೆ.. ಗಡಿಗಳಿಲ್ಲದ ಭೂಲೋಕ ಕಂಡ ಶುಕ್ಲಾ, ವಸುದೈವ ಕುಟುಂಬಕಂ ಕಣ್ಣಾರೆ ಕಂಡು ಬೀಗಿದ್ರು.. 140 ಕೋಟಿ ಜನಗಳ ಆಸೆ, ಆಕಾಂಕ್ಷೆ, ಭರವಸೆಗಳ ಹೊಂಗಿರಣವಾದ ಶುಭಾಂಶು ರಿಟರ್ನ್​ ಆಗ್ತಿದ್ದು, ಶುಕ್ಲಾ ಸ್ವಾಗತಕ್ಕೆ ಶತಕೋಟಿ ಭಾರತದ ಮನಸ್ಸುಗಳು ಕಾತರಿಸಿವೆ.

ಇದನ್ನೂ ಓದಿ: ಬೆಂಗಳೂರು ನಗರ ಪ್ರಯಾಣಿಕರಿಗೆ ಬಿಗ್ ಶಾಕ್​.. ಆಟೋ ಮೀಟರ್ ದರ ಏರಿಕೆ, ಎಷ್ಟು ರೂಪಾಯಿ?

publive-image

‘ಶುಭ’ ಆರಂಭ !

  • ISSನಿಂದ ಭೂಮಿಯತ್ತ ಶುಭಾಂಶು ಶುಕ್ಲಾ ಯಾನ ಆರಂಭ
  • ಬರೋಬ್ಬರಿ 22 ಗಂಟೆಗಳ ಕಾಲ ಸುಧೀರ್ಘ ಆಕಾಶಯಾನ
  • ಮಣ್ಣಿನತ್ತ ಮರಳುವ ಶುಕ್ಲಾ ಸೇರಿ ನಾಲ್ಕು ಗಗನಯಾನಿಗಳು
  • ಇಂದು ಮಧ್ಯಾಹ್ನ 3 ಗಂಟೆಗೆ ನೌಕೆ ಲ್ಯಾಂಡ್ ಆಗೋ ಸಾಧ್ಯತೆ
  • ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸ್ಟ್ಯಾಷ್ ಲ್ಯಾಂಡ್

ಆಕ್ಸಿಯೋಂ-4 ಮಿಷನ್ ಭಾಗವಾಗಿ ಐಎಸ್​ಎಸ್​ ತೆರಳಿದ್ದ ಒಟ್ಟು ನಾಲ್ವರು ಗಗನಯಾತ್ರಿಗಳು, ಇಂದು ವಾಪಾಸ್​​​ ಆಗ್ತಿದ್ದಾರೆ.. ಜೂನ್ 25ರ ಬುಧವಾರ ಅಂತರಿಕ್ಷಯಾನ ಹೊರಟಿದ್ದ ಯಾತ್ರಿಗಳು.. 26ರಂದು ಬಾಹ್ಯಾಕಾಶ ನಿಲ್ದಾಣ ತಲುಪಿದ್ದರು.. ಇದೀಗ ಭಾರತದ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಉಜಾಂನ್ಸಿ, ಹಂಗೇರಿಯ ಟಿಬೊರ್ ಕಾಪುಗೆ ಐಎಸ್‌ಎಸ್​ನಿಂದ ಹೊರಟಿದ್ದು ಔಪಚಾರಿಕವಾಗಿ ಕೆಲವೇ ಕ್ಷಣಗಳಲ್ಲಿ ಭೂಮಿಗೆ ಬಂದಿಳಿಯಲಿದ್ದಾರೆ.

ಇದನ್ನೂ ಓದಿ: ಒಂದೇ ಫ್ರೇಮ್​ನಲ್ಲಿ ಮನೆದೇವ್ರು ಖ್ಯಾತಿಯ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಕ್ಯೂಟ್​ ಫ್ಯಾಲಿಮಿ..

publive-image

ಸಂಜೆ ಲ್ಯಾಂಡಿಂಗ್ ಬಳಿಕ ಪುನಶ್ಚೇತನ ಕಾರ್ಯಕ್ರಮ ಇದೆ. ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಅನುವಾಗುವಂತೆ 7 ದಿನಗಳ ಪುನಶ್ಚತನಕ್ಕೆ ಒಳಪಡಲಿದ್ದಾರೆ.. ಒಟ್ಟಾರೆ ಬಾಹ್ಯಾಕಾಶ ಚರಿತ್ರೆಯಲ್ಲಿ ಭಾರತದ ಹೊಸ ಮೈಲಿಗಲ್ಲು ಸ್ಥಾಪಿಸಿ ಆಗಿದೆ. ಆಗಸದಲ್ಲಿ ಶುಭಾರಂಭ ಅಂತರಿಕ್ಷ ಯಾನ ಅಂತ್ಯವಾಗಿದೆ.. ಗಗನದಿಂದ ಸಾರೆ ಜಹಾಂಸೆ ಅಚ್ಛಾ ಅಂತ ಶುಕ್ಲಾ ಬಣ್ಣಿಸಿದ್ರು.. ಇತ್ತ ಶತಕೋಟಿ ಭಾರತೀಯರು ಹೆಮ್ಮೆಯ ಪುತ್ರನ ಸ್ವಾಗತಕ್ಕೆ ಕಾತರಿಸಿದ್ದಾರೆ.

ಇದನ್ನೂ ಓದಿ: ಸರೋಜಾದೇವಿಗಾಗಿ ಕಂಬನಿ ಮಿಡಿದ ಚಿತ್ರರಂಗ.. ಇವತ್ತು ಹುಟ್ಟೂರಿನಲ್ಲಿ ಕಲಾದೇವಿಯ ಅಂತ್ಯಕ್ರಿಯೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment