/newsfirstlive-kannada/media/post_attachments/wp-content/uploads/2025/07/Shubhanshu-Shukla-3.jpg)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ನಾಳೆಯ ಬಳಿಕ ಭೂಮಿಗೆ ಹಿಂತಿರುಗಲಿದ್ದಾರೆ. ಜೂನ್ 25 ರಂದು ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಐಎಸ್ಎಸ್ಗೆ ಪ್ರಯಾಣ ಬೆಳೆಸಿದ್ದರು.
ಈಗ 14 ದಿನದ ಬಾಹ್ಯಾಕಾಶ ಯಾತ್ರೆ ಅಂತ್ಯ ಸಮೀಪಿಸುತ್ತಿದೆ. ನಾಸಾ, ಇಸ್ರೋ, ಆಕ್ಸಿಮ್-4 ಮಿಷನ್ ನಾಲ್ವರು ಗಗನಯಾನಿಗಳು ಭೂಮಿಗೆ ಬರುವ ನಿಖರ ದಿನಾಂಕ, ಸಮಯವನ್ನು ನಿಗದಿಪಡಿಸಿಲ್ಲ. ಜುಲೈ 10ರ ಬಳಿಕ ನಾಲ್ವರು ಗಗನಯಾನಿಗಳು ಭೂಮಿಗೆ ಹಿಂತಿರುಗುತ್ತಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ, ಸ್ಟೆಮ್ ಸೆಲ್, ಬಾಹ್ಯಾಕಾಶದಲ್ಲಿ ಮನುಷ್ಯರ ಮೂಳೆ ಸವೆತ, ಗಿಡಗಳನ್ನು ಬೆಳೆಯುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಂಶೋಧನೆ, ಅಧ್ಯಯನ ನಡೆಸಿದ್ದಾರೆ. ನಾಲ್ವರು ಗಗನಯಾನಿಗಳು ಒಟ್ಟಾರೆ 64 ಪ್ರಯೋಗ, ಅಧ್ಯಯನ ನಡೆಸಿದ್ದಾರೆ. ಭಾರತದ ಗಗನಯಾನಿ ಶುಭಾಂಶು ಶುಕ್ಲಾ 7 ಪ್ರಯೋಗ ಮಾಡಿದ್ದಾರೆ.
ಇದನ್ನೂ ಓದಿ: AI ಸ್ವಯಂಚಾಲಿತ ಕೆಲಸ.. ಹಲವು ಉದ್ಯೋಗಗಳಿಗೆ ಭಾರೀ ಹೊಡೆತ- Amazon CEO
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗುರುತ್ವಾಕರ್ಷಣಾ ಶಕ್ತಿ ಇರಲ್ಲ. ಹೀಗಾಗಿ ಐಎಸ್ಎಸ್ನಲ್ಲಿ ಕೆಲಸ ಮಾಡುವುದು ಅದ್ಭುತ ಅನುಭವ. ದೇಶಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳು ವಿನ್ಯಾಸಗೊಳಿಸಿದ ಪ್ರಯೋಗಗಳನ್ನು ಮಾಡುವುದು ಅದ್ಭುತ ಅನುಭವ ಎಂದು ಬುಧವಾರ ಶುಭಾಂಶು ಶುಕ್ಲಾ ಹೇಳಿದ್ದಾರೆ. ಬಾಹ್ಯಾಕಾಶ ನಿಲ್ದಾಣ ಹಾಗೂ ಸಂಶೋಧಕರ ಮಧ್ಯೆ ಬ್ರಿಡ್ಜ್ ಆಗಿ ನಾನು ಕೆಲಸ ಮಾಡುವುದಕ್ಕೆ ಹೆಮ್ಮೆಯಾಗುತ್ತಿದೆ. ಸಂಶೋಧಕರ ಪರವಾಗಿ ನಾನು ಸಂಶೋಧನೆ ನಡೆಸುತ್ತಿದ್ದೇನೆ. ನಾನು ಇಲ್ಲಿ ಭಾರಿ ಬ್ಯುಸಿಯಾಗಿದ್ದೇನೆ ಎಂದು ಶುಭಾಂಶು ಶುಕ್ಲಾ ಹೇಳಿದ್ದಾರೆ.
ದಿ ಆಕ್ಸಿಮ್-4 ಕ್ರ್ಯೂಗಳು ಈ ವಾರ ಭೂಮಿಗೆ ವಾಪಸ್ ಬರಲಿದ್ದಾರೆ. ಇದಕ್ಕೆ ಎಲ್ಲ ಪರಿಸ್ಥಿತಿಗಳು ಅನುಕೂಲಕಾರಿಯಾಗಿರಬೇಕು. ಅಧಿಕೃತವಾಗಿ ನಾಸಾ, ಇಸ್ರೋ ಗಗನಯಾನಿಗಳು ಭೂಮಿಗೆ ವಾಪಸ್ ಬರುವ ನಿಖರ ಸಮಯ, ದಿನಾಂಕವನ್ನು ಘೋಷಿಸಿಲ್ಲ. ಅಮೆರಿಕಾದ ಫ್ಲೋರಿಡಾದ ಕರಾವಳಿ ತೀರಕ್ಕೆ ನಾಲ್ವರು ಗಗನಯಾನಿಗಳು ಕ್ಯಾಪ್ಸುಲಾನಲ್ಲಿ ಬರಲಿದ್ದಾರೆ. ಸಮುದ್ರದಲ್ಲಿ ಪ್ಲ್ಯಾಶ್ ಡೌನ್ ಮಾಡಲಿದ್ದಾರೆ.
ಇತ್ತೀಚೆಗೆ ಅಮೆರಿಕಾದ ಸುನಿತಾ ವಿಲಿಯಮ್ಸ್ ಸೇರಿದಂತೆ ನಾಲ್ವರು ಗಗನಯಾನಿಗಳು ಅಮೆರಿಕಾದ ಸಮುದ್ರದಲ್ಲಿ ಪ್ಲ್ಯಾಶ್ ಡೌನ್ ಮಾಡಿದ್ದರು. ಅದೇ ರೀತಿ ಈಗ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಅಮೆರಿಕಾದ ಸಮುದ್ರದಲ್ಲಿ ಪ್ಲ್ಯಾಶ್ ಡೌನ್ ಮಾಡಲಿದ್ದಾರೆ. ಇದಕ್ಕೆ ಹವಾಮಾನ ಪರಿಸ್ಥಿತಿ ಕೂಡ ಅನುಕೂಲಕರವಾಗಿರಬೇಕು. ಸ್ಪೇಸ್ ಕ್ರಾಪ್ಟ್ ಕೂಡ ಸುಸ್ಥಿತಿಯಲ್ಲಿರಬೇಕು. ಎಲ್ಲ ಅಪರೇಷನಲ್ ಸಿದ್ಧತೆ ಪೂರ್ಣಗೊಂಡರೆ ಬಾಹ್ಯಾಕಾಶದಿಂದ ಗಗನಯಾನಿಗಳ ರಿಟರ್ನ್ ಡೇಟ್ ಫಿಕ್ಸ್ ಮಾಡಿ ಘೋಷಣೆ ಮಾಡಲಾಗುತ್ತೆ. ಗ್ರೌಂಡ್ ಮತ್ತು ಸಮುದ್ರದಲ್ಲಿ ಟೀಮ್ ಗಳು ರೆಡಿಯಾಗಿ ನಿಂತಿರಬೇಕು. ಎಲ್ಲ ಸಿಸ್ಟಮ್ ಚೆಕ್ ಪೂರ್ಣವಾಗಬೇಕು. ಗಗನಯಾನಿಗಳು ವೈದ್ಯಕೀಯ ಪರೀಕ್ಷೆಯನ್ನು ಭೂಮಿಗೆ ಬಂದ ಬಳಿಕ ಪೂರ್ಣಗೊಳಿಸಬೇಕು. ಗಗನಯಾನಿಗಳು ಭೂಮಿಗೆ ಬಂದ ಬಳಿಕ ಒಂದು ತಿಂಗಳ ಕಾಲ ಕ್ವಾರಂಟೈನ್ಲ್ಲಿರಬೇಕು.
ಇದನ್ನೂ ಓದಿ: ಇನ್ಮುಂದೆ ಸೊಳ್ಳೆಗಳ ಕಾಟ ಇರಲ್ಲ! ಆಂಧ್ರದಲ್ಲಿ ಸೊಳ್ಳೆಗಳ ಮೇಲೆ ನಿಗಾ ಇಡಲು AI ಬಳಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ