/newsfirstlive-kannada/media/post_attachments/wp-content/uploads/2025/07/Shubhamshu-2.jpg)
ಭಾರತದ ಪಾಲಿಗೆ ಇದು ಸುದಿನ.. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನ ಯಶಸ್ವಿಯಾಗಿ ತಲುಪಿ ಇತಿಹಾಸ ಸೃಷ್ಟಿಸಿರುವ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇಂದು ಭೂಮಿಯತ್ತ ಹೊರಡಲಿದ್ದಾರೆ. ಬಾಹ್ಯಾಕಾಶದಲ್ಲಿ ಭಾರತದ 7 ಪ್ರಯೋಗಗಳನ್ನ ಯಶಸ್ವಿಗೊಳಿಸಿರುವ ಗಗನಯಾತ್ರಿಗಳ ಸ್ವಾಗತಕ್ಕೆ ನಾಸಾ ಸಕಲ ಸಿದ್ಧತೆ ಮಾಡ್ಕೊಂಡಿದೆ.
ವಾಪಸ್ ಭೂಮಿಗೆ ಬರ್ತಿರೋ ಶುಕ್ಲಾ ಭಾವನಾತ್ಮಕ ವಿದಾಯ
18 ದಿನ.. ಬಾಹ್ಯಾಕಾಶದಲ್ಲೇ ವಾಸ.. ವಿವಿಧ ಅಧ್ಯಯನ.. ಬಾಹ್ಯಾಕಾಶ ಮಾಂತ್ರಿಕ ಶುಭಾಂಶು ಶುಕ್ಲಾ.. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ ಮೊದಲ ಭಾರತೀಯ. ಭೂಮಿಗೆ ವಾಪಸ್ ಆಗಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ತು. ಬಾಹ್ಯಾಕಾಶದಿಂದ ಭೂಮಿಯತ್ತ ಹೊರಡ್ತಿರೋ ಭಾರತದ ಶುಭಾಂಶು ಶುಕ್ಲಾ ಸಾರೇ ಜಹಾನ್ ಸೆ ಅಚ್ಚಾ ಅಂತ ಸ್ಪೇಸ್​ನಲ್ಲಿ ಭಾರತವನ್ನ ಭಾವನಾತ್ಮಕವಾಗಿ ಹೊಗಳಿದ್ರು.
ಇದನ್ನೂ ಓದಿ: ಭೂಮಿಗೆ ಮರಳೋ ಮುನ್ನ ಭಾರತವನ್ನ ಹಾಡಿ ಹೊಗಳಿದ ಶುಭಾಂಶು ಶುಕ್ಲಾ.. ಏನ್ ಹೇಳಿದರು?
ಭಾರತದ ಶುಭಾಂಶು ಶುಕ್ಲಾ ಸೇರಿ ಒಟ್ಟು ನಾಲ್ವರು ಗಗನಯಾತ್ರಿಗಳು ಜೂನ್ 25ರಂದು ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ರು. ಜೂನ್ 26ರಂದ ಐಎಸ್​ಎಸ್​ ತಲುಪಿದ್ದ ತಂಡ 14 ದಿನಗಳ ಯಾನ ಕೈಗೊಂಡಿತ್ತು. ನಿಗದಿಯಂತೆ ಜುಲೈ 10ರಂದೇ ಭೂಮಿಗೆ ವಾಪಸ್ ಆಗಬೇಕಿದ್ದ ಗಗನಯಾನಿಗಳು 4 ದಿನಗಳು ತಡವಾಗಿ ಲ್ಯಾಂಡ್ ಆಗಲಿದೆ.
ಶುಕ್ಲಾ ರಿಟರ್ನ್ಸ್!
ಆಕ್ಸ್-4 ಗಗನಯಾತ್ರಿಗಳು ಜುಲೈ 14, ಅಂದ್ರೆ ಭಾರತೀಯ ಕಾಲಮಾನದ ಪ್ರಕಾರ ಇವತ್ತು ಸಂಜೆ 4:34 ಕ್ಕೆ ಅನ್‌ಡಾಕಿಂಗ್‌ಗೆ ಸಿದ್ಧತೆಗಳನ್ನ ಅಂತಿಮಗೊಳಿಸಲಿದ್ದಾರೆ. ಭೂಮಿಗೆ ಹಿಂತಿರುಗುವ ಮೊದಲು ಪೂರ್ವ ಹಾರಾಟ ತಪಾಸಣೆ ನಡೆಸಲು ಗಗನಯಾತ್ರಿಗಳು ಭಾರತೀಯ ಕಾಲಮಾನ ಮಧ್ಯಾಹ್ನ 2:25 ಕ್ಕೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನ ಹತ್ತಲಿದ್ದಾರೆ. ನಾಳೆ ಭಾರತೀಯ ಕಾಲಮಾನ ಮಧ್ಯಾಹ್ನ ಸರಿಸುಮಾರು 3 ಗಂಟೆಗೆ ಕ್ಯಾಲಿಫೋರ್ನಿಯಾ ಕರಾವಳಿಗೆ ಬಂದಿಳಿಯಲಿದ್ದಾರೆ. ಹಿಂದಿರುಗಿದ ನಂತರ, ಶುಕ್ಲಾ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಏಳು ದಿನಗಳ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಗಾಗಲಿದ್ದಾರೆ. ಪುನರ್ವಸತಿ ಕಾರ್ಯಕ್ರಮದ ಬಗ್ಗೆ ದೃಢಪಡಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ. ಪುತ್ರನನ್ನ ಹೆಮ್ಮೆಯಿಂದ ಸ್ವಾಗತಿಸಲು ಕುಟುಂಬದವರು ಕಾತರದಿಂದ ಕಾಯುತ್ತಿದ್ದು, ತವರಲ್ಲಿ ಭವ್ಯ ಸ್ವಾಗತ ಕೋರಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ನಿಮಗಿದು ಗೊತ್ತೇ.. ನೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು?
ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್​ನಲ್ಲಿ ಆಕ್ಸಿಯಮ್-4 ಸಿಬ್ಬಂದಿಗೆ ಭಾನುವಾರ ಸಂಜೆ ಭಾರತದ ಕಾಲಮಾನ ಪ್ರಕಾರ 7:20 ರ ಸುಮಾರಿಗೆ ಔಪಚಾರಿಕ ವಿದಾಯ ಹೇಳಲಾಯ್ತು. ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನ ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನ ಕೊಡುಗೆ ನೀಡಿದೆ.
ಒಟ್ಟಾರೆ, ಶುಭಾಂಶು ಶುಕ್ಲಾ ಅವರ 18 ದಿನ ವಾಸ ಮುಕ್ತಾಯ ಹಂತ ತಲುಪಿದ್ದು, ನಾಳೆ ಅವರು ಭೂಮಿಗೆ ಬಂದಿಳಿಯಲಿದ್ದಾರೆ. 41 ವರ್ಷಗಳ ಹಿಂದೆ ಭಾರತದ ರಾಕೇಶ್ ಶರ್ಮಾ ಆಂತರಿಕ್ಷ ಯಾನ ಕೈಗೊಂಡಿದ್ದರು. ಅದಾದ ಬಳಿಕ ಎರಡನೇಯವರಾಗಿ ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ಯಾನವನ್ನು ಯಶಸ್ವಿಯಾಗಿ ಪೂರೈಸುತ್ತಿರುವುದು ಭಾರತದ ಹೆಮ್ಮೆ.
ಇದನ್ನೂ ಓದಿ: ವಿಮಾನಕ್ಕೆ ಏನಾಗಿತ್ತು..? 10 ಗಂಟೆಗೂ ಹೆಚ್ಚು ಸಮಯ ಕಾದು ಕುಳಿತ್ತಿದ್ದ 170 ಪ್ರಯಾಣಿಕರ ಧರಣಿ, ಆಕ್ರೋಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ