ಗಗನಯಾನಿ ಶುಭಾಂಶು ಶುಕ್ಲಾ ಅವರು ಭೂಮಿಗೆ ಇಳಿಯುತ್ತಿದ್ದಂತೆ ತಾಯಿ ಕಣ್ಣೀರು..!

author-image
Bheemappa
Updated On
ಗಗನಯಾನಿ ಶುಭಾಂಶು ಶುಕ್ಲಾ ಅವರು ಭೂಮಿಗೆ ಇಳಿಯುತ್ತಿದ್ದಂತೆ ತಾಯಿ ಕಣ್ಣೀರು..!
Advertisment
  • ಗಗನಯಾನಿ ಶುಭಾಂಶು ಶುಕ್ಲಾ ಬಗ್ಗೆ PM ಮೋದಿ ಹೇಳಿದ್ದೇನು?
  • ಅಮೆರಿಕದಲ್ಲಿ ಲ್ಯಾಂಡ್ ಆಗಿರುವ ನಾಲ್ವರು ಗಗನಯಾತ್ರಿಗಳು
  • ಆಕ್ಸಿಯಂ-4 ಮಿಷನ್​​ನ ಭಾಗವಾಗಿ ಕೈಕೊಂಡಿದ್ದ ಗಗನಯಾನ

ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಸೇರಿ ಸೇರಿದಂತೆ ಇನ್ನುಳಿದ ಮೂವರು ಗಗನಯಾತ್ರಿಗಳು ಯಶಸ್ವಿಯಾಗಿ ಕ್ಯಾಲಿಫೋರ್ನಿಯಾದ ಸ್ಯಾನ್​ ಡಿಯಾಗೋದಲ್ಲಿ ಬಂದಿಳಿದಿದ್ದಾರೆ.

ವಾಣಿಜ್ಯ ಉದ್ದೇಶಿತ ಆಕ್ಸಿಯಂ-4 ಮಿಷನ್​ನ ಭಾಗವಾಗಿ ಈ ಗಗನಯಾನ ಕೈಗೊಂಡು ಸಕ್ಸಸ್​ ಆಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕ್ಯಾಲಿಫೋರ್ನಿಯಾದ ಕರಾವಳಿಗೆ ಸ್ಪ್ಲ್ಯಾಶ್​ಡೌನ್ (Splashdown) ಆಗುತ್ತಿದ್ದಂತೆ ಶುಭಾಂಶು ಶುಕ್ಲಾ ಅವರ ತಾಯಿ ಕಣ್ಣೀರು ಹಾಕಿರುವುದು ಕಂಡುಬಂದಿದೆ. ಜೊತೆಗೆ ಅವರ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ: ಯೆಮೆನ್​ನಲ್ಲಿ ನರ್ಸ್​ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ.. ಕಾರಣವೇನು..?

publive-image

ಗಗನಯಾತ್ರಿಗಳ ಗ್ರೂಪ್ ಕ್ಯಾಪ್ಟನ್ ಆಗಿರುವಂತಹ ಗಗನಯಾನಿ ಶುಭಾಂಶು ಶುಕ್ಲಾ ಸೇರಿ ಸೇರಿ ಉಳಿದ ಮೂವರು ಎಲ್ಲರೂ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಕ್ಷಣವನ್ನು ಭಾರತದಿಂದಲೇ ಶುಭಾಂಶು ಶುಕ್ಲಾ ಅವರ ಕುಟುಂಬಸ್ಥರು ಕಣ್ತುಂಬಿಕೊಂಡು ಸಂತೋಷ ಪಟ್ಟಿದ್ದಾರೆ. ಸತತ 18 ದಿನಗಳ ಬಳಿಕ ಶುಭಾಂಶು ಶುಕ್ಲಾ ನೇತೃತ್ವದ ಗಗನಯಾನಿಗಳು ಮರಳಿದ್ದಾರೆ.

ಈ ಅದ್ಭುತ ಕ್ಷಣವನ್ನು ಭಾರತದ ಉತ್ತರ ಪ್ರದೇಶದ ಲಕ್ನೋ ನಗರದಿಂದ ಶುಭಾಂಶು ಶುಕ್ಲಾ ಅವರ ಕುಟುಂಬಸ್ಥರು ನೋಡಿ ಭಾವುಕರಾದರು. ಶುಭಾಂಶು ಶುಕ್ಲಾ ಅವರ ತಾಯಿ ಕಣ್ಣೀರು ಹಾಕಿರುವುದು ಎಲ್ಲರನ್ನೂ ಭಾವುಕರನ್ನಾಗಿಸಿತು. ಇದೇ ವೇಳೆ ಮಗ ಭೂಮಿಗೆ ಮರಳಿರುವುದನ್ನು ಸೆಲೆಬ್ರೇಟ್ ಮಾಡಿದರು. ಭಾರತದ ಭಾವುಟ ಹಿಡಿದು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.


">July 15, 2025

ಶುಭಾಂಶು ಶುಕ್ಲಾ ಅವರು ಯಶಸ್ವಿಯಾಗಿ ಭೂಮಿಗೆ ತಲುಪುತ್ತಿದ್ದಂತೆ ಪ್ರಧಾನಿ ಮೋದಿ ಅವರು ಸಂತಸ ಪಟ್ಟಿದ್ದು ಇದು ಭಾರತದ ಹೆಮ್ಮೆಯ ಕ್ಷಣ. ಶುಕ್ಲಾ ಅವರು ಭೂಮಿಗೆ ರಿಟರ್ನ್​ ಆಗಿರುವುದು ಐತಿಹಾಸಿಕ ಮೈಲಿಗಲ್ಲು ಆಗಿದೆ. ಭಾರತದ ಮೊಟ್ಟ ಮೊದಲ ಗಗನಯಾನಿ ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಸನ್​ಗೆ ಭೇಟಿ ನೀಡಿದ್ದಾರೆ. ದೇಶದ ನೂರಾರು ಕೋಟಿ ಕನಸುಗಳಿಗೆ ಶುಕ್ಲಾ ಅವರು ಸ್ಪೂರ್ತಿ ಎಂದು ಮೋದಿ ಅವರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment