/newsfirstlive-kannada/media/post_attachments/wp-content/uploads/2025/06/shubhanshu-shukla.jpg)
ಬರೋಬ್ಬರಿ 41 ವರ್ಷಗಳ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಪದೇ ಪದೆ ಮುಂದೂಡಿಕೆ ಆಗಿತ್ತು. ಅಂತೂ ಇವತ್ತು ಮುಹೂರ್ತ ಕೂಡಿಬಂದಿದ್ದು, ಶುಭಾಂಶು ಶುಕ್ಲಾ ಸೇರಿ ಒಟ್ಟು ನಾಲ್ವರು ಗಗನಯಾನಿಗಳು ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ.
ಅಮೆರಿಕಾದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಇಂದು ಮಧ್ಯಾಹ್ನ 12 ಗಂಟೆ ಒಂದು ನಿಮಿಷಕ್ಕೆ ಉಡಾವಣೆ ಆಗಲಿದೆ. ಶುಕ್ಲಾ ಸೇರಿದಂತೆ ನಾಲ್ವರನ್ನು ಹೊತ್ತ ಅಮೆರಿಕದ ಆ್ಯಕ್ಸಿಮ್-4 ನೌಕೆಯಲ್ಲಿ ನಾಲ್ವರು ವಿಜ್ಞಾನಿಗಳು ಇರಲಿದ್ದಾರೆ. ಹಲವು ಬಾರಿ ನೌಕೆಯ ಉಡ್ಡಯನಕ್ಕೆ ವಿಘ್ನ ಉಂಟಾಗಿತ್ತು. ತಾಂತ್ರಿಕ ದೋಷ ಮತ್ತು ಹವಮಾನ ವೈಪರೀತ್ಯದಿಂದ ಮುಂದೂಡಿಕೆ ಆಗಿತ್ತು.
ಇದನ್ನೂ ಓದಿ: ಮೊಟ್ಟ ಮೊದಲ ಎಲೆಕ್ಟ್ರಿಕ್ ವಿಮಾನ.. ಜಸ್ಟ್ 700 ರೂಪಾಯಿ ಇದ್ರೆ ಪ್ರಯಾಣಿಸಬಹುದು! -Video
ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದ್ದು, ಮಧ್ಯಾಹ್ನ 12.01ಕ್ಕೆ ನೌಕೆ ಆಕಾಶಕ್ಕೆ ಜಿಗಿಯಲಿದೆ. ಗುರುವಾರ ಸಂಜೆ 4.30 ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾ ಕಾಶ ಕೇಂದ್ರ ತಲುಪುವ ಸಾಧ್ಯತೆ ಇದೆ. ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸುತ್ತಿದ್ದಾರೆ. ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಬೆಡ್, ಟಾಯ್ಲೆಟ್, ಮಿನಿ ಫ್ರಿಡ್ಜ್.. ಅಮೆರಿಕ B-2 ಯುದ್ಧ ವಿಮಾನದೊಳಗೆ ಏನೇನಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ