/newsfirstlive-kannada/media/post_attachments/wp-content/uploads/2024/12/Isro.jpg)
ಬೆಂಗಳೂರು: ಮಂಗಳಯಾನ, ಚಂದ್ರಯಾನಗಳ ಮೂಲಕ ಬಾಹಕಾಶ್ಯದಲ್ಲಿ ಮೈಲಿಗಲ್ಲು ಸಾಧಿಸಿರೋ ಇಸ್ರೋಯೀಗ ಮತ್ತೊಂದು ಮೈಲಿಗಲ್ಲಿಗೆ ಸಜ್ಜಾಗಿದೆ. ಅಮೆರಿಕಾದ ಸಹಭಾಗಿತ್ವದೊಂದಿಗೆ ಇಸ್ರೋ ಗಗನಯಾನ್ ಮಿಷನ್ ಕೈಗೊಂಡಿದ್ದು, ರಾಕೇಶ್ ಶರ್ಮಾ ಬಳಿಕ ಬಾಹ್ಯಕಾಶಕ್ಕೆ ತೆರಳುವ ಭಾರತದದ ಗಗನಯಾತ್ರಿ ಹೆಸರು ಅಂತಿಮಗೊಳಿಸಲಾಗಿದೆ.
ರಾಕೇಶ್ ಶರ್ಮಾ ಭಾರತದ ಹೆಮ್ಮೆಯ ಮೊದಲ ಗಗನಯಾನಿ. 1984ರಲ್ಲಿ ಸೋವಿಯತ್ ಬಾಹ್ಯಾಕಾಶ ನೌಕೆ ಸೂಯೆಜ್ ಟಿ-11 ರಲ್ಲಿ ಪ್ರಯಾಣಿಸಿದ್ದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ, ಬಾಹ್ಯಾಕಾಶದಲ್ಲಿ 7 ದಿನ 21 ಗಂಟೆಗಳ ಕಾಲ ಕಳೆದು ಭೂಮಿಗೆ ವಾಪಸ್ ಬರುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ರು. ಇದೀಗ ಇದೇ ಇತಿಹಾಸವನ್ನ ಮರುಸೃಷ್ಟಿಸಲು ಮತ್ತೊಂದು ಭಾರತೀಯ ಗಗನಯಾತ್ರಿ ಸಜ್ಜಾಗಿದ್ದಾರೆ.
ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿ ಹೆಸರು ಅಂತಿಮ
ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋದ ಮುಂದಿನ ಮಹತ್ವಾಂಕ್ಷಿಯ ಯೋಜನೆ ಮಿಷನ್ ಗಗನಯಾನ್, ಈ ಗಗನಯಾನ ಮಿಷನ್ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟವಾಗಿದ್ದು, ಗಗನಯಾನಿಯಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾರನ್ನ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ ಕಳುಹಿಸಲು ನಿರ್ಧರಿಸಲಾಗಿದೆ.
2025ರ ಕೊನೆಯಲ್ಲಿ ಈ ಗಗನಯಾನ ಮಿಷನ್ ನಿಗದಿಪಡಿಸಲಾಗಿದ್ದು, ಈಗಾಗಲೇ ಇಸ್ರೋ ಅಮೆರಿಕಾದ ಸಹಭಾಗಿತ್ವದೊಂದಿಗೆ ಸಕಲ ತಯಾರಿ ನಡೆಸಿದೆ. ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅವರು ನಾಲ್ಕು ಗಗನಯಾನಿಗಳ ಹೆಸರನ್ನ ಪ್ರಕಟ ಮಾಡಿದ್ದರು. ನಾಲ್ಕು ಜನರ ಪೈಕಿ ಒಬ್ಬರನ್ನ ಅಂತಿಮಗೊಳಿಸಲಾಗಿದ್ದು, ಶುಭಾಂಶು ಶುಕ್ಲಾರನ್ನು ಮಹತ್ವದ ಯೋಜನೆಯ ಸಾರಥಿಯನ್ನಾಗಿ ಮಾಡಲಾಗಿದೆ.
ಅಮೆರಿಕಾದ ಎಕ್ಸಿಂ ಸ್ಪೇಸ್ ಎಂಬ ಕಂಪನಿಯ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿರುವ ಇಸ್ರೋ, ಕ್ಯಾಪ್ಟನ್ ಶುಭಾಂಶು ಅವರಿಗೆ ಕಠಿಣ ತರಬೇತಿಯನ್ನ ಕೊಡಿಸುತ್ತಿದೆ. ಶುಭಾಂಶು ಶುಕ್ಲಾಗೆ ಯೂರೋಪಿಯನ್ ಸ್ಪೇಸ್ ಏಜೆನ್ಸಿ, ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೋರೇಷನ್ ಏಜೆನ್ಸಿ ಹಾಗೂ ಅಮೆರಿಕಾದ ನಾಸಾದಲ್ಲೂ ಕಠಿತ ತರಬೇತಿಯನ್ನ ನೀಡಲಾಗ್ತಿದೆ. ಇದ್ರ ಜೊತೆಗೆ ಸ್ಪೇಸ್ ಸ್ಟೇಷನ್ನಲ್ಲಿ ಕಮ್ಯೂನಿಕೇಷನ್ ಸಿಸ್ಟಮ್ ಮತ್ತು ಎಮರ್ಜೆನ್ಸಿ ರೆಸ್ಪಾನ್ಸ್ ಪ್ರಕ್ರಿಯೆ ಬಗ್ಗೆಯೂ ಸಹ ಟ್ರೈನ್ ಮಾಡಲಾಗಿದೆ.
14 ದಿನಗಳ ಕಾಲ ಬಾಹಾಕಾಶ್ಯದಲ್ಲಿರುವ ಶುಭಾಂಶು
ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ನಲ್ಲಿ ಐದು ಪ್ರಯೋಗಗಳನ್ನು ನಡೆಸುವ ಭಾರತದ ಗಗನಯಾತ್ರಿ ಒಟ್ಟು 14 ದಿನ ಬಾಹಾಕಾಶ್ಯದಲ್ಲಿ ಕಾಲ ಕಳೆಯಲಿದ್ದಾರೆ. ಒಂದು ವೇಳೆ ಶುಭಾಂಶು ಶುಕ್ಲಾಗೆ ಕೊನೆ ಕ್ಷಣದಲ್ಲಿ ಏನಾದರೂ ಸಮಸ್ಯೆಯಾದರೇ, ಬ್ಯಾಕ್ ಅಪ್ ಪ್ಲಾನ್ ಆಗಿ ಪ್ರಶಾಂತ್ ನಾಯರ್ರನ್ನೂ ಕಳುಹಿಸಲು ತಿರ್ಮಾನಿಸಲಾಗಿದ್ದು ಅವರಿಗೂ ಸಹ ಟ್ರೈನ್ ಮಾಡಲಾಗ್ತಿದೆ.
ಈ ಗಗನಯಾನ ಯೋಜನೆ ಯಶಸ್ವಿಯಾದರೇ ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದ್ದು, ಹೀಗಾಗಿ ಸಕಲ ಸಿದ್ಧತೆ ನಡೆಸಿದೆ.. ಇದಷ್ಟೇ ಅಲ್ಲದೇ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ ಭೂಮಿಗೆ ಬಂದಾಗ ಶುಕ್ಲಾರನ್ನ ಸೇಫ್ ಆಗಿ ರೀಸಿವ್ ಮಾಡಿಕೊಳ್ಳಲು ತರಬೇತಿ ನಡೆಸಲಾಗಿದ್ದು, ಇಸ್ರೋ ಮತ್ತು ಭಾರತದ ನೌಕಾದಳ ಶುಭಾಂಶು ಶುಕ್ಲಾರನ್ನ ಸಮುದ್ರದಲ್ಲಿ ಇಳಿಸಿ ರಿಸೀವ್ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಿದೆ.
ಒಟ್ಟಾರೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವಾರು ಮೈಲಿಗಲ್ಲು ಸಾಧಿಸಿರುವ ಭಾರತದ ಇಸ್ರೋ, ಗಗನಯಾನ್ ಮಿಷನ್ ಕೈಗೊಂಡಿದ್ದು, ಈ ಯೋಜನೆಯೂ ಸಹ ಯಶಸ್ವಿಯಾಗಲಿ ಅಂತ ಎಲ್ಲರ ಹಾರೈಕೆಯಾಗಿದೆ.
ಇದನ್ನೂ ಓದಿ:ಗಡಿ ಮೀರಿದ ಪ್ರೀತಿಗೆ ದೇಶ-ಭಾಷೆಯ ಹಂಗಿಲ್ಲ; ಕರ್ನಾಟಕ ಸೊಸೆಯಾದ ಅಮೆರಿಕಾ ಯುವತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ