‘ನೀವು ಇಲ್ಲದಿದ್ದರೆ..’ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಪತ್ನಿ ಬಗ್ಗೆ ಶುಭಾಂಶು ಭಾವನಾತ್ಮಕ ಮಾತು.. ಹೇಳಿದ್ದೇನು?

author-image
Ganesh
Updated On
‘ನೀವು ಇಲ್ಲದಿದ್ದರೆ..’ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಪತ್ನಿ ಬಗ್ಗೆ ಶುಭಾಂಶು ಭಾವನಾತ್ಮಕ ಮಾತು.. ಹೇಳಿದ್ದೇನು?
Advertisment
  • ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಶುಭಾಂಶು ಶುಕ್ಲಾ
  • ನನ್ನ ಭುಜದಲ್ಲಿ ಭಾರತದ ತಿರಂಗಾ ಧ್ವಜ ಇದೆ -ಶುಭಾಂಶು
  • ಶುಭಾಂಶು ಸೇರಿ ನಾಲ್ವರು ಗಗನಯಾನಿಗಳು ಪ್ರಯಾಣ

ಭಾರತದ ಹೆಮ್ಮೆಯ ಗಗನಯಾನಿ ಶುಭಾಂಶು ಶುಕ್ಲಾ (Shubhanshu Shukla) ಅವರು ಇಂದು ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ. ಌಕ್ಸಿಯೋಂ ನೌಕೆ (Axiom Mission 4)ಯನ್ನು ಹೊತ್ತು Falcon-9 rocket ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ನೌಕೆಯಲ್ಲಿ ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳಿದ್ದಾರೆ. ಭಾರತದ ಶುಭಾಂಶು ಶುಕ್ಲಾ, ಅಮೆರಿಕಾದ ಪೆಗ್ಗಿ ವಿಟ್ಲನ್, ಪೋಲೆಂಡ್​ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಕಪು ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಭಾರತ.. ಶುಭಾಂಶು ಶುಕ್ಲಾರಿದ್ದ ನೌಕೆ ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದ ಫಾಲ್ಕನ್ ರಾಕೆಟ್

publive-image

ಪ್ರಯಾಣಕ್ಕೂ ಮುನ್ನ ಹೇಳಿದ್ದೇನು..?

ಬಾಹ್ಯಾಕಾಶ ಯಾತ್ರೆಗೂ ಮುನ್ನ ಭಾರತೀಯರನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನ್ನಾಡಿರುವ ಶುಭಾಂಶು ಶುಕ್ಲಾ.. ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ. ಬಹಳ ವರ್ಷಗಳ ಬಳಿಕ ನಾವು ಅಂತರೀಕ್ಷಕ್ಕೆ ಹೋಗುತ್ತಿದ್ದೇವೆ. ಈ ಯಾತ್ರೆ ಬಹಳ ಅದ್ಭುತವಾಗಿದೆ. ನನ್ನ ಜೊತೆ ನನ್ನ ಭುಜದಲ್ಲಿ ಭಾರತ ತಿರಂಗಾ ಧ್ವಜ ಇದೆ. ಇದು ನಾನು ನಿಮ್ಮ ಜೊತೆ ಇದ್ದೇನೆ ಎಂದು ಹೇಳುತ್ತಿದೆ. ಭಾರತದ ದೇಶವಾಸಿಗಳೆಲ್ಲಾ ಈ ಯಾತ್ರೆಯ ಭಾಗವಾಗಿ ಎಂದು ನಾನು ಬಯಸುತ್ತೇನೆ. ನೀವು ಇಷ್ಟೇ ಉತ್ಸಾಹ, ಹುಮ್ಮಸ್ಸು ತೋರಿಸಿ. ನೀವೆಲ್ಲಾ ಸೇರಿಕೊಂಡು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಯಾತ್ರೆ ಆರಂಭಿಸೋಣ. ಧನ್ಯವಾದ, ಜೈ ಹಿಂದ್, ಜೈ ಭಾರತ್ ಎಂದು ಮಾತು ಮುಗಿದಿದ್ದಾರೆ.

ಇದನ್ನೂ ಓದಿ: ಶುಭಾಂಶು ಶುಕ್ಲಾರ ಗಗನಯಾನಕ್ಕಾಗಿ ಭಾರತ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತಾ..?

ಇದಕ್ಕೂ ಮೊದಲು ಪತ್ನಿ ಕಾಮ್ನಾ ಬಗ್ಗೆ ಶುಭಾಂಶು ಶುಕ್ಲಾ ಭಾವನಾತ್ಮಕ ಪೋಸ್ಟ್ ಮಾಡಿದ್ದರು. ನೀವು ಇಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಅಂತ ಪೋಸ್ಟ್​​​ ಮಾಡಿದ್ದರು. ಬಾಹ್ಯಾಕಾಶಕ್ಕೆ ಯಾರೂ ಏಕಾಂಗಿಯಾಗಿ ಹೋಗುವುದಿಲ್ಲ. ಅದಕ್ಕೆ ಅನೇಕರು ಹೆಗಲಾಗುತ್ತಾರೆ. ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. ಆ ಪೋಸ್ಟ್ ಇಲ್ಲಿದೆ.

ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ ಯಾರು..? ಅವರು ಏನು ಓದಿದ್ದಾರೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment