ತಂಡದ ಹಿತಕ್ಕಾಗಿ ತ್ಯಾಗ! ರಶೀದ್​​ಗೆ ಅಗ್ರಸ್ಥಾನ ಬಿಟ್ಟುಕೊಟ್ಟ ನಿಸ್ವಾರ್ಥಿ ಗಿಲ್

author-image
AS Harshith
Updated On
ತಂಡದ ಹಿತಕ್ಕಾಗಿ ತ್ಯಾಗ! ರಶೀದ್​​ಗೆ ಅಗ್ರಸ್ಥಾನ ಬಿಟ್ಟುಕೊಟ್ಟ ನಿಸ್ವಾರ್ಥಿ ಗಿಲ್
Advertisment
  • ಶುಭ್​ಮನ್ ಗಿಲ್ ಮೊದಲ ರಿಟೈನ್ ಆಯ್ಕೆ ಅಲ್ಲ..!
  • ಧೋನಿ, ಕೊಹ್ಲಿಯನ್ನ ನೆನಪಿಸಿದ ಶುಭ್​ಮನ್ ಗಿಲ್..!
  • ಶುಭ್​ಮನ್ ನಿರ್ಧಾರದ ಹಿಂದಿದೆ ಹೀಗೊಂದು ಲೆಕ್ಕಾಚಾರ

ಲೀಡರ್ ಅಂದ್ರೆ, ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುವುದು ಮಾತ್ರವಲ್ಲ. ತಂಡದ ಹಿತಕ್ಕಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ನಿಜವಾದ ಲೀಡರ್​ನ ಕಾರಣ. ಇಂಥ ನಿರ್ಧಾರ ತೆಗೆದುಕೊಂಡಿರುವ ಶುಭ್​ಮನ್ ಗಿಲ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯನ್ನ ನೆನಪಿಸಿದ್ದಾರೆ. ಅಂದ್ಹಾಗೆ ಶುಭ್​ಮನ್ ತೆಗೆದುಕೊಂಡ ಆ ನಿರ್ಧಾರಕ್ಕೂ, ಮಾಹಿ, ಕೊಹ್ಲಿಗೂ ಏನ್ ಸಂಬಂಧ. ಈ ಸ್ಟೋರಿ ಓದಿ.

ಸೀಸನ್​​-18ರ ಐಪಿಎಲ್ ರಿಟೈನ್​​ ರಿಲೀಸ್ ಲೆಕ್ಕಾಚಾರಗಳು ದಿನೇ ದಿನೇ ರೋಚಕತೆ ಪಡೆದುಕೊಳ್ಳುತ್ತಿದೆ. ಕ್ಷಣ ಕ್ಷಣಕ್ಕೂ ಹೊರ ಬೀಳ್ತಿರುವ ಸುದ್ದಿಗಳು ಫ್ಯಾನ್ಸ್​ ಕುತೂಹಲಕ್ಕೆ ಕಾರಣವಾಗ್ತಿದೆ. ಇಂದು ಸಂಜೆಯೊಳಗೆ ಯಾವ್ಯಾವ ತಂಡಗಳು ಯಾರನ್ನ ಉಳಿಸಿಕೊಳ್ಳುತ್ತೆಂಬ ಕ್ಲಿಯರ್ ಕಟ್ ಅನ್ಸರ್​ ಸಿಗುತ್ತೆ. ಆದ್ರೆ, ಈ ನಡುವೆ ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಶುಭ್​ಮನ್ ಗಿಲ್​ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಇದು CSK ಫ್ಯಾನ್ಸ್​ಗೆ ಆಘಾತದ ಸುದ್ದಿ; 14 ವರ್ಷಗಳ ಜರ್ನಿ.. ಚೆನ್ನೈಗೆ ತೊರೆಯಲು ಮುಂದಾದ ಜಡೇಜಾ? 

publive-image

ಹೌದು! ಗುಜರಾತ್ ಟೈಟನ್ಸ್​ ಉಳಿಸಿಕೊಳ್ಳುವ ಆಟಗಾರರನ್ನು ಬಹುತೇಕ ಅಂತಿಮಗೊಳಿಸಿದೆ. ಮುಂದಿನ ಸೀಸನ್​ನಲ್ಲೂ ಶುಭ್​ಮನ್ ಗಿಲ್, ನಾಯಕರಾಗಿಯೇ ಮುಂದುವರಿಯಲಿದ್ದಾರೆ. ಆದ್ರೆ, ತಂಡದ ಹಿತಕ್ಕಾಗಿ ತೆಗೆದುಕೊಂಡಿರುವ ಒಂದು ನಿರ್ಧಾರ ಗಿಲ್​ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿದೆ.

ಸ್ಟಾರ್ ಸ್ಪಿನ್ನರ್​​ ರಶೀದ್ ಫಸ್ಟ್​ ರಿಟೈನ್ ಚಾಯ್ಸ್​..!

ಶುಭ್​ಮನ್ ಗಿಲ್, ಗುಜರಾತ್​ ಟೈಟನ್ಸ್​ ತಂಡದ ನಾಯಕನಾರಾಗಿಯೇ ಮುಂದುವರಿಯಲಿದ್ದಾರೆ. ಆದರೆ, ಫಸ್ಟ್​ ರಿಟೈನ್ ಆಯ್ಕೆ ಶುಭ್​ಮನ್ ಗಿಲ್ ಅಲ್ಲ. ಮತ್ಯಾರು ಅಂದ್ರೆ, ಅಫ್ಘಾನ್ ಸ್ಟಾರ್​ ರಶೀದ್ ಖಾನ್.

ಇದನ್ನೂ ಓದಿ: IPL 2025: ಎಷ್ಟು ಆಟಗಾರರನ್ನ ರಿಟೈನ್ ಮಾಡಬಹುದು? ರಿಟೈನ್ ಆಟಗಾರರಿಗೆ ಸಿಗೋ ಹಣವೆಷ್ಟು ಗೊತ್ತಾ?

ಹೌದು! ಅಫ್ಘಾನ್​​​​​​​​​​​​​​​​​ ಸ್ಟಾರ್ ಆಟಗಾರ ರಶೀದ್ ಖಾನ್, ಮೊದಲ ರಿಟೈನ್ ಆಗಿದ್ದಾರೆ. 2ನೇ ರಿಟೈನರ್ ಆಗಿ ಶುಭ್​ಮನ್ ಗಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನಾಗಿ ಶುಭ್​ಮನ್, ಮೊದಲ ರಿಟೈನ್​ ಆಗಿ ಯಾಕಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇದಕ್ಕೆ ಕಾರಣ ಶುಭ್​ಮನ್ ಗಿಲ್.

publive-image

ಟಾಪ್ ರಿಟೈನ್ಶನ್​ ತ್ಯಾಗ!

ಮೊದಲ ರಿಟೈನ್, ಹೆಚ್ಚು ಹಣ ಸಿಗಲಿಲ್ಲ ಎಂದು ಸಾಲು ಸಾಲು ಆಟಗಾರರು, ಫ್ರಾಂಚೈಸಿಗಳನ್ನ ತೊರೆದಿದ್ದಾರೆ. ಆದ್ರೆ, ಈ ವಿಚಾರದಲ್ಲಿ ಶುಭ್​ಮನ್, ಭಿನ್ನವಾಗಿ ಕಾಣ್ತಿದ್ದಾರೆ. 25ರ ವಯಸ್ಸಿನಲ್ಲೂ ಗಿಲ್, ಪ್ರಬುದ್ಧತೆ ಮರೆದಿದ್ದಾರೆ. ಹಣದ ಬದಲಾಗಿ ತಂಡದ ಹಿತಕ್ಕೆ ಪ್ರಾಮುಖ್ಯತೆ ನೀಡಿರುವ ಶುಭ್​ಮನ್, ಮ್ಯಾಚ್ ವಿನ್ನರ್​ ರಶೀದ್ ಖಾನ್​ಗೆ ಮೊದಲ ರಿಟೈನ್​ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಗುಜರಾತ್​ ಟೈಟನ್ಸ್​, ಲೆಗ್ ಸ್ಪಿನ್ನರ್ ರಶೀದ್​ಗೆ 18 ಕೋಟಿ ನೀಡಿದ ಮೊದಲ ರಿಟೈನ್ ಮಾಡಿಕೊಳ್ಳುತ್ತಿದೆ. ಇನ್​ಫ್ಯಾಕ್ಟ್​ ಇದಕ್ಕೆ ರಶೀದ್ ಖಾನ್ ಅರ್ಹರೂ ಕೂಡ.

ತ್ಯಾಗಮಹಿ ಶುಭ್​ಮನ್ ನಿರ್ಧಾರದ ಹಿಂದಿದೆ ಲೆಕ್ಕಾಚಾರ!

ಶುಭ್​ಮನ್ ಗಿಲ್, ರಶೀದ್ ಖಾನ್​​​​ ಹೆಸರು ಸೂಚಿಸಿರುವ ಹಿಂದೆ ಭವಿಷ್ಯದ ಲೆಕ್ಕಾಚಾರ ಇದೆ. ಮುಂದಿನ ಆವೃತ್ತಿಯಲ್ಲಿ ಬಲಿಷ್ಠ ತಂಡ ಕಟ್ಟುವ ಉದ್ದೇಶ ಹೊಂದಿರುವ ಗಿಲ್​, ನಂ.1 ರಿಟೈನ್ ಸ್ಪಾಟ್​ನ ರಶೀದ್​ಗೆ ನೀಡುವ ಮೂಲಕ​​ ಅಸಮಾಧಾನದ ಹೊಗೆಯಾಡದಂತೆ ನೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮಿಂದ ಉಳಿಯುವ ಹಣದಿಂದ ಪರ್ಸ್​ ಹೆಚ್ಚಾಗುವಂತೆ ಮಾಡಿರುವ ಗಿಲ್, ಮೆಗಾ ಹರಾಜಿನಲ್ಲಿ ಬಳಕೆಯಾಗುವಂತೆ ನಡೆದುಕೊಂಡಿದ್ದಾರೆ.

publive-image

ಇದಿಷ್ಟೇ ಅಲ್ಲ. ರಶೀದ್ ಖಾನ್, ಗುಜರಾತ್ ತಂಡದ ಟ್ರಂಪ್ ಕಾರ್ಡ್​ ಆ್ಯಂಡ್ ಮ್ಯಾಚ್ ವಿನ್ನರ್ ಪ್ಲೇಯರ್. ಸ್ಮರಣೀಯ ಗೆಲುವುಗಳ ಹಿಂದಿನ ರೂವಾರಿ ಈತನೇ ಆಗಿದ್ದಾರೆ. ಇದೇ ಕಾರಣಕ್ಕೆ ರಶೀದ್​, ಫಸ್ಟ್ ರಿಟೈನ್​ಗೆ ಸೂಕ್ತ ಅನ್ನೋದು ಶುಭ್​ಮನ್ ಅಭಿಮತವಾಗಿದೆ.

ಜಡೇಜಾಗಾಗಿ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದ ಮಾಹಿ

ಶುಭ್​ಮನ್ ಗಿಲ್​ರ ಈ ನಿರ್ಧಾರ ಲೆಜೆಂಡರಿ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿಯನ್ನೇ ನೆನಪಿಸಿದೆ. ಯಾಕಂದ್ರೆ, 2022ರ ಸೀನಸ್ ಆರಂಭಕ್ಕೂ ಮುನ್ನ ಧೋನಿ, ಇಂಥದ್ದೇ ನಿರ್ಧಾರ ತೆಗೆದುಕೊಂಡಿದ್ದರು. ಆಲ್​ರೌಂಡರ್​​ ರವೀಂದ್ರ ಜಡೇಜಾಗಾಗಿ ಮೊದಲ ಸ್ಥಾನ ಬಿಟ್ಟುಕೊಟ್ಟಿದ್ದ ಧೋನಿ, 2ನೇ ರಿಟೈರ್ ಆಟಗಾರನಾಗಿ 12 ಕೋಟಿಗೆ ತೃಪ್ತಿ ಪಟ್ಟಿದ್ದರು. ಮೊದಲ ಸ್ಥಾನದಲ್ಲಿದ್ದ ಜಡೇಜಾ, 16 ಕೋಟಿ ಜೇಬಿಗೆ ಇಳಿಸಿದ್ರು.

ಧೋನಿನೇ ಅಲ್ಲ.! ವಿರಾಟ್​ ಕೊಹ್ಲಿ ಸಹ ವೇತನ ಕಡಿತಕ್ಕೆ ಸೂಚಿಸಿದ್ದರು. ತಂಡದ ಹಿತ ದೃಷ್ಟಿಯಿಂದ 17 ಕೋಟಿಯ ವೇತನದ ಬದಲಾಗಿ 15 ಕೋಟಿ ಪಡೆದುಕೊಂಡಿದ್ದರು. ಇದರಿಂದ ಉಳಿದ 2 ಕೋಟಿ ಆರ್​ಸಿಬಿ ಮೆಗಾ ಹರಾಜಿನಲ್ಲಿ ವಿನಯೋಗಿಸಿತ್ತು. ಆದ್ರೀಗ ಇಂಥದ್ದೇ ಹಾದಿಯಲ್ಲಿ ಶುಭ್​ಮನ್ ಗಿಲ್, ಸಾಗಿದ್ದಾರೆ. ತನ್ನ ವೈಯಕ್ತಿಕ ಲಾಭಕ್ಕಿಂತ ತಂಡದ ಹಿತಕ್ಕೆ ಆದ್ಯತೆ ನೀಡಿದ್ದಾರೆ. ಇದು ಶುಭ್​ಮನ್​​​​​​​​​​​​​​​​​​​ ಗಿಲ್​​ನ ಹೃದಯ ವೈಶಾಲ್ಯತೆಯನ್ನಷ್ಟೇ ತೋರಿಸ್ತಿಲ್ಲ. ತನ್ನಲ್ಲಿನ ನಾಯಕತ್ವದ ಗುಣಗಳನ್ನು ತೋರಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment