ರೋಹಿತ್​​, ಗಂಭೀರ್​ ನಂಬಿಕೆ ಮಣ್ಣುಪಾಲು; ಸುವರ್ಣಾವಕಾಶ ಕೈ ಚೆಲ್ಲಿದ ಶುಭ್ಮನ್​ ಗಿಲ್​​

author-image
Ganesh Nachikethu
Updated On
ರೋಹಿತ್​​, ಗಂಭೀರ್​ ನಂಬಿಕೆ ಮಣ್ಣುಪಾಲು; ಸುವರ್ಣಾವಕಾಶ ಕೈ ಚೆಲ್ಲಿದ ಶುಭ್ಮನ್​ ಗಿಲ್​​
Advertisment
  • ಸದ್ಯ ನಡೆಯುತ್ತಿರೋ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್ ಪಂದ್ಯ
  • ಟೀಮ್​ ಇಂಡಿಯಾಗೆ ಆಸ್ಟ್ರೇಲಿಯಾ ತಂಡ 265 ರನ್​ಗಳ ಟಾರ್ಗೆಟ್​
  • ಸಿಕ್ಕ ಸುವರ್ಣಾವಕಾಶ ಕೈ ಚೆಲ್ಲಿದ ಟೀಮ್​ ಇಂಡಿಯಾದ ಶುಭ್ಮನ್​​ ಗಿಲ್​

ಸದ್ಯ ನಡೆಯುತ್ತಿರೋ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಆಸ್ಟ್ರೇಲಿಯಾ 265 ರನ್​ಗಳ ಟಾರ್ಗೆಟ್​ ನೀಡಿದೆ.

ಟೀಮ್​ ಇಂಡಿಯಾ ಪರ ಶುಭ್ಮನ್​ ಗಿಲ್​​ ಇನ್ನಿಂಗ್ಸ್​ ಶುರು ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​​ ಗಿಲ್​ ಸಿಕ್ಕ ಸುವರ್ಣಾವಕಾಶ ಕೈಚೆಲ್ಲಿದರು.

ಲೀಗ್​ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ ಶುಭ್ಮನ್​​ ಗಿಲ್​​ ಶತಕ ಸಿಡಿಸಿ ದಾಖಲೆ ಬರೆದರು. ಪಾಕಿಸ್ತಾನ ವಿರುದ್ಧ ನಡೆದ ರೋಚಕ ಪಂದ್ಯದಲ್ಲೂ ತಾಳ್ಮೆಯ ಬ್ಯಾಟಿಂಗ್​ ಮಾಡಿ 46 ರನ್​ ಕಲೆ ಹಾಕಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಕೈ ಕೊಟ್ಟ ಶುಭ್ಮನ್​ ಗಿಲ್​

ನ್ಯೂಜಿಲೆಂಡ್​ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಕೇವಲ 2 ರನ್​ಗೆ ಔಟಾಗಿದ್ದ ಶುಭ್ಮನ್​ ಗಿಲ್​ ಇಂದು ನಡೆದ ಚಾಂಪಿಯನ್ಸ್​ ಟ್ರೋಫಿಯ ಸೆಮಿಫೈನಲ್​​ ಪಂದ್ಯದಲ್ಲಿ ಕೇವಲ 8 ರನ್​ಗೆ ಔಟಾಗಿದ್ದಾರೆ. ಈ ಮೂಲಕ ತನ್ನ ವೃತ್ತಿ ಜೀವನದಲ್ಲಿ ಸಿಕ್ಕ ದೊಡ್ಡ ಅವಕಾಶವನ್ನೇ ಕೈ ಚೆಲ್ಲಿದ್ದಾರೆ. ಇವರು ಭಾರತ ತಂಡವನ್ನು ಗೆಲ್ಲಿಸಿದ್ದಾರೆ ಬಿಸಿಸಿಐ ಸೆಲೆಕ್ಷನ್​ ಕಮಿಟಿಗೆ ಮತ್ತಷ್ಟು ನಂಬಿಕೆ ಬರುತ್ತಿತ್ತು. ಗಿಲ್​ ಕ್ಯಾಪ್ಟನ್​ ರೇಸ್​ನಲ್ಲಿರೋ ಕಾರಣ ಇವರ ಆಟದ ಮೇಲೆ ಎಲ್ಲರ ಗಮನ ಇರುತ್ತದೆ.

ಟೀಮ್ ಇಂಡಿಯಾದ ಆಟಗಾರ ಗಿಲ್​ಗೆ ಸತತ ಅವಕಾಶ ನೀಡಲಾಗುತ್ತಿದೆ. ಆದರೆ, ಕ್ಯಾಪ್ಟನ್​ ರೋಹಿತ್​​ ಶರ್ಮಾ ಮತ್ತು ಮುಖ್ಯ ಕೋಚ್​​ ಗೌತಮ್​ ಗಂಭೀರ್​ ತನ್ನ ಮೇಲಿಟ್ಟ ನಂಬಿಕೆಯನ್ನು ಇವರು ಕೆಲವೊಮ್ಮೆ ಹುಸಿಗೊಳಿಸುತ್ತಾರೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಭಾರತ ಏಕದಿನ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಕಷ್ಟ.

ಇದನ್ನೂ ಓದಿ:ನಟಿ ತಮನ್ನಾ-ವಿಜಯ್ ಮಧ್ಯೆ ಬ್ರೇಕಪ್​​; ಇಬ್ಬರ ಸಂಬಂಧ ಮುರಿದು ಬೀಳಲು ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment