/newsfirstlive-kannada/media/post_attachments/wp-content/uploads/2024/06/Ridhima-Pandit-1.jpg)
ಯಂಗ್​​ ಕ್ರಿಕೆಟರ್​ ಶುಭ್​​ಮನ್​​​​​ ಗಿಲ್​​​ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರ್ತಾರೆ. ಅಂತಹದೇ ಬಿಗ್ ಟಾಪಿಕ್​​ನಿಂದ ಗಿಲ್ ಹೆಸರು ಇದೀಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಕ್ರಿಕೆಟ್​​ನಿಂದಂತೂ ಅಲ್ಲವೇ ಅಲ್ಲ, ಮತ್ಯಾವುದು ಅಂತೀರಾ ? ಹಾಗಿದ್ರೆ ಈ ಸ್ಟೋರಿನಾ ಮಿಸ್ ಮಾಡ್ದೇ ನೋಡಿ.
ಕಣ್ಣಲ್ಲೇ ಕೊಲ್ಲುವ ನೋಟ. ಶುಭ್ರ ಚಂದಿರನ ಮೈಮಣ್ಣ. ಹೃದಯ ಡಿಸ್ಟರ್ಬ್​ ಮಾಡುವ ಆ ಸ್ಮೈಲ್​​​​​​​. ಪಡ್ಡೆ ಹುಡುಗ್ರು ಕ್ಲೀನ್​​ಬೋಲ್ಡ್​ ಆಗೋಕೆ ಇಷ್ಟೆ ಸಾಕಲ್ವಾ? ಹೀಗೆ ಸೌಂದರ್ಯ ಗಣಿಯನ್ನ ಮೈಮೇಲೆ ತುಂಬಿಕೊಂಡಿರೋ ಈಕೆಯ ಹೆಸರು ರಿಧಿಮಾ ಪಂಡಿತ್​​​. ಇದೀಗ ಈಕೆಯ ಸೌಂದರ್ಯಕ್ಕೆ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನೊಬ್ಬ ಮನಸೋತಿದ್ದಾನೆ. ಆತನು ಈಕೆಯಂತೆ ಸ್ಪುರದ್ರೂಪಿ. ಆತ ಮತ್ಯಾರು ಅಲ್ಲ, ಯಂಗ್ ಸೆನ್ಷೆಷನ್​​​ ಶುಭ್​​ಮನ್ ಗಿಲ್​​​
[caption id="attachment_67479" align="alignnone" width="800"]
ರಿಧಿಮಾ ಪಂಡಿತ್​[/caption]
ರಿಧಿಮಾ ಪ್ರೇಮದ ಬಲೆಗೆ ಬಿದ್ದ ಶುಭ್​​ಮನ್ ಗಿಲ್​​​​​
ಒಂದೆಡೆ ಟೀಮ್ ಇಂಡಿಯಾ ವಿಶ್ವಕಪ್​​​ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ. ಇತ್ತ ರಿಸರ್ವ್​ ಪ್ಲೇಯರ್​​​​​​​​ ಆಗಿರೋ ಶುಭ್​​ಮನ್ ಗಿಲ್​ ಹೆಸರು ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಅದಕ್ಕೆಲ್ಲಾ ಕಾರಣ ರಿಧಿಮಾ ಪಂಡಿತ್​. ಹೌದು, ಸುಂದರ ರೂಪವನ್ನೇ ಹೊತ್ತ ರಿಧಿಮಾ ಜೊತೆ ಶುಭ್​ಮನ್ ಗಿಲ್ ಹೆಸರು ತಳಕು ಹಾಕಿಕೊಂಡಿದೆ.
[caption id="attachment_67480" align="alignnone" width="800"]
ರಿಧಿಮಾ ಪಂಡಿತ್​[/caption]
33 ವರ್ಷದ ರಿಧಿಮಾ ಜೊತೆ ಗಿಲ್ ಮದುವೆ..?
ಪ್ಲೇಬಾಯ್ ಗಿಲ್​​ ಸದ್ದಿಲ್ಲದೇ ರಿಧಿಮಾ ಜೊತೆ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಗಾಸಿಪ್​ ಹಬ್ಬಿದೆ. ರಿಧಿಮಾ ವಯಸ್ಸಿನಲ್ಲಿ ಗಿಲ್​​​ಗಿಂತ 10 ವರ್ಷ ದೊಡ್ಡವರು. ಪ್ರೇಮಕ್ಕೆ ವಯಸ್ಸಿನ ಹಂಗಿಲ್ಲ ನೋಡಿ. ಹೀಗಾಗಿ ಕಿರುತೆರೆ ನಟಿ ಲವ್ವಲ್ಲಿ ಬಿದ್ದಿರೋ ಗಿಲ್​​​, 2024ರ ಡಿಸೆಂಬರ್​​ನಲ್ಲಿ ರಿಧಿಮಾ ಜೊತೆ ಹಸೆಮಣೆ ಏರಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಆದರೆ ಈ ವದಂತಿಗೆ ರಿಧಿಮಾ ಸ್ಪಷ್ಟನೆ ನೀಡಿದ್ದು, ಇದರಲ್ಲಿ ಯಾವುದು ನಿಜವಿಲ್ಲ ಎಂದು ಹೇಳಿದ್ದಾರೆ.
[caption id="attachment_67482" align="alignnone" width="800"]
ರಿಧಿಮಾ ಪಂಡಿತ್​[/caption]
ಯಾರು ಈ ಚೆಂದುಳ್ಳ ಚೆಲುವೆ ರಿಧಿಮಾ ಪಂಡಿತ್​​..?
ರಿಧಿಮಾ ಪಂಡಿತ್​​. ಮುಂಬೈನ ಕಿರುತೆರೆ ನಟಿ. ಬಣ್ಣದ ಲೋಕಕ್ಕೆ ಬಂದು 8 ವರ್ಷ ಕಳೆದಿವೆ. ಹಲವು ಹಿಂದಿ ಧಾರವಾಹಿಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. 'ಬಹು ಹಮಾರಿ ರಜ್ನಿ ಕಾಂತ್​​​​​​​​​​​​​​​​​​​​​​​​​​' ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಸೋಷಿಯಲ್ ಮೀಡಿಯಾದಲ್ಲಿ ಕೂಡ ರಿಧಿಮಾ ಹವಾ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ 2.3 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ.
[caption id="attachment_67484" align="alignnone" width="800"]
ರಿಧಿಮಾ ಪಂಡಿತ್​[/caption]
ಇದನ್ನೂ ಓದಿ: ಸಿಲಿಕಾನ್​ ಸಿಟಿ ಮಂದಿಗೆ ಹಾವುಗಳ ಕಾಟ! ವಿಷಜಂತುಗಳು ಕಂಡ್ರೆ ಈ ಸಹಾಯವಾಣಿಗೆ ಕರೆ ಮಾಡಿ
ಸಾರಾ ಜೊತೆ ಶುಭ್​​ಮನ್ ಗಿಲ್ ಬ್ರೇಕಪ್​​​..!
ರಿಧಿಮಾ ಜೊತೆ ಗಿಲ್​ ಹೆಸರು ತಳುಕು ಹಾಕಿಕೊಂಡ ಬೆನ್ನಲ್ಲೆ ಮಾಜಿ ಪ್ರೇಯಸಿ ಸಾರಾ ತೆಂಡುಲ್ಕರ್​​​ಗೆ ಗುಡ್​​ಬೈ ಹೇಳಿದ್ದಾರೆ ಎಂದು ಹೇಳಲಾಗ್ತಿದೆ. ಗಿಲ್​​​​, ಸಾರಾ ಜತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಸದ್ದು ಮಾಡ್ತಿತ್ತು. ಅನೇಕ ಬಾರಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ವು. ಆದ್ರೆ ಈ ಬಗ್ಗೆ ಗಿಲ್​ ಆಗ್ಲಿ ಅಥವಾ ಸಾರಾ ಆಗ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ.
[caption id="attachment_30734" align="alignnone" width="800"]
ಸಾರಾ ತೆಂಡುಲ್ಕರ್- ಶುಭ್ಮನ್[/caption]
ಇದನ್ನೂ ಓದಿ: ನಾನು ವಿಶ್ವಕಪ್ ಪಂದ್ಯ​ ವೀಕ್ಷಿಸಲು ಇಷ್ಟಪಡಲ್ಲ; ಆಯ್ಕೆ ಮಾಡದಿದ್ಕೆ ಅಹಂಕಾರದ ಮಾತಾಡಿದ ಪರಾಗ್!
ಸ್ಪೇನ್ ಲೇಡಿ ಮಾರಿಯಾ ಜೊತೆ ಹೆಸರು ತಳುಕು..?
ಬರೀ ಸಾರಾ ತೆಂಡುಲ್ಕರ್​​, ರಿಧಿಮಾ ಪಂಡಿತ್​​​​​​ ಜೊತೆ ಅಷ್ಟೇ ಅಲ್ಲ ಸ್ಪೇನ್​ ಲೇಡಿ ಮಾರಿಯಾ ಅರೋಯೋಗ್ ಜತೆನೂ ಗಿಲ್ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಗಾಸಿಪ್​ ಹಬ್ಬಿತ್ತು. ಮಾರಿಯಾ, ಐಪಿಎಲ್​ ವೇಳೆ ಗುಜರಾತ್​​ ಪಂದ್ಯವನ್ನ ವೀಕ್ಷಿಸಿದ್ರು. ಅಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿ ಮಾರಿಯಾ ಗಿಲ್​ರನ್ನ ಫಾಲೋ ಮಾಡ್ತಿದ್ದು, ಲವ್ ಕಹಾನಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದ್ರೆ ಇಬ್ಬರ ಸಂಬಂಧ ಇಲ್ಲಿ ತನಕ ಬರೀ ಗಾಸಿಪ್ ಆಗಿ ಉಳಿದುಕೊಂಡಿದೆ.
[caption id="attachment_67486" align="alignnone" width="800"]
ಶುಭ್ಮನ್​ ಗಿಲ್​- ಮಾರಿಯಾ-ಸಾರಾ ತೆಂಡುಲ್ಕರ್​[/caption]
ಒಟ್ಟಿನಲ್ಲಿ ಪ್ಲೇಬಾಯ್​​ ಗಿಲ್​​​ ಡೇಟಿಂಗ್ ವಿಚಾರವಾಗಿ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ನಿಜಕ್ಕೂ ಗಿಲ್​​​ ಸಾರಾಗೆ ಕೊಟ್ಟು ರಿಧಿಮಾ ಪ್ರೇಮದ ಬಲೆಗೆ ಬಿದ್ದಿದ್ದಾರಾ? ಇಲ್ಲ, ಇದು ಬರೀ ಗಾಸಿಪ್​​ ಸುದ್ದಿನಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us