/newsfirstlive-kannada/media/post_attachments/wp-content/uploads/2023/08/Kohli-and-Gill.jpg)
ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಬ್ಯಾಟರ್​​ಗಳ ಅಬ್ಬರ ಮುಂದುವರಿದಿದೆ. ಸ್ಟಾರ್​ ಆಟಗಾರರು ಫಾರ್ಮ್​​ಗೆ ಬಂದಿದ್ದು, ಮ್ಯಾನೇಜ್ಮೆಂಟ್​​​ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಮಧ್ಯೆ ಭಾರತದ ಸೂಪರ್​ ಸ್ಟಾರ್​ ಬ್ಯಾಟರ್​​ ಶುಭ್ಮನ್​​ ಗಿಲ್​​ಗೆ ಐಸಿಸಿಯಿಂದ ಭರ್ಜರಿ ಗಿಫ್ಟ್​ ಸಿಕ್ಕಿದೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​​ ಶುಭ್ಮನ್​ ಗಿಲ್​ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಜತೆಗೆ ಇತ್ತೀಚೆಗೆ ಸ್ಥಿರ ಪ್ರದರ್ಶನ ನೀಡುತ್ತಿರೋ ವಿರಾಟ್​ ಕೊಹ್ಲಿ ಕೂಡ ಱಂಕಿಂಗ್​​ನಲ್ಲಿ ಬಡ್ತಿ ಪಡೆದಿದ್ದಾರೆ.
ಗಿಲ್​ ಅಮೋಘ ಬ್ಯಾಟಿಂಗ್​​
ಸದ್ಯ ನಡೆಯುತ್ತಿರೋ ಐಸಿಸಿ ಮೆಗಾ ಟೂರ್ನಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಓಪನಿಂಗ್​ ಬ್ಯಾಟರ್​ ಶುಭ್ಮನ್​ ಗಿಲ್​ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇವರು ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ರು. ತಾನು ಎದುರಿಸಿದ 129 ಎಸೆತಗಳಲ್ಲಿ ಬ್ಯಾಕ್​ ಟು ಬ್ಯಾಕ್​ 9 ಫೋರ್​​, 2 ಸಿಕ್ಸರ್ ಚಚ್ಚಿ 101 ರನ್​​ ಬಾರಿಸಿದ್ರು.
ಈಗ ಗಿಲ್​ 817 ಅಂಕಗಳೊಂದಿಗೆ ಐಸಿಸಿ ಱಂಕಿಂಗ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮೆಗಾ ಟೂರ್ನಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರೋ ಪಾಕ್​ ತಂಡದ ಮಾಜಿ ಕ್ಯಾಪ್ಟನ್​ ಬಾಬರ್​ ಅಜಮ್​ 770 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ, ರೋಹಿತ್​ಗೆ ಎಷ್ಟನೇ ಸ್ಥಾನ?
ಟೀಮ್ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಇತ್ತೀಚೆಗೆ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇದರ ಪರಿಣಾಮ ಇವರು 757 ಅಂಕಗಳೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ 679 ರೇಟಿಂಗ್ ಪಾಯಿಂಟ್ಸ್​​ ನೆರವಿನಿಂದ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ 15ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us