newsfirstkannada.com

IND vs ENG: ಒಂದೇ ಇನ್ನಿಂಗ್ಸ್​ನಲ್ಲಿ 4 ಕ್ಯಾಚ್​​ ಹಿಡಿದ ಗಿಲ್​, 150 ವಿಕೆಟ್​ ಪಡೆದ ಬೂಮ್ರಾ; ಟಾಪ್- 5 ಕ್ರಿಕೆಟ್​ ನ್ಯೂಸ್​ ಇಲ್ಲಿವೆ!

Share :

Published February 4, 2024 at 3:30pm

Update February 4, 2024 at 3:31pm

    ಮೈದಾನದಲ್ಲಿ ಮುದ್ದು ಮಗಳ ಜತೆ ಆಟವಾಡಿದ ಮೇಗನ್​​ ಶುಟ್​​

    150 ವಿಕೆಟ್​ ಕಬಳಿಸಿದ ಏಷ್ಯಾದ ಎಷ್ಟನೇ ಬೌಲರ್ ಬೂಮ್ರಾ?

    ಬೌಂಡ್ರಿ ಬಾರಿಸಲು ಯತ್ನಿಸಿ ಹಿಟ್​ ವಿಕೆಟ್ ಆದ ಲಂಕಾ ಪ್ಲೇಯರ್

ವೈಜಾಗ್​​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​​ ಪಂದ್ಯದಲ್ಲಿ ಗಿಲ್​​​​​​ ಫೀಲ್ಡಿಂಗ್​ನಿಂದ ಸುದ್ದಿಯಾಗಿದ್ದಾರೆ. ಒಂದೇ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 4 ಕ್ಯಾಚ್​ಗಳನ್ನ​ ಹಿಡಿದು ಗಮನ ಸೆಳೆದಿದ್ದಾರೆ. ಓಲಿ ಪೋಪ್​​​, ಜಾನಿ ಬೇಸ್ಟೋವ್​​​, ರೇಹಾನ್ ಅಹ್ಮದ್​​​​ ಹಾಗೂ ಟಾಮ್​ ಹಾರ್ಟ್ಲಿ ಗಿಲ್​ಗೆ ಕ್ಯಾಚ್​ ನೀಡಿ ಹೊರನಡೆದ್ರು. ಇದೇ ಇನ್ನಿಂಗ್ಸ್​ನಲ್ಲಿ ಗಿಲ್​ ಮೊದಲ ಕ್ಯಾಚ್​ ಕೈಚೆಲ್ಲಿದ್ರು. ಬಳಿಕ ತಪ್ಪನ್ನ ತಿದ್ದಿಕೊಂಡು 4 ಕ್ಯಾಚ್​ ಹಿಡಿದು ಸೈ ಅನ್ನಿಸಿಕೊಂಡರು.

ಏಷ್ಯಾದ 2ನೇ ಶರವೇಗದ ಬೌಲರ್​

ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್​ಪ್ರೀತ್ ಬೂಮ್ರಾ ವೈಜಾಗ್ ಟೆಸ್ಟ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ ಪಡೆದ ಹಿರಿಮೆಗೆ ಭಾಜನರಾದ್ರು. ಆ ಮೂಲಕ 150 ವಿಕೆಟ್​ ಕಬಳಿಸಿದ ಏಷ್ಯಾದ 2ನೇ ಶರವೇಗದ ಬೌಲರ್ ಅನ್ನಿಸಿಕೊಂಡ್ರು. ವಕಾರ್​​​​​​​​​​ ಯೂನಿಸ್​​​​ 27 ಪಂದ್ಯಗಳಿಂದ ಈ ಸಾಧನೆ ಮಾಡಿದ್ರೆ, ಜಸ್​ಪ್ರೀತ್ ಬೂಮ್ರ 34 ಹಾಗೂ ಇಮ್ರಾನ್ ಖಾನ್​​ 37 ಇನ್ನಿಂಗ್ಸ್​ಗಳಲ್ಲಿ 150 ವಿಕೆಟ್​​​ ಕಬಳಿಸಿದ್ದಾರೆ.

ಮೈದಾನದಲ್ಲಿ ಮಗಳ ಜೊತೆ ಆಟವಾಡಿದ ಮೇಗನ್

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್​ ತಂಡದ ಬೌಲರ್​​ ಮೇಗನ್​​ ಶುಟ್​​ ಮೈದಾನದಲ್ಲಿ ಮಗಳ ಜೊತೆ ಕಾಣಿಸಿಕೊಂಡರು. ಅಡಿಲೇಡ್​ನಲ್ಲಿ ಆಸಿಸ್​ ಹಾಗೂ ಆಫ್ರಿಕಾ ನಡುವೆ ಮೊದಲ ಏಕದಿನ ಪಂದ್ಯ ನಡೆದಿತ್ತು. ಗೆಲುವಿನ ಬಳಿಕ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮಗಳು ರೈಲಿಯನ್ನ ಅಂಗಳಕ್ಕೆ ಕರೆದಿದ್ದಾರೆ. ಮುದ್ದಿನ ಮಗಳು ಮೈದಾನಕ್ಕೆ ಬರುತ್ತಿದ್ದಂತೆ ಎತ್ತಿಕೊಂಡು ಆಟವಾಡಿದ್ದಾರೆ.

ಮೈದಾನದಲ್ಲಿ ಕಾಣಿಸಿಕೊಂಡ ಉಡ..!

ಶ್ರೀಲಂಕಾ- ಅಪ್ಘಾನಿಸ್ತಾನ ನಡುವಿನ ಟೆಸ್ಟ್​​ ಪಂದ್ಯಕ್ಕೆ ಸ್ಪೆಷಲ್​​ ಅತಿಥಿ ಎಂಟ್ರಿಕೊಟ್ಟಿದ್ದಾನೆ. ಪಂದ್ಯದ 47ನೇ ಓವರ್​ನಲ್ಲಿ ಮೈದಾನದಲ್ಲಿ ಉಡ ಪ್ರತ್ಯಕ್ಷವಾಗಿದೆ. ಬೌಂಡರಿ ಲೈನ್ ದಾಟಿ ಹೊರ ಬರುತ್ತಿದ್ದಂತೆ ಅಂಪೈರ್ಸ್​ ಪಂದ್ಯವನ್ನ ಕೆಲ ನಿಮಿಷ ಸ್ಥಗಿತಗೊಳಿಸಿದ್ರು. ಸ್ವತಃ ಅಂಪೈರ್​​​​ ಉಡವನ್ನ ಮೈದಾನದಾಚೆಗೆ ಓಡಿಸಿದ್ರು. ಬಳಿಕ ಪಂದ್ಯ ಆರಂಭಗೊಂಡಿತು.

ಹಿಟ್​​ ವಿಕೆಟ್​​​​ ಆದ ಮ್ಯಾಥ್ಯೂವ್ಸ್​

ಶ್ರೀಲಂಕಾದ ತಂಡದ ಸ್ಟಾರ್ ಆಲ್​ರೌಂಡರ್​ ಆ್ಯಂಜಲೋ ಮ್ಯಾಥ್ಯೂವ್ಸ್​ ಹಿಟ್ ವಿಕೆಟ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಕೊಲಂಬೋದಲ್ಲಿ ಅಪ್ಘಾನಿಸ್ತಾನ ವಿರುದ್ಧ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮ್ಯಾಥ್ಯೂವ್ಸ್​​​ ಖೈಸ್ ಅಹ್ಮದ್​​ ಬೌಲಿಂಗ್​ನಲ್ಲಿ ಬೌಂಡ್ರಿ ಬಾರಿಸಲು ಪ್ರಯತ್ನಿಸಿ ಹಿಟ್​ ವಿಕೆಟ್ ಆಗಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಮ್ಯಾಥ್ಯೂವ್ಸ್​​​ ಟೈಮ್ ಔಟ್​ಗೆ ವಿಕೆಟ್ ಒಪ್ಪಿಸಿ ಭಾರಿ ಸುದ್ದಿಯಾಗಿದ್ರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs ENG: ಒಂದೇ ಇನ್ನಿಂಗ್ಸ್​ನಲ್ಲಿ 4 ಕ್ಯಾಚ್​​ ಹಿಡಿದ ಗಿಲ್​, 150 ವಿಕೆಟ್​ ಪಡೆದ ಬೂಮ್ರಾ; ಟಾಪ್- 5 ಕ್ರಿಕೆಟ್​ ನ್ಯೂಸ್​ ಇಲ್ಲಿವೆ!

https://newsfirstlive.com/wp-content/uploads/2024/02/GILL_BUMRH.jpg

Load More