ವಿಕೆಟ್​ಗಾಗಿ KKR ಬೌಲರ್​ಗಳ ಪರದಾಟ.. ಇಬ್ಬರು ಓಪನರ್​ಗಳಿಂದ ಭರ್ಜರಿ ಅರ್ಧಶತಕ ​​

author-image
Bheemappa
Updated On
ಕೊಹ್ಲಿ ಬಳಿ ಇಲ್ಲವೇ ಇಲ್ಲ; RCB ಇಂದ ಕೈ ಜಾರಿದ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್.. ಯಾರ ಹತ್ತಿರ ಇವೆ?
Advertisment
  • ಕೆಕೆಆರ್​ ಬೌಲರ್​ಗಳ ವಿರುದ್ಧ ಆಕ್ರಮಣಕಾರಿ ಶುಭ್​ಮನ್​ ಬ್ಯಾಟಿಂಗ್
  • ಪಾಯಿಂಟ್ ಟೇಬಲ್​ನಲ್ಲಿ ಗುಜರಾತ್ ಪಡೆದಿರುವ ಸ್ಥಾನ ಯಾವುದು?
  • ಪಂದ್ಯದಲ್ಲಿ ಒಳ್ಳೆಯ ಆರಂಭಿಕ ಬ್ಯಾಟಿಂಗ್ ಪಡೆದ ಗಿಲ್, ಸುದರ್ಶನ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಗುಜರಾತ್ ಕ್ಯಾಪ್ಟನ್​ ಶುಭ್​ಮನ್​ ಗಿಲ್ ಹಾಗೂ ಸಾಯಿ ಸುದರ್ಶನ್​ ಇಬ್ಬರೂ ಬ್ಯಾಕ್​ ಟು ಬ್ಯಾಟಕ್​ ಭರ್ಜರಿ ಹಾಫ್​​ಸೆಂಚುರಿ ಬಾರಿಸಿದ್ದಾರೆ.

ಈಡನ್ ಗಾರ್ಡನ್ಸ್​​ ಮೈದಾನದಲ್ಲಿ ಕೆಕೆಆರ್​​ ನಾಯಕ ಅಜಿಂಕ್ಯಾ ರಹಾನೆ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್​​ ಮಾಡಿದ ಗುಜರಾತ್ ಒಳ್ಳೆಯ ಆರಂಭ ಪಡೆದು ಬ್ಯಾಟಿಂಗ್ ಮುಂದುವರೆಸಿದೆ. ಓಪನರ್ಸ್ ಆಗಿ ಶುಭ್​ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅವರು ಕ್ರೀಸ್​ನಲ್ಲಿ ಕೆಕೆಆರ್ ಬೌಲರ್​ಗಳ ಮೇಲೆ ಸವಾರಿ ನಡೆಸಿದ್ದಾರೆ. 10 ಓವರ್​ಗಳು ಆದರೂ ವಿಕೆಟ್ ನಷ್ಟವಿಲ್ಲದೇ 93 ರನ್​ಗಳನ್ನು ಗಳಿಸಿದೆ.

ಇದನ್ನೂ ಓದಿ:RCB vs RR ಹೈವೋಲ್ಟೇಜ್ ಮ್ಯಾಚ್​.. ಪಂದ್ಯದಿಂದಲೇ ರಾಯಲ್ಸ್​ ಕ್ಯಾಪ್ಟನ್​ ಔಟ್, ಆಗಿದ್ದೇನು?​

publive-image

ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದ ಶುಭ್​​ಮನ್ ಗಿಲ್​ ಮತ್ತೊಂದು ಅರ್ಧಶತಕ ಬಾರಿಸಿದರು. ಕೆಕೆಆರ್ ಬೌಲರ್​ಗಳನ್ನ ಮನ ಬಂದಂತೆ ಚಚ್ಚಿ ಗುಜರಾತ್​ ತಂಡಕ್ಕೆ ಒಳ್ಳೆಯ ಆರಂಭ ಒದಗಿಸಿದ್ದಾರೆ. ಪಂದ್ಯದಲ್ಲಿ ಕೇವಲ 34 ಎಸೆತ ಎದುರಿಸಿದ ಶುಭ್​ಮನ್ ಗಿಲ್ 6 ಬೌಂಡರಿ ಹಾಗೂ 1 ಸಿಕ್ಸರ್​ನಿಂದ 50 ರನ್​ ಗಳಿಸಿದರು.

ಕ್ಯಾಪ್ಟನ್​ ಶುಭ್​ಮನ್​ ಗಿಲ್​ಗೆ ಒಳ್ಳೆಯ ಸಾಥ್ ಕೊಟ್ಟ ಸಾಯಿ ಸುದರ್ಶನ್​ ಕೂಡ ಹಾಫ್​ಸೆಂಚುರಿ ಬಾರಿಸಿದರು. ಈ ಇಬ್ಬರು ಕ್ರೀಸ್ ಕಚ್ಚಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದರಿಂದ ಕೆಕೆಆರ್​ ಬೌಲರ್​ಗಳು ವಿಕೆಟ್​ಗಾಗಿ ಪರದಾಟ ನಡೆಸಿದ್ದಾರೆ. ಪಂದ್ಯದಲ್ಲಿ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​ನಿಂದ ಸಾಯಿ ಸುದರ್ಶನ್ ಅರ್ಧಶತಕ ಸಿಡಿಸಿದರು. ಸದ್ಯ ನಡೆಯುತ್ತಿರುವ ಈ ಟೂರ್ನಿಯಲ್ಲಿ ಇಬ್ಬರು ಓಪನರ್ಸ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಈ ಪಂದ್ಯದಲ್ಲಿ ತಂಡದ ಮೊತ್ತ 114 ಆಗಿದ್ದಾಗ ಸಾಯಿ ಸುದರ್ಶನ್ ಆ್ಯಂಡ್ರೆ ರಸೆಲ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment