/newsfirstlive-kannada/media/post_attachments/wp-content/uploads/2025/07/SARA-1.jpg)
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೆಸ್ಟ್​ ತಂಡದ ನಾಯಕ ಶುಬ್ಮನ್ ಗಿಲ್ ಮತ್ತೊಬ್ಬ ಹುಡುಗಿ ಜೊತೆ ಕೂತಿರೋದು ಕಂಡುಬಂದಿದೆ. ಪಾರ್ಟಿಯಲ್ಲಿ ಗಿಲ್ ಹುಡುಗಿ ಜೊತೆ ಕೂತಿರೋದನ್ನು ಸಾರಾ ತೆಂಡುಲ್ಕರ್​ ಸಹಿಸದೇ ತಿರುಗಿ, ತಿರುಗಿ ಗಿಲ್​​ರನ್ನ ಗುರಾಯಿಸ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವರಾಜ್​ ಸಿಂಗ್ ಆಯೋಜಿಸಿದ್ದ ಪಾರ್ಟಿಯಲ್ಲಿ ನಡೆದ ದೃಶ್ಯ ಇದಾಗಿದೆ. ಈ ಪಾರ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರು ಹಾಗೂ ಬಾಲಿವುಡ್​ ಸ್ಟಾರ್​​ಗಳು ಭಾಗಿಯಾಗಿದ್ದರು. ಸಾರಾಳ ರಹಸ್ಯ ನೋಟಗಳು, ಗಿಲ್ ಹೊಸ ‘ಸಂಗಾತಿ’ಯನ್ನು ಕಂಡುಕೊಂಡಿದ್ದಾನೆಯೇ? ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದ ಇಂಧನ ಸ್ವಿಚ್ ಕಟ್ ಆಫ್ ಮಾಡಿದ್ದು ಇವರೇನಾ? ಸ್ಫೋಟಕ ಸತ್ಯ ರಿವೀಲ್​!
ವಿಡಿಯೋದಲ್ಲಿ ಗಿಲ್ ಒಬ್ಬ ಹುಡುಗಿ ಜೊತೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಾರಾ ತಮ್ಮ ತಂದೆ ಸಚಿನ್ ಮತ್ತು ಅಂಜಲಿ ತೆಂಡೂಲ್ಕರ್ ಜೊತೆ ಹಿಂದೆ ಕುಳಿತಿದ್ದರು. ಗಿಲ್ ಮತ್ತು ನಿಗೂಢ ಹುಡುಗಿ ಮುಂದಿನ ಆಸನದಲ್ಲಿ ಕೂತಿದ್ದರು. ವೈರಲ್ ಆಗಿರುವ ವಿಡಿಯೋವನ್ನು ನೋಡಿದ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ.
ಗಿಲ್ ಮತ್ತು ಸಾರಾ ನಡುವಿನ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಆದರೆ ಇವರಿಬ್ಬರು ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಿರಂತರವಾಗಿ ಇವರಿಬ್ಬರ ಸಂಬಂಧದ ಬಗ್ಗೆ ಚರ್ಚೆ ಆಗುತ್ತಲೇ ಇದೆ.
Shubman Gill and Sara palat moment 😍🥹
US when ? 😭 pic.twitter.com/5Zd92d4XaJ— Jeet (@JeetN25) July 17, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ