/newsfirstlive-kannada/media/post_attachments/wp-content/uploads/2025/07/Gill-9.jpg)
ಎದುರಾಳಿ ತಂಡದಲ್ಲಿ ಸ್ಟಾರ್ಗಳ್ಯಾರು ಇಲ್ಲ. ಹೋಮ್ ಕಂಡಿಷನ್ಸ್ ಅಡ್ವಾಂಟೇಜ್ ಇದೆ. ಯಂಗ್ ಇಂಡಿಯಾವನ್ನ ಸುಲಭಕ್ಕೆ ಮಣಿಸಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ನ ಮೊದಲ ದಿನವೇ ಬೆಚ್ಚಿ ಬಿತ್ತು. ಟೀಮ್ ಇಂಡಿಯಾದ ಯಂಗ್ ಟೈಗರ್ಗಳ ಘರ್ಜನೆಗೆ ಇಂಗ್ಲೆಂಡ್ ತಂಡ ಸೈಲೆಂಟಾಗಿ ಬಿಡ್ತು. ಲೀಡ್ಸ್ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಆಂಗ್ಲರನ್ನ ಅಟ್ಟಾಡಿಸಿಬಿಟ್ರು.
ಆಂಗ್ಲರ ನಾಡಲ್ಲಿ ಟೀಮ್ ಇಂಡಿಯಾದ ಯಂಗ್ ಘರ್ಜನೆ ಮುಂದುವರೆದಿದೆ. ಮೊದಲ ಟೆಸ್ಟ್ನಂತೆ 2ನೇ ಟೆಸ್ಟ್ನಲ್ಲೂ ಇಂಗ್ಲೆಂಡ್ ಬೌಲರ್ಗಳು ಬಳಲಿ ಬೆಂಡಾಗಿದ್ದಾರೆ. ಯಶಸ್ವಿ ಜೈಸ್ವಾಲ್, ಕ್ಯಾಪ್ಟನ್ ಶುಭ್ಮನ್ ಗಿಲ್ ಆಂಗ್ಲರನ್ನ ಎಡ್ಜ್ಬಾಸ್ಟನ್ನಲ್ಲೂ ಆ ರೇಂಜ್ಗೆ ಬೆಂಡೆತ್ತಿದ್ದಾರೆ.
ಆಂಗ್ಲರ ನಾಡಲ್ಲಿ ಮುಂದುವರೆದ ಯಶಸ್ವಿ ಓಟ
2ನೇ ಟೆಸ್ಟ್ ಮೊದಲ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ಬೌಲರ್ಗಳನ್ನ ಅಟ್ಟಾಡಿಸಿದ್ರು. ಓಪನರ್ ಆಗಿ ಕಣಕ್ಕಿಳಿದ ಜೈಸ್ವಾಲ್ ಆರಂಭದಲ್ಲಿ ತಾಳ್ಮೆಯ ಆಟವನ್ನೇ ಆಡಿದ್ರು. ಆದ್ರೆ, ಕ್ರೀಸ್ನಲ್ಲಿ ಸೆಟಲ್ ಆದ ಮೇಲೆ ಉಗ್ರಾವತಾರ ತಾಳಿದ್ರು. ಜೈಸ್ವಾಲ್ ಅಬ್ಬರದ ಆಟಕ್ಕೆ ಆಂಗ್ಲರ ಪಡೆ ಕಂಗಾಲ್ ಆಗೋಯ್ತು. ಇಂಡಿಯನ್ ಯಂಗ್ ಟೈಗರ್ ಘರ್ಜನೆ ಹಂಗಿತ್ತು. 59 ಎಸೆತಕ್ಕೆ ಅರ್ಧಶತಕ ಕಂಪ್ಲೀಟ್ ಮಾಡಿದ್ರು ಅಂದ್ರೆ ಅಬ್ಬರ ಹೇಗಿತ್ತು ಅನ್ನೋದನ್ನ ಅರ್ಥ ಮಾಡಿಕೊಳ್ಳಿ.
ಇದನ್ನೂ ಓದಿ: ಸೌದಿ ಗ್ಲೋಬಲ್ ಟಿ20 ಲೀಗ್ ವಿರುದ್ಧ BCCI ಕೆಂಗಣ್ಣು.. ವಿಶ್ವ ಕ್ರಿಕೆಟ್ ಬೋರ್ಡ್ಗಳ ನಡುವೆ ಮನಸ್ತಾಪ..!
ಬೌಂಡರಿಗಳಲ್ಲೇ ರನ್ ಡೀಲ್ ಮಾಡಿದ ಜೈಸ್ವಾಲ್
ಎಡ್ಜ್ಬಾಸ್ಟನ್ ಅಂಗಳಲ್ಲಿ ಯಶಸ್ವಿ ಜೈಸ್ವಾಲ್ ಬೌಂಡರಿಗಳಲ್ಲೇ ರನ್ ಡೀಲ್ ಮಾಡಿದ್ರು. 107 ಎಸೆತ ಎದುರಿಸಿದ ಜೈಸ್ವಾಲ್ 13 ಬೌಂಡರಿ ಸಹಿತ 87 ರನ್ ಸಿಡಿಸಿದ್ರು. ಅಂದ್ರೆ ಈ 87 ರನ್ಗಳ ಪೈಕಿ 52 ರನ್ಗಳು ಬೌಂಡರಿಯಿಂದಲೇ ಬಂದಿದ್ದು. ಬೊಂಬಾಟ್ ಆಟವಾಡಿದ ಜೈಸ್ವಾಲ್, ಟೀಮ್ ಇಂಡಿಯಾಗೆ ಒಳ್ಳೆ ಫೌಂಡೇಶನ್ ಹಾಕಿದ್ರು. ಬೇಸರದ ವಿಚಾರ ಏನಪ್ಪಾ ಅಂದ್ರೆ ಶತಕದ ಅಂಚಿನಲ್ಲಿ ಎಡವಿದ್ರು.
ಜೈಸ್ವಾಲ್ ಅಗ್ರೆಸ್ಸಿವ್ ಆಟ, ಗಿಲ್ ತಾಳ್ಮೆಯ ಪಾಠ
ಒಂದೆಡೆ ಅಬ್ಬರಿಸಿ ಬೊಬ್ಬರಿದು ಆಂಗ್ಲರಿಗೆ ಕಾಟ ಕೊಟ್ರು. ಇನ್ನೊಂದೆಡೆ ಇಂಡಿಯನ್ ಕ್ಯಾಪ್ಟನ್ ಶುಭ್ಮನ್ ಗಿಲ್ ತಾಳ್ಮೆಯ ಪಾಠ ಮಾಡಿದ್ರು. ಎಚ್ಚರಿಕೆಯ ಆಟವನ್ನಾಡಿದ ಶುಭ್ಮನ್ ಗಿಲ್ ಬೌಲರ್ಗಳ ಬೆವರಿಳಿಸಿದ್ರು. ಇಷ್ಟೆ ಅಲ್ಲ, ಕಿಂಗ್ಕೊಹ್ಲಿಯ ಸ್ಲಾಟ್ಗೆ ನಾನು ನ್ಯಾಯ ಒದಗಿಸಬಲ್ಲೇ ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ರು. ನಾಯಕತ್ವ ಪ್ರೆಶರ್ ಗಿಲ್ ಬ್ಯಾಟಿಂಗ್ ಮೇಲೆ ಬೀಳುತ್ತೆ ಅಂದವರಿಗೆ ಲೀಲಾಜಾಲವಾದ ಇನ್ನಿಂಗ್ಸ್ನಿಂದಲೇ ಆನ್ಸರ್ ಕೊಟ್ರು.
ಎಡ್ಜ್ಬಾಸ್ಟನ್ನಲ್ಲಿ ಗಿಲ್ ಶತಕ ವೈಭವ
ಲೀಡ್ಸ್ ಟೆಸ್ಟ್ನ ಫಸ್ಟ್ ಇನ್ನಿಂಗ್ಸ್ ಸೆಂಚುರಿ ಸಿಡಿಸಿದ್ದ ಗಿಲ್ ಎಡ್ಜ್ಬಾಸ್ಟನ್ನಲ್ಲೂ ಸುಂದರ ಇನ್ನಿಂಗ್ಸ್ ಕಟ್ಟಿದ್ರು. ಸ್ಲೋ ಅಂಡ್ ಸ್ಟಡಿ ಇನ್ನಿಂಗ್ಸ್ ಕಟ್ಟಿದ ಗಿಲ್ ಅರ್ಧಶತಕದ ಗಡಿ ದಾಟೋಕೆ ಬರೋಬ್ಬರಿ 125 ಎಸೆತಗಳನ್ನ ತೆಗೆದುಕೊಂಡ್ರು. ಹಾಫ್ ಸೆಂಚುರಿ ಸಿಡಿಸೋವರೆಗೆ ಕೇವಲ 5 ಬೌಂಡರಿ ಮಾತ್ರ ಬಾರಿಸಿದ್ರು.
ಇದನ್ನೂ ಓದಿ: ಮೊದಲ ದಿನವೇ ಟೀಮ್ ಇಂಡಿಯಾ ಅಬ್ಬರ.. ಶತಕ ಸಿಡಿಸಿ ಮಿಂಚಿದ ಶುಭ್ಮನ್ ಗಿಲ್
ಅರ್ಧಶತಕದ ಬಳಿಕವೂ ಗಿಲ್ ತಾಳ್ಮೆಯ ಆಟ ಬಿಡಲಿಲ್ಲ. ವಿಕೆಟ್ ಮಧ್ಯೆ ಓಡಿಯೇ ರನ್ಗಳಿಸಿದ್ರು. ಮಾಸ್ಟರ್ಕ್ಲಾಸ್ ಇನ್ನಿಂಗ್ಸ್ ಕಟ್ಟಿದ ಗಿಲ್, 199 ಎಸೆತದಲ್ಲಿ ಬೌಂಡರಿ ಬಾರಿಸಿ ಶತಕ ಸಿಡಿಸಿದ್ರು. ಈ ಮೂಲಕ ಆಂಗ್ಲರ ನಾಡಲ್ಲಿ 2ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್ 7ನೇ ಸೆಂಚುರಿ ಪೂರೈಸಿದ್ರು.
ಸೆಂಚುರಿ ಮುಗಿಸಿದ ಮಾತ್ರಕ್ಕೆ ಎಲ್ಲಾ ಮುಗಿದಿಲ್ಲ. ಪಿಚ್ಚರ್ ಅಭಿ ಬಾಕಿ ಹೈ. 114 ರನ್ಗಳಿಸಿರೋ ಗಿಲ್ ಇಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ. ಸೆಂಚುರಿಯನ್ನ ಡಬಲ್ ಸೆಂಚುರಿಯನ್ನಾಗಿ ಕನ್ವರ್ಟ್ ಮಾಡೋ ಎಲ್ಲಾ ಸುವರ್ಣಾವಕಾಶ ಗಿಲ್ಗಿದೆ. ಮೊದಲ ದಿನದಾಟದ ಆಟ ನೋಡಿದ್ರೆ ಗಿಲ್ ಫುಲ್ ಕಾನ್ಪಿಡೆಂಟ್ ಆಗಿರೋದಂತೂ ಸತ್ಯ. ಹೀಗಾಗಿ ಇಂದಿನ ದಿನದಾಟದಲ್ಲೂ ಪಾಸಿಟಿವ್ ಇಂಟೆಂಟ್ನೊಂದಿಗೆ ಬ್ಯಾಟಿಂಗ್ ನಡೆಸಲಿ. ಡಬಲ್ ಸೆಂಚುರಿ ಬಾರಿಸಲಿ ಅನ್ನೋದು ಎಲ್ಲರ ಆಶಯ.
ಇದನ್ನೂ ಓದಿ: ಗಿಲ್, ಜೈಸ್ವಾಲ್ ಆಟಕ್ಕೆ ಬೌಲರ್ಸ್ ಸುಸ್ತು.. ತಂಡಕ್ಕೆ ಆತ್ಮವಿಶ್ವಾಸ ತುಂಬಿದ ಜಡೇಜಾ.. ಹೇಗಿತ್ತು ನಿನ್ನೆಯ ಆಟ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ