/newsfirstlive-kannada/media/post_attachments/wp-content/uploads/2025/06/PANT.jpg)
ಎದುರಾಳಿ ತಂಡದಲ್ಲಿ ಸ್ಟಾರ್ಗಳ್ಯಾರು ಇಲ್ಲ.. ಹೋಮ್ ಕಂಡಿಷನ್ಸ್ ಅಡ್ವಾಂಟೇಜ್ ಇದೆ.. ಯಂಗ್ ಇಂಡಿಯಾವನ್ನ ಸುಲಭಕ್ಕೆ ಮಣಿಸಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ನ ಮೊದಲ ದಿನವೇ ಬೆಚ್ಚಿ ಬಿತ್ತು. ಟೀಮ್ ಇಂಡಿಯಾದ ಯಂಗ್ ಟೈಗರ್ಗಳ ಘರ್ಜನೆಗೆ ಇಂಗ್ಲೆಂಡ್ ತಂಡ ಸೈಲೆಂಟಾಗಿ ಬಿಡ್ತು. ಲೀಡ್ಸ್ ಮೈದಾನದಲ್ಲಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಆಂಗ್ಲರನ್ನ ಅಟ್ಟಾಡಿಸಿಬಿಟ್ರು.
ಆಂಗ್ಲರ ನಾಡಲ್ಲಿ ಇಂಡಿಯನ್ ಯಂಗ್ ಟೈಗರ್ ಘರ್ಜನೆ
ಲೀಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ಓಪನರ್ ಯಶಸ್ವಿ ಜೈಸ್ವಾಲ್ ಆಂಗ್ಲರಿಗೆ ಸಖತ್ ಕಾಟ ಕೊಟ್ರು. ಬ್ಯಾಟಿಂಗ್ಗೆ ಬಂದ ಆರಂಭದಲ್ಲಿ ತಾಳ್ಮೆಯ ಮಂತ್ರ ಪಠಿಸಿದ ಜೈಸ್ವಾಲ್, ಬಳಿಕ ಉಗ್ರಾವತಾರ ತಾಳಿದ್ರು. ಜೈಸ್ವಾಲ್ ಆಟದ ಮರ್ಮವನ್ನ ಅರ್ಥಮಾಡಿಕೊಳ್ಳಲಾಗದೇ ಇಂಗ್ಲೆಂಡ್ ಬೌಲರ್ಗಳು ಬಳಲಿ ಬೆಂಡಾಗಿ ಬಿಟ್ರು. ಆಂಗ್ಲರ ನಾಡಲ್ಲಿ ಇಂಡಿಯನ್ ಯಂಗ್ ಟೈಗರ್ ಘರ್ಜನೆ ಹಂಗಿತ್ತು.
96 ಎಸೆತಕ್ಕೆ ಅರ್ಧಶತಕ, 126 ಎಸೆತಕ್ಕೆ ಶತಕ..
ಜೈಸ್ವಾಲ್ ಆಟ ಹೇಗಿತ್ತು ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಕ್ರಿಸ್ನಲ್ಲಿ ಸೆಟಲ್ ಆಗೋವರೆಗೆ ಜೈಸ್ವಾಲ್ ರಿಸ್ಕ್ ತೆಗೆದುಕೊಳ್ಳೋಕೆ ಹೋಗಲಿಲ್ಲ. ತಾಳ್ಮೆಯಿಂದ ಎಚ್ಚರಿಕೆಯ ಆಟವನ್ನ ಆಡಿದ್ರು. ಅರ್ಧಶತಕದ ಗಡಿ ದಾಟೋಕೆ ಬರೋಬ್ಬರಿ 96 ಎಸೆತಗಳನ್ನ ತೆಗೆದುಕೊಂಡ್ರು. ಅರ್ಧಶತಕದ ಬಳಿಕ ಜೈಸ್ವಾಲ್ ಆಟವೇ ಬದಲಾಯ್ತು. ಜಸ್ಟ್ 27 ಎಸೆತದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ರು.
ಇದನ್ನೂ ಓದಿ: ಸ್ಟಾರ್ ಆಲ್ರೌಂಡರ್ ಗಿಲ್ ಪಡೆಯ ಟ್ರಂಪ್ ಕಾರ್ಡ್ ಆಗ್ತಾರಾ.. 1 ಶತಕ, 3 ಅರ್ಧಶತಕ ಸಿಡಿಸಿರುವ ಪ್ಲೇಯರ್!
ಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಆಂಗ್ಲರ ನಾಡು ಬ್ಯಾಟರ್ಸ್ ಪಾಲಿಗೆ ಅಗ್ನಿಪರೀಕ್ಷೆಯ ಕಣ. ಇಲ್ಲಿ ಬ್ಯಾಟಿಂಗ್ ನಡೆಸೋದು ಸುಲಭದ ಮಾತಲ್ಲ. ಇಂಗ್ಲೆಂಡ್ನಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಆಡಿದ ಜೈಸ್ವಾಲ್, ಲೀಲಾಜಾಲವಾಗಿ ಬ್ಯಾಟ್ ಬೀಸಿದ್ರು. 159 ಎಸೆತ ಎದುರಿಸಿದ ಮುಂಬೈಕರ್ 16 ಬೌಂಡರಿ, 1 ಸಿಕ್ಸರ್ ಸಿಡಿಸಿದ್ರು. ಬೊಂಬಾಟ್ ಶತಕ ಸಿಡಿಸಿದ ಜೈಸ್ವಾಲ್ ಹೊಸ ದಾಖಲೆಯನ್ನೂ ಬರೆದ್ರು. ಇದುವರೆಗೆ ಯಾವೊಬ್ಬ ಇಂಡಿಯನ್ ಓಪನರ್ ಕೂಡ ಇಂಗ್ಲೆಂಡ್ನಲ್ಲಿ ಶತಕ ಸಿಡಿಸಿರಲಿಲ್ಲ. ಜೈಸ್ವಾಲ್ ಅಸಾಧ್ಯವಾದುದನ್ನ ಸಾಧಿಸಿದ್ರು.
ಮೊದಲ ಟೆಸ್ಟ್ನಲ್ಲೇ ಕ್ಯಾಪ್ಟನ್ ಫೆಂಟಾಸ್ಟಿಕ್ ಆಟ
ಜೈಸ್ವಾಲ್ ಮಾತ್ರವಲ್ಲ.. ಕ್ಯಾಪ್ಟನ್ ಶುಭ್ಮನ್ ಗಿಲ್ ಕೂಡ ಫೆಂಟಾಸ್ಟಿಕ್ ಆಟವಾಡಿದ್ರು. ಕಿಂಗ್ಕೊಹ್ಲಿಯ ಸ್ಲಾಟ್ಗೆ ನಾನು ನ್ಯಾಯ ಒದಗಿಸಬಲ್ಲೇ ಅನ್ನೋದನ್ನ ಮೊದಲ ಇನ್ನಿಂಗ್ಸ್ನಲ್ಲೇ ನಿರೂಪಿಸಿದ್ರು. ಗಿಲ್ ನಾಯಕತ್ವದ ಜವಾಬ್ದಾರಿಯಿಂದ ಪ್ರೆಶರ್ಗೊಳಗಾಗ್ತಾರೆ ಅನ್ನೋ ಬಹುತೇಕರ ಅಭಿಪ್ರಾಯವನ್ನ ಮೊದಲ ಟೆಸ್ಟ್ನಲ್ಲೇ ಸುಳ್ಳಾಗಿಸಿದ್ರು. ಲೀಡ್ಸ್ ಅಂಗಳದಲ್ಲಿ ಲೀಡರ್ ಶುಭ್ಮನ್ ಬೊಂಬಾಟ್ ಬ್ಯಾಟಿಂಗ್ ನಡೆಸಿದ್ರು.
ಲೀಡ್ಸ್ನಲ್ಲಿ ಲೀಡರ್ ಶುಭ್ಮನ್ ಶತಕ ವೈಭವ
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಶುಭ್ಮನ್ ಗಿಲ್ ಸಖತ್ ಕಾನ್ಫಿಡೆಂಟ್ ಇನ್ನಿಂಗ್ಸ್ ಕಟ್ಟಿದ್ರು. ಮೊದಲ ಎಸೆತದಿಂದಲೇ ಅಗ್ರೆಸ್ಸಿವ್ ಆಟವಾಡಿದ ಶುಭ್ಮನ್ ಗಿಲ್, ಇಂಗ್ಲೆಂಡ್ ಬೌಲರ್ಗಳನ್ನ ನಿರ್ದಯವಾಗಿ ದಂಡಿಸಿದ್ರು. ಜಸ್ಟ್ 56 ಎಸೆತಕ್ಕೆ ಹಾಫ್ ಸೆಂಚುರಿ ಸಿಡಿಸಿದ್ರು.
ಇದನ್ನೂ ಓದಿ: ಓಪನರ್ ಜೈಸ್ವಾಲ್, ಕ್ಯಾಪ್ಟನ್ ಗಿಲ್ ಸಿಡಿಲಬ್ಬರದ ಶತಕ.. ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ
ಹಾಫ್ ಸೆಂಚುರಿ ಬಳಿಕ ಶುಭ್ಮನ್ ಗಿಲ್ ಸ್ಲೋ ಅಂಡ್ ಸ್ಟಡಿ ಬ್ಯಾಟಿಂಗ್ ನಡೆಸಿದ್ರು. ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಗಿಲ್ 140 ಎಸೆತಕ್ಕೆ ಶತಕ ಸಿಡಿಸಿ ಸಂಭ್ರಮಿಸಿದ್ರು. ಈ ಆಕರ್ಷಕ ಸೆಂಚುರಿ ಇನ್ನಿಂಗ್ಸ್ನಲ್ಲಿ 14 ಬೊಂಬಾಟ್ ಬೌಂಡರಿಗಳಿದ್ವು.
ಆಂಗ್ಲರ ನಾಡಲ್ಲಿ ಮೊದಲ ಟೆಸ್ಟ್ ಶತಕ ಸಿಡಿಸಿದ ಗಿಲ್ ಏಷ್ಯಾದ ಹೊರಗಡೆಯಿದ್ದ ಸೆಂಚುರಿ ಬರವನ್ನ ನೀಗಿಸಿಕೊಂಡ್ರು. ಇನ್ನೊಂದೆಡೆ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ನ ಫಸ್ಟ್ ಕ್ಲಾಸ್ನಲ್ಲಿ ಪಾಸ್ ಮಾಡಿದ್ರು. ಈ ಮೂಲಕ ಇಂಗ್ಲೆಂಡ್ ಪ್ರವಾಸವನ್ನ ಶತಕವೀರರು ಪಾಸಿಟಿವ್ ಇಂಟೆಂಟ್ನೊಂದಿಗೆ ಆರಂಭಿಸಿದ್ದು, ಮುಂದಿನ ಪಂದ್ಯಗಳಲ್ಲೂ ಈ ಅಬ್ಬರ ಮುಂದುವರೆಯಲಿ ಫ್ಯಾನ್ಸ್ ಆಶಯವಾಗಿದೆ.
ಇದನ್ನೂ ಓದಿ: ಗಿಲ್ ‘ಯಶಸ್ವಿ’ ಶತಕ ವೈಭವ, ಪಂತ್ ಫೆಂಟಾಸ್ಟಿಕ್.. ಆಂಗ್ಲರ ನಾಡಲ್ಲಿ ಹೇಗಿದೆ ತಾಳ್ಮೆಯ ಆಟ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ