Advertisment

ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್.. ಇಂಗ್ಲೆಂಡ್‌ ನೆಲದಲ್ಲಿ ಯುವ ನಾಯಕ ಮಿಂಚಿಂಗ್​

author-image
Veena Gangani
Updated On
ಬ್ಯಾಟಿಂಗ್​ನಲ್ಲಿ ಸೈಲೆಂಟ್ ಆದ ಶುಭ್​ಮನ್ ಗಿಲ್​.. ಮೂರು ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್​ ರನ್ ಇಷ್ಟೇನಾ?
Advertisment
  • ಮತ್ತೊಂದು ಶತಕ ಸಿಡಿಸಿದ್ದಾರೆ ಯುವ ನಾಯಕ ಶುಭಮನ್‌
  • 2ನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ
  • ವಿರಾಟ್​ ಕೊಹ್ಲಿ ಅಪರೂಪದ ದಾಖಲೆ ಸರಿಗಟ್ಟಿದ ಗಿಲ್

ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಯುವ ನಾಯಕ ಶುಭಮನ್‌ ಗಿಲ್ ‌ಮತ್ತೊಂದು ಶತಕ ಸಿಡಿಸಿದ್ದಾರೆ. ಈ ಮೂಲಕ ವಿರಾಟ್​ ಕೊಹ್ಲಿ ಅವರ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

Advertisment

ಇದನ್ನೂ ಓದಿ: ರಾಮಾಯಣದಲ್ಲಿ ಯಶ್​ ರಾವಣ ಆದ್ರೆ.. ಹನುಮಾನ್, ಲಕ್ಷ್ಮಣ, ಸೂರ್ಪನಕಿ ಪಾತ್ರ ಮಾಡ್ತಿರೋದು ಯಾರು?

publive-image

2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್‌ ಬಾರಿಸಿ ಆಂಗ್ಲರನ್ನ ಕಾಡಿದ್ದ ಗಿಲ್‌ 2ನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಅಜೇಯ ಆಟ ಮುಂದುವರಿಸಿದ್ದಾರೆ. 2ನೇ ಇನ್ನಿಂಗ್ಸ್‌ನಲ್ಲಿ 68 ಓವರ್‌ಗೆ 4 ವಿಕೆಟ್‌ಗೆ 304 ರನ್‌ ಗಳಿಸಿರುವ ಭಾರತ ಭರ್ಜರಿ 560ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದೆ.

ಚೊಚ್ಚಲ ಟೆಸ್ಟ್‌ ಸರಣಿಯಲ್ಲೇ ಮೊದಲ ದ್ವಿಶತಕ ಬಾರಿಸಿರುವ ಗಿಲ್‌ ಆಡಿರುವ 2 ಪಂದ್ಯಗಳಲ್ಲಿ 3 ಶತಕಗಳನ್ನ ಸಿಡಿಸಿದ್ದಾರೆ. ಈ ಮೂಲಕ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಟೀಂ ಇಂಡಿಯಾದ 2ನೇ ನಾಯಕ ಎಂಬ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisment

publive-image

ಈ ಹಿಂದೆ 2014/15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ಅಂದಿನ ಭಾರತದ ನಾಯಕ ವಿರಾಟ್‌ ಕೊಹ್ಲಿ 3 ಶತಕ ಗಳಿಸಿದ್ದರು. ಇದೀಗ ಇಂಗ್ಲೆಂಡ್‌ ನೆಲದಲ್ಲಿ ಶುಭಮನ್‌ ಗಿಲ್‌ 3 ಶತಕಗಳನ್ನು ಸಿಡಿಸಿ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment