ಶುಭ್​ಮನ್ ಗಿಲ್​​​ಗೆ ಶುಕ್ರದೆಸೆ ಶುರು.. BCCI ಕಡೆಯಿಂದ ಮಹತ್ವದ ನಿರ್ಧಾರ..!

author-image
Veena Gangani
Updated On
ಶುಭ್​ಮನ್ ಗಿಲ್​​​ಗೆ ಶುಕ್ರದೆಸೆ ಶುರು.. BCCI ಕಡೆಯಿಂದ ಮಹತ್ವದ ನಿರ್ಧಾರ..!
Advertisment
  • ಜಬರ್ದಸ್ತ್​ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದ ಶುಭ್​ಮನ್ ಗಿಲ್
  • ಶ್ರೀಘ್ರದಲ್ಲೇ ಏಕದಿನ ಫಾರ್ಮೆಟ್​​​ಗೆ ರೋಹಿತ್ ಶರ್ಮಾ ಗುಡ್​ ಬೈ..?
  • ಬಿಸಿಸಿಐನ ನಿರ್ಣಯದ ಹಿಂದಿನ ಕಾರಣದ ಬಗ್ಗೆ ಮಾಹಿತಿ ಇಲ್ಲಿದೆ

ಇಂಗ್ಲೆಂಡ್ ಟೆಸ್ಟ್​ ಸರಣಿಗೂ ಮುನ್ನ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗಿತ್ತು. ಅದೇ ರೋಹಿತ್ ಶರ್ಮಾ ಟೆಸ್ಟ್​ ನಿವೃತ್ತಿ. ಆದರೆ ಇದೀಗ ಟೆಸ್ಟ್​ನಿಂದ ದೂರ ಉಳಿದ ರೋಹಿತ್​​​​​​​​​​​​​​​​​​ಗೆ ನಾಯಕತ್ವದಿಂದ ಕೊಕ್ ನೀಡಿ ಶುಭ್​​ಮನ್​ಗೆ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ. ಬಿಸಿಸಿಐನ ಈ ನಿರ್ಣಯದ ಹಿಂದಿನ ಕಾರಣದ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

publive-image

ಶುಭ್​ಮನ್ ಗಿಲ್​​​ಗೆ ಶುಕ್ರದೆಸೆ ಶುರುವಾಗಿದೆ. ಇಂಗ್ಲೆಂಡ್​ನಲ್ಲಿ ಜಬರ್ದಸ್ತ್​ ಬ್ಯಾಟಿಂಗ್​ನಿಂದ ಗಮನ ಸೆಳೆದ ಪಂಜಾಬ್ ಪುತ್ತರ್, ಟೆಸ್ಟ್ ನಾಯಕನಾಗಿಯೂ ಎಲ್ಲರ ಮನ ಗೆದ್ದಿದ್ದಾರೆ. ಎಡ್ಜ್​ಬಾಸ್ಟನ್​ನಲ್ಲಿ ಯಾರು ಮಾಡದ ಸಾಧನೆ ಮಾಡಿರುವ ಶುಭ್​ಮನ್, ನಾಯಕನಾಗಿ ಹೊಸ ಭರವಸೆ ಹುಟ್ಟಿಹಾಕಿದ್ದಾರೆ. ಅಷ್ಟೇ ಅಲ್ಲದೇ ಬಿಸಿಸಿಐ ಮನ ಗೆದ್ದಿದ್ದಾರೆ.

ಇದನ್ನೂ ಓದಿ:ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್​ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!

publive-image

ರೋಹಿತ್ ಶರ್ಮಾ ನಿವೃತ್ತಿಯ ಬಳಿಕ ಶುಭ್​ಮನ್​ಗೆ ಟೆಸ್ಟ್ ನಾಯಕತ್ವ ಪಟ್ಟ ಕಟ್ಟಿತ್ತು. ಆದ್ರೆ, ನಾಯಕತ್ವದ ಪಟ್ಟ ಕಟ್ಟಿದ್ದ ಬಿಸಿಸಿಐಗೆ ಶುಭ್​​ಮನ್ ಯಶಸ್ವಿಯಾಗ್ತಾರಾ ಎಂಬ ಕಳವಳವೂ ಇತ್ತು. ಆದ್ರೀಗ ಇಂಗ್ಲೆಂಡ್ ಪ್ರವಾಸದಲ್ಲಿ ಕಂಪ್ಲೀಟ್​ ಕ್ಯಾಪ್ಟನ್ ಎಂಬುವುದರನ್ನು ನಿರೂಪಿಸಿರುವ ಶುಭ್​ಮನ್​ ಗಿಲ್​​, ಹೊಸ ಭರವಸೆಯನ್ನಷ್ಟೇ ಹುಟ್ಟಿಹಾಕಿಲ್ಲ, ಬಿಗ್​ಬಾಸ್​​ಗಳ ಮನ ತಾನೋರ್ವ ಕ್ಯಾಪ್ಟನ್ ಮೆಟಿರಿಯಲ್ ಅನ್ನೋದನ್ನು ತೋರಿಸಿದ್ದಾರೆ. ಇದೀಗ ಕ್ಯಾಪ್ಟನ್ಸಿಯಲ್ಲಿ ಇಂಪ್ರೆಸ್ ಮಾಡಿದ ಶುಭ್​ಮನ್​ಗೆ ಪ್ರಮೋಷನ್ ನೀಡಲು ಬಿಸಿಸಿಐ ಚಿಂತನೆ ನಡೆಸ್ತಿದೆ.

publive-image

ಟೆಸ್ಟ್​ ಕ್ರಿಕೆಟ್​​ಗೆ ಈಗಷ್ಟೇ ಗುಡ್​ ಬೈ ಹೇಳಿರುವ ರೋಹಿತ್ ಶರ್ಮಾ​​ಗೆ, ಬಿಸಿಸಿಐ ಶಾಕ್ ನೀಡಲು ಮುಂದಾಗಿದೆ. ಏಕದಿನ ನಾಯಕತ್ವದಿಂದ ಕೆಳಗಿಳಿಸುವ ಚಿಂತನೆಯಲ್ಲಿರುವ ಬಿಗ್​ಬಾಸ್​​ಗಳು, ಹಿಟ್​ಮ್ಯಾನ್ ಬದಲಿಗೆ ಶುಭ್​ಮನ್ ಗಿಲ್​​ಗೆ ಏಕದಿನ ನಾಯಕತ್ವದ ಪಟ್ಟ ಕಟ್ಟುವ ಲೆಕ್ಕಚಾರದಲ್ಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಅಳೆದು ತೂಗಿ ಲೆಕ್ಕಾಚಾರ ಹಾಕಿರುವ ಬಿಸಿಸಿಐ, ಶೀಘ್ರದಲ್ಲೇ ಶುಭ್​ಮನ್​ಗೆ ಗುಡ್​ ನ್ಯೂಸ್​ ನೀಡಲು ಮುಂದಾಗಿದೆ. ಅಷ್ಟೇ ಅಲ್ಲ ಶುಭ್​ಮನ್ ಗಿಲ್​​ಗೆ ಏಕದಿನ ನಾಯಕತ್ವದ ನಿರ್ಧಾರ ಹಿಂದೆ ಭಾರೀ ಪ್ಲ್ಯಾನ್ ಅಡಗಿದೆ.

publive-image

2027ರ ಏಕದಿನ ವಿಶ್ವಕಪ್​ ದೃಷ್ಟಿಯಿಂದ ಮಹತ್ವದ ನಿರ್ಧಾರ..!

ಬಿಸಿಸಿಐ ಶುಭ್​ಮನ್​​ ಗಿಲ್​ಗೆ ಏಕದಿನ ನಾಯಕತ್ವದ ಕಟ್ಟುವ ಚಿಂತನೆ ಹಿಂದೆ, 2027ರ ಏಕದಿನ ವಿಶ್ವಕಪ್ ಲೆಕ್ಕಚಾರ ಇದೆ. ಮುಂದಿನ ಏಕದಿನ ಸರಣಿ ವೇಳೆ ನಾಯಕನಾಗಿ ಘೋಷಿಸುವ ಸಾಧ್ಯತೆ ಇದೆ. ಯಾಕಂದ್ರೆ, ಏಕದಿನ ವಿಶ್ವಕಪ್​​ಗೆ ಕೇವಲ 2 ವರ್ಷ ಮಾತ್ರವೇ ಬಾಕಿ ಇದೆ. ಹೀಗಾಗಿ ಈಗ ಏಕದಿನ ನಾಯಕತ್ವದ ಪಟ್ಟ ನೀಡಿದ್ರೆ. ನಾಯಕತ್ವದ ಅನುಭವದ ಜೊತೆಗೆ ಟೀಮ್ ಬಿಲ್ಡ್ ಮಾಡಲು ಟೈಮ್ ಸಿಗುತ್ತೆ. ಇನ್​ಫ್ಯಾಕ್ಟ್​_ ಇಂಗ್ಲೆಂಡ್ ಸರಣಿಯಲ್ಲಿ ಲೀಡರ್ ಶಿಪ್ ಮೆಚ್ಯೂರಿಟಿ ತೋರಿಸಿರುವ ಶುಭ್​ಮನ್​​, ಏಕದಿನ ಕ್ರಿಕೆಟ್​ನಲ್ಲೂ ರನ್ ಹೊಳೆ ಹರಿಸಿದ್ದಾರೆ. ಹೈ ಕ್ರಿಕೆಟಿಂಗ್ IQ ಇದೆ. ಹೀಗಾಗಿ 2027ರ ಏಕದಿನ ವಿಶ್ವಕಪ್​ ವೇಳೆಗೆ ಪಳಗಬೇಕಾದ್ರೆ,​ ಪಟ್ಟ ಕಟ್ಟಲು ಇದು ಸಕಾಲ.

publive-image

ಚಾಂಪಿಯನ್ ಕ್ಯಾಪ್ಟನ್​​ ರೋಹಿತ್​ಗೆ ಯಾಕೆ ಕೊಕ್..?

ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸಕ್ಸಸ್​ ಫುಲ್ ಕ್ಯಾಪ್ಟನ್ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ. ಆದ್ರೆ, ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ವಯಸ್ಸು 40 ಆಗಿರುತ್ತೆ. ಹೀಗಾಗಿ ಫಿಟ್ನೆಸ್, ಇಂಜುರಿ ಫ್ರೀ ಆಗಿರುವುದು. ಫಾರ್ಮ್​ ಉಳಿಸಿಕೊಳ್ಳುವುದು ಬಿಗೆಸ್ಟ್ ಚಾಲೆಂಜ್ ಆಗುತ್ತೆ. ಹೀಗಾಗಿ ಭವಿಷ್ಯದ ಲೆಕ್ಕಾಚಾರ ಹಾಕಿಯೇ ಬಿಸಿಸಿಐ, ಲಾಂಗ್ ಟರ್ಮ್​ ಕ್ಯಾಪ್ಟನ್​ ಆಗಿ 25 ವರ್ಷದ ಶುಭ್​ಮನ್​ಗೆ ಪಟ್ಟ ಕಟ್ಟಲು ಮುಂದಾಗಿರುವ ಹಿಂದಿನ ರೀಸನ್.

publive-image

ಬಿಸಿಸಿಐ ನಿರ್ಧಾರ ಹಿಂದಿದೆಯಾ ಸೈಡ್​ಲೈನ್ ಮುನ್ಸೂಚನೆ..?

ಒಂದ್ಕಡೆ ರೋಹಿತ್ ಶರ್ಮಾ ಏಕದಿನ ನಾಯಕತ್ವ ಕಸಿದುಕೊಳ್ಳುವ ಲೆಕ್ಕಚಾರದಲ್ಲಿರುವ ಬಿಸಿಸಿಐ, ಮತ್ತೊಂದ್ಕಡೆ ಭವಿಷ್ಯದ ಚಿಂತನೆ ನಡೆಸಿದೆ. ಆದ್ರೆ, ಭವಿಷ್ಯದ ಯೋಜನೆಯ ಅಂತಿರುವ ಬಿಗ್​ಬಾಸ್​ಗಳು, ಪರೋಕ್ಷವಾಗಿ ನಾಯಕತ್ವದ ಜೊತೆಗೆ ರೋಹಿತ್ ಶರ್ಮಾನ ಏಕದಿನ ಫಾರ್ಮೆಟ್​ನಿಂದಲೂ ಸೈಡ್​ಲೈನ್​​​ ಮಾಡ್ತಿದೆಯಾ ಎಂಬ ಅನುಮಾನವೂ ಹುಟ್ಟಿಹಾಕುವಂತೆ ಮಾಡಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾ ವಯಸ್ಸು ಹಾಗೂ ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರ ಅನ್ನೋದ್ರಲ್ಲಿ ಡೌಟೇ ಇಲ್ಲ.

publive-image

ಶ್ರೀಘ್ರದಲ್ಲೇ ಏಕದಿನ ಫಾರ್ಮೆಟ್​​​ಗೆ ರೋಹಿತ್ ಗುಡ್​ ಬೈ..?

ಟೆಸ್ಟ್​ ಕ್ರಿಕೆಟ್​ನಿಂದ ದೂರವಾದಂತೆ ರೋಹಿತ್, ಏಕದಿನ ಫಾರ್ಮೆಟ್​ನಿಂದ ದೂರವಾದರು ಅಚ್ಚರಿ ಇಲ್ಲ. ಯಾಕಂದ್ರೆ, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಟೆಸ್ಟ್​ ನಾಯಕನಾಗಿ ಶುಭ್​ಮನ್ ನೇಮಿಸಲು ಮುಂದಾಗಿತ್ತು. ಈ ಅಪಮಾನಕ್ಕೆ ಬೇಸರಗೊಂಡಿದ್ದ ರೋಹಿತ್ ಶರ್ಮಾ, ಟೆಸ್ಟ್​ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ರು. ಇದೀಗ ಅಂಥದ್ದೇ ಅಪಮಾನ ಎದುರಾದ್ರೆ, ಏಕದಿನ ಕ್ರಿಕೆಟ್​ಗೆ ರೋಹಿತ್ ಗುಡ್​ ಬೈ ಹೇಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಭವಿಷ್ಯದ ಲೆಕ್ಕಾಚಾರದಲ್ಲಿರುವ ಬಿಸಿಸಿಐ ಶುಭ್​ಮನ್​ ಗಿಲ್​ಗೆ ನಾಯಕತ್ವ ನೀಡಲು ಸರಿಯಾದ ಸಮಯ. ಆದ್ರೆ, ಇದೇ ನೆಪದಲ್ಲಿ ರೋಹಿತ್​ ಶರ್ಮಾನ ಸೈಡ್​​ಲೈನ್ ಅಜೆಂಡಾ ಇದ್ರೆ. ರೋಹಿತ್, ಅಭಿಮಾನಿಗಳಿಗೆ ಶೀಘ್ರದಲ್ಲೇ ಮತ್ತೊಂದು ಅಘಾತಕಾರಿ ಸುದ್ದಿ ನೀಡೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment