Advertisment

ಕೊಹ್ಲಿ ದಿಲ್ ಗೆದ್ದ ಗಿಲ್.. ಪ್ರಿನ್ಸ್ ಯಶಸ್ಸಿನ ಹಿಂದಿನ ಸಿಕ್ರೇಟ್ ರಿವೀಲ್..!

author-image
Ganesh
Updated On
ಕೊಹ್ಲಿ ದಿಲ್ ಗೆದ್ದ ಗಿಲ್.. ಪ್ರಿನ್ಸ್ ಯಶಸ್ಸಿನ ಹಿಂದಿನ ಸಿಕ್ರೇಟ್ ರಿವೀಲ್..!
Advertisment
  • ಆಂಗ್ಲರ ನಾಡಲ್ಲಿ ಶುಭ್​ಮನ್​ ಗಿಲ್ ಘರ್ಜನೆ
  • ಇಂಡಿಯನ್​ ಕ್ಯಾಪ್ಟನ್​ ಆಟಕ್ಕೆ ಬೆಚ್ಚಿದ ಆಂಗ್ಲ ಪಡೆ
  • ‘ಸ್ಟಾರ್​​ಬಾಯ್​​’​ಗೆ ಶಹಬ್ಬಾಸ್​ ಎಂದ ವಿರಾಟ್.​.!

ಕ್ರಿಕೆಟ್​ ಲೋಕದಲ್ಲೀಗ ಶುಭ್ಮನ್ ಗಿಲ್​ ಹೆಸರು ಜೋರಾಗಿ ಸೌಂಡ್​ ಮಾಡ್ತಿದೆ. ಇಂಡಿಯನ್​ ಕ್ಯಾಪ್ಟನ್​ ಜಬರ್ದಸ್ತ್​​ ಆಟಕ್ಕೆ ಕಿಂಗ್​ ಕೊಹ್ಲಿಯೇ ಕ್ಲೀನ್​ಬೋಲ್ಡ್​ ಆಗಿದ್ದಾರೆ. ಫಾರಿನ್​​ ಪಿಚ್​​ಗಳಲ್ಲಿ ಶುಭ್​ಮನ್ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳಿದ್ವು. ಸತತ ವೈಫಲ್ಯ ಗಿಲ್​ನ ಕಾಡಿತ್ತು. ವೈಫಲ್ಯವನ್ನ ಇಂಡಿಯನ್​ ಕ್ಯಾಪ್ಟನ್​ ಮೆಟ್ಟಿ ನಿಂತಿದ್ದೇಗೆ ಅನ್ನೋ ವಿವರ ಇಲ್ಲಿದೆ.

Advertisment

ಶುಭ್​ಮನ್​ ಶೈನಿಂಗ್​​ ಬ್ಯಾಟಿಂಗ್​​ಗೆ ಕ್ರಿಕೆಟ್​ ಜಗತ್ತೇ ಕ್ಲೀನ್​ಬೋಲ್ಡ್​ ಆಗಿದೆ. ಆಂಗ್ಲರ ನಾಡಲ್ಲಿ ಅಕ್ಷರಶಃ ಘರ್ಜಿಸ್ತಿರೋ ಗಿಲ್​ ಸೆಂಚುರಿ ಮೇಲೆ ಸೆಂಚುರಿ ಬಾರಿಸ್ತಿದ್ದಾರೆ. ದಾಖಲೆ ಮೇಲೆ ದಾಖಲೆ ಬರೀತಿದ್ದಾರೆ. ನೀರಾಯಾಸವಾಗಿ ನೀರು ಕುಡಿದಷ್ಟು ಸುಲಭಕ್ಕೆ ಟಫ್​ ಕಂಡಿಷನ್ಸ್​ನಲ್ಲಿ ಬ್ಯಾಟಿಂಗ್​ ನಡೆಸ್ತಿರೋ ಇಂಡಿಯನ್​ ಕ್ಯಾಪ್ಟನ್​ ಆಂಗ್ಲ ಪಡೆಗೆ ದೊಡ್ಡ ತಲೆನೋವಾಗಿದ್ದಾರೆ.

ಆಂಗ್ಲರ ನಾಡಲ್ಲಿ ಶುಭ್​ಮನ್​ ಗಿಲ್ ಘರ್ಜನೆ​.!

ನಾಯಕತ್ವದ ಜವಾಬ್ದಾರಿ ಹೊತ್ತು ಇಂಗ್ಲೆಂಡ್​ಗೆ ಹಾರಿದ ಶುಭ್​ಮನ್​ ಗಿಲ್​ ಮೊದಲ ಅಸೈನ್​ಮೆಂಟ್​ನಲ್ಲೇ ಸಕ್ಸಸ್​ ಕಂಡಿದ್ದಾರೆ. ತನ್ನ ಆಟದಿಂದಲೇ ಇಡೀ ತಂಡಕ್ಕೆ ಎಕ್ಸಾಂಪಲ್​ ಸೆಟ್​ ಮಾಡ್ತಿದ್ದಾರೆ. ಗಿಲ್​ ಆಟ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಜೋಷ್​ ಹೆಚ್ಚಿಸಿದ್ರೆ, ಇಂಗ್ಲೆಂಡ್​ ಕ್ಯಾಂಪ್​ನಲ್ಲಿ ಟೆನ್ಶನ್​ಗೆ ಕಾರಣವಾಗಿದೆ. 4 ಇನ್ನಿಂಗ್ಸ್​​ಗಳಲ್ಲಿ 585 ರನ್​​ ಅಂದ್ರೆ ಸಾಮಾನ್ಯನಾ? ಈ ಸೀರಿಸ್​ ಆರಂಭಕ್ಕೂ ಮುನ್ನ ಗಿಲ್​​ ಘರ್ಜನೆ ಹೀಗಿರುತ್ತೆ ಅಂತಾ ಕನಿಷ್ಠ ಕನಸಲ್ಲೂ ಯಾರೂ ಉಹಿಸಿರೋಕೆ ಸಾಧ್ಯನೇ ಇಲ್ಲ.

ಇದನ್ನೂ ಓದಿ: ರೇಣುಕಾಸ್ವಾಮಿ ಮಾದರಿಯಲ್ಲೇ ಮತ್ತೊಂದು ಅಟ್ಯಾಕ್; ಮೆಸೇಜ್ ಮಾಡಿದ್ದಕ್ಕೆ ಅಪಹರಿಸಿ ಭಯಾನಕ ವಿಕೃತಿ..

Advertisment

publive-image

ಕಿಂಗ್​ ಕೊಹ್ಲಿಯ ದಿಲ್​ ಗೆದ್ದ ಪ್ರಿನ್ಸ್​​ ಗಿಲ್

ಗಿಲ್ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟಾಗಲೇ ವಿರಾಟ್​ ಕೊಹ್ಲಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ರು. ಹೀಗಾಗಿಯೇ ಕೊಹ್ಲಿಯನ್ನ ಕಿಂಗ್​ ಅಂತಿದ್ದ ಕ್ರಿಕೆಟ್​ ಜಗತ್ತು ಗಿಲ್​ನ ಪ್ರಿನ್ಸ್​ ಎಂದಿತ್ತು. ಕೊಹ್ಲಿ ನಿವೃತ್ತಿ 4ನೇ ಕ್ರಮಾಂಕದ ಜವಾಬ್ದಾರಿಯನ್ನು ಹೊತ್ತು ಸಿಂಹಾಸನವೇರಿರುವ ಗಿಲ್​, ಫಸ್ಟ್​ ಟಾಸ್ಕ್​ನಲ್ಲೇ ಸಕ್ಸಸ್​​ ಕಂಡಿದ್ದಾರೆ. 2 ಶತಕ, 1 ದ್ವಿಶತಕ ಚಚ್ಚಿ ಬಿಸಾಕಿರೋ ಗಿಲ್, ಕಿಂಗ್​ ಕೊಹ್ಲಿಯ ದಿಲ್​ ಗೆದ್ದಿದ್ದಾರೆ. ಪಂಜಾಬ್​ ಪುತ್ತರ್​ ಆಟಕ್ಕೆ ಕ್ಲೀನ್​ಬೋಲ್ಡ್​ ಆಗಿರೋ ಕಿಂಗ್​​, ‘ಸ್ಟಾರ್​ ಬಾಯ್​’ಗೆ ಶಹಬ್ಬಾಸ್​ ಹೇಳಿದ್ದಾರೆ.

ವೈಫಲ್ಯ ಮೆಟ್ಟಿ ನಿಂತಿದ್ದೇಗೆ..?

ಈ ಬಾರಿಯ ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಶುಭ್​ಮನ್​ ಗಿಲ್​ ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆಗಳಿದ್ವು. 2021ರಲ್ಲೇ ಟೆಸ್ಟ್​ಗೆ ಡೆಬ್ಯೂ ಮಾಡಿದ್ರೂ, ವಿದೇಶಿ ನೆಲದಲ್ಲಿ ಗಿಲ್​ಗೆ ಸಕ್ಸಸ್​ ಅನ್ನೋದೆ ಸಿಕ್ಕಿರಲಿಲ್ಲ. ಬಾಂಗ್ಲಾದೇಶ ಹೊರತುಪಡಿಸಿ ವಿದೇಶದಲ್ಲಿ ಗಿಲ್​ ಒಂದೇ ಒಂದು ಸೆಂಚುರಿಯನ್ನೂ ಬಾರಿಸಿರಲಿಲ್ಲ. ಇಂಗ್ಲೆಂಡ್​ನಲ್ಲಿ 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ್ದ ಶುಭ್​ಮನ್ ಗಿಲ್​ ಜಸ್ಟ್​ 14.66ರ ಸರಾಸರಿ ಹೊಂದಿದ್ರು. ಆದ್ರೀಗ ಬರೋಬ್ಬರಿ 67.30ರ ಸರಾಸರಿ ಹೊಂದಿದ್ದಾರೆ.

ಏಪ್ರಿಲ್​ನಿಂದಲೇ ಸಿದ್ಧತೆ ಆರಂಭಿಸಿದ್ದ ಗಿಲ್

ಗಿಲ್​ರ ಮಿಷನ್​ ಇಂಗ್ಲೆಂಡ್​ ಟೂರ್​​ ಆರಂಭವಾಗಿದ್ದು ಐಪಿಎಲ್​ ವೇಳೆ. ಐಪಿಎಲ್​ ಸಮಯದಲ್ಲೇ ಶುಭ್​ಮನ್​ ಗಿಲ್​ ರೆಡ್​​ ಬಾಲ್​ನ ರಿಧಮ್​ ಕಂಡುಕೊಳ್ಳೋಕೆ ವಿಶೇಷ ಅಭ್ಯಾಸ ನಡೆಸಿದ್ರು. ಅದ್ರಲ್ಲೂ ಮುಖ್ಯವಾಗಿ ಇಂಗ್ಲೆಂಡ್​​ನಲ್ಲಿ ಬಳಸೋ ಡ್ಯೂಕ್​ ಬಾಲ್​ನಲ್ಲಿ ಗಿಲ್​ ಅಭ್ಯಾಸ ನಡೆದಿತ್ತು. ಅಹ್ಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪೇಸ್​​ ಮತ್ತು ಬೌನ್ಸ್​ ಹೊಂದಿದ್ದ ಪ್ರಾಕ್ಟಿಸ್​ ಪಿಚ್​ನಲ್ಲಿ ಗಿಲ್​ ಅಭ್ಯಾಸ ನಡೆಸಿದ್ರು. ಗುಜರಾತ್​ ಟೈಟನ್ಸ್​ ಪಂದ್ಯವಿಲ್ಲದ ಬಿಡುವಿನ ದಿನಗಳಲ್ಲಿ ದಿನಕ್ಕೆ 2ರಿಂದ 3ಗಂಟೆಗಳ ಕಾಲ ಗಿಲ್​ ಪ್ರಾಕ್ಟಿಸ್​ ನಡೆಸಿ ಬೆವರಿಳಿಸಿದ್ರು. ಆ ಬೆವರಿಗೆ ಇದೀಗ ಫಲ ಸಿಕ್ಕಿದೆ.

Advertisment

ಇದನ್ನೂ ಓದಿ: 336 ರನ್​ಗಳ ಭರ್ಜರಿ ಗೆಲುವು.. 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಟೀಂ ಇಂಡಿಯಾ..!

publive-image

ಫ್ಯಾಬ್​​-4 ಲಿಸ್ಟ್​​​ಗೆ ‘ಯುವರಾಜ’ನ ಎಂಟ್ರಿ

ಟೆಸ್ಟ್​ಗೆ ಗುಡ್​ ಬೈ ಹೇಳಿದ ವಿರಾಟ್​ ಕೊಹ್ಲಿ ಇದೀಗ ಫ್ಯಾಬ್​-4 ಲಿಸ್ಟ್​ನಲ್ಲಿಲ್ಲ. ಇದೀಗ ಕೊಹ್ಲಿಯ ಸ್ಥಾನಕ್ಕೆ ಯುವರಾಜನ ಎಂಟ್ರಿಯಾಗಿದೆ. ಗಿಲ್​ ಆಟವನ್ನ ಮೆಚ್ಚಿರೋ ಮಾಜಿ ಕ್ರಿಕೆಟಿಗ ಸೈಯದ್​ ಕಿರ್ಮಾನಿ ಭವಿಷ್ಯದ ಫ್ಯಾಬ್​​ 4 ಲಿಸ್ಟ್​​ನಲ್ಲಿ ಶುಭ್​ಮನ್​ ಹೆಸರಿರಬೇಕು ಅನ್ನೋ ಬೋಲ್ಡ್​ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ, ಇಂಗ್ಲೆಂಡ್​ ಪ್ರವಾಸದಲ್ಲಿ ಆಡಿದ 4 ಇನ್ನಿಂಗ್ಸ್​ಗಳಲ್ಲೇ ಇಂಡಿಯನ್​ ಕ್ಯಾಪ್ಟನ್​ ಸಾಮರ್ಥ್ಯ ಬಗೆಗಿದ್ದ ಹಲವು ಪ್ರಶ್ನೆಗಳಿಗೆ ಕ್ಲೀಯರ್​ ಕಟ್​ ಆನ್ಸರ್​ ಕೊಟ್ಟಿದ್ದಾರೆ. ಕೊಹ್ಲಿ ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲೇ ಅನ್ನೋದನ್ನ ನಿರೂಪಿಸಿದ್ದಾರೆ. ಗಿಲ್​ ಘರ್ಜನೆ ದಾಖಲೆಗಳೆಲ್ಲಾ ಧೂಳಿಪಟವಾಗಿವೆ. ಇದೇ ಆಟವನ್ನ ಸರಣಿಯೂದ್ದಕ್ಕೂ ಗಿಲ್​ ಮುಂದುವರೆಸಲಿ ಅನ್ನೋದೇ ಎಲ್ಲರ ಆಶಯ.

Advertisment

ಇದನ್ನೂ ಓದಿ: ಟೆಸ್ಟ್ ಗೆಲುವಿಗೆ ಕಾರಣ 4 ಆಟಗಾರರು.. ಟೀಂ ಇಂಡಿಯಾ ಕಂಬ್ಯಾಕ್ ಹಿಂದಿರುವ ಹೀರೋಗಳು ಇವರೇ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment