/newsfirstlive-kannada/media/post_attachments/wp-content/uploads/2025/07/GILL_100.jpg)
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾದ ನಾಯಕ ಶುಭ್​ಮನ್ ಗಿಲ್ ಅವರು ಭರ್ಜರಿ ಸೆಂಚುರಿ ಸಿಡಿಸಿದ್ದಾರೆ.
ಮ್ಯಾಂಚೆಸ್ಟರ್​ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ ಪಂದ್ಯದ 5ನೇ ದಿನದಲ್ಲಿ ಶುಭ್​ಮನ್ ಗಿಲ್ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಕೆ.ಎಲ್ ರಾಹುಲ್​ ಜೊತೆ ಇನ್ನಿಂಗ್ಸ್​ ಆರಂಭಿಸಿದ್ದ ಗಿಲ್​ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದಕ್ಕೂ ಮೊದಲು ಕೆ.ಎಲ್ ರಾಹುಲ್ ಅವರು ಕೇವಲ 10 ರನ್​ಗಳ ಅಂತರದಿಂದ ಶತಕ ವಂಚಿತರಾಗಿದ್ದರು. ಆದರೆ ಸೆಂಚುರಿ ಹೊಸ್ತಿಲಲ್ಲಿದ್ದ ಕ್ಯಾಪ್ಟನ್​ 100 ರನ್​ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಒಟ್ಟು 232 ಬಾಲ್​ಗಳನ್ನು ಎದುರಿಸಿದ ನಾಯಕ ಗಿಲ್ 12 ಬೌಂಡರಿಗಳಿಂದ ಅದ್ಭುತವಾದ ಶತಕ ಬಾರಿಸಿದರು. ಆದರೆ ಬ್ಯಾಟಿಂಗ್​ ವೇಳೆ ಸಿಕ್ಸರ್ ಸಿಡಿಸಿರಲಿಲ್ಲ. 103 ರನ್​ ಗಳಿಸಿ ಆಡುವಾಗ ಜೆಮಿಯಾ ಸ್ಮಿತ್​​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಇನ್ನು ಈ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಶುಭ್​ಮನ್ ಗಿಲ್ ಅವರ 4ನೇ ಸೆಂಚುರಿ ಇದಾಗಿದೆ. ಅಲ್ಲದೇ ಭಾರತ ಕ್ಯಾಪ್ಟನ್​ ಒಬ್ಬರು ಡೆಬ್ಯೂ ಟೆಸ್ಟ್​​ನ ಸರಣಿಯಲ್ಲಿ 4 ಶತಕ ಬಾರಿಸಿರುವುದು ದಾಖಲೆ ಆಗಿದೆ.
ಶುಭಮನ್ ಗಿಲ್ ನಾಯಕನಾಗಿ ತಮ್ಮ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ ಆಗಿದ್ದಾರೆ. ಇದಕ್ಕಿಂತ ಮೊದಲು ವಾರ್ವಿಕ್ ಆರ್ಮ್‌ಸ್ಟ್ರಾಂಗ್, ಬ್ರಾಡ್ಮನ್, ಗ್ರೆಗ್ ಚಾಪೆಲ್, ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ಅವರು ತಮ್ಮ ಚೊಚ್ಚಲ ಸರಣಿಯಲ್ಲಿ ತಲಾ 3 ಶತಕಗಳನ್ನು ಬಾರಿಸಿರುವುದು ಇದುವರೆಗೆ ರೆಕಾರ್ಡ್​ ಆಗಿತ್ತು. ಆದರೆ ಈಗ ಗಿಲ್ ಮೊದಲ ಸ್ಥಾನವನ್ನ ಅಲಂಕರಿಸಿದ್ದಾರೆ. ಸದ್ಯ ಟೀಮ್ ಇಂಡಿಯಾ 4 ವಿಕೆಟ್​ಗೆ 222 ರನ್​ ಗಳಿಸಿದೆ. ಕ್ರೀಸ್​ನಲ್ಲಿ ಸುಂದರ್ ಹಾಗೂ ಜಡೇಜಾ ಇದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ