ಚೊಚ್ಚಲ ದ್ವಿಶತಕ ಬಾರಿಸಿದ ಶುಭ್​ಮನ್​ ಗಿಲ್​​.. ಆಂಗ್ಲರ ನೆಲದಲ್ಲಿ ಭಾರತದ ನಾಯಕನಿಂದ ಮಹತ್ವದ ಸಾಧನೆ!

author-image
Bheemappa
Updated On
ಕ್ಯಾಪ್ಟನ್​ ಫೆಂಟಾಸ್ಟಿಕ್​​.. ಗಿಲ್ ಡಬಲ್​ ಹಂಡ್ರೆಡ್​ ಸಿಡಿಸಿ ಬರೆದ ದಾಖಲೆ ಒಂದಾ, ಎರಡಾ?
Advertisment
  • ಇಂಗ್ಲೆಂಡ್​ ಬೌಲರ್​ಗಳಿಗೆ ಬೆವರಿಳಿಸಿದ ಕ್ಯಾಪ್ಟನ್ ಶುಭ್​ಮನ್ ಗಿಲ್
  • ಅಮೋಘವಾದ ಸಾಧನೆ ಮಾಡಿದ ಟೀಮ್ ಇಂಡಿಯಾದ ನಾಯಕ
  • ಕಳೆದ ಟೆಸ್ಟ್​ ಪಂದ್ಯದಲ್ಲೂ ಸೆಂಚುರಿ ಬಾರಿಸಿದ್ದ ಶುಭ್​ಮನ್ ಗಿಲ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ 2ನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್​​​ ಶುಭ್​ಮನ್​ ಗಿಲ್ ಅವರು ದ್ವಿಶತಕ ಬಾರಿಸಿದ್ದಾರೆ. ಸದ್ಯ ಟೀಮ್ ಇಂಡಿಯಾ 6 ವಿಕೆಟ್​ಗೆ 496 ರನ್​ ಗಳಿಸಿದ್ದು ಬ್ಯಾಟಿಂಗ್ ಮಾಡುತ್ತಿದೆ. ಗಿಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಬರ್ಮಿಂಗ್ಹ್ಯಾಮ್​​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ನಾಯಕ ಬೆನ್​​ ಸ್ಟೋಕ್ಸ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಈಗಾಗಲೇ ಒಂದು ದಿನ ಮುಗಿದಿದ್ದು ಎರಡನೇ ದಿನದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್​ ಮುಂದುವರೆಸಿದೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರು ಆಕ್ಸಿಡೆಂಟ್​.. ಸ್ಟಾರ್ ಫುಟ್​ಬಾಲ್​ ಪ್ಲೇಯರ್​, ಸಹೋದರ ಇಬ್ಬರು ನಿಧನ

publive-image

ಐದು ವಿಕೆಟ್​ಗೆ 305 ರನ್​ಗಳಿಂದ ಇಂದು ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡ ಉತ್ತಮ ಬ್ಯಾಟಿಂಗ್ ಮಾಡುತ್ತಿದೆ. ನಿನ್ನೆಯೇ ಸೆಂಚುರಿ ಸಿಡಿಸಿದ್ದ ಶುಭ್​ಮನ್ ಗಿಲ್​ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅದರಂತೆ ಇಂಗ್ಲೆಂಡ್​ ವಿರುದ್ಧ ಇಂದು ಅದ್ಭುತವಾದ ಡಬಲ್​ ಹಂಡ್ರೆಂಡ್​ ಬಾರಿಸಿ ಸಂಭ್ರಮಿಸಿದ್ದಾರೆ. ಇನ್ನಿಂಗ್ಸ್​​ನಲ್ಲಿ 311 ಎಸೆತಗಳನ್ನು ಎದುರಿಸಿದ ಶುಭ್​​ಮನ್​ ಗಿಲ್​ ಎರಡು ಸಿಕ್ಸರ್​ ಹಾಗೂ 21 ಮನಮೋಹಕವಾದ ಬೌಂಡರಿಗಳಿಂದ 200 ರನ್​ ಬಾರಿಸಿದ್ದಾರೆ.

ಇದುವರೆಗೆ ಭಾರತ ತಂಡದ ಯಾವೊಬ್ಬ ನಾಯಕನು ಇಂಗ್ಲೆಂಡ್​ ನೆಲದಲ್ಲಿ ಡಬಲ್​ ಹಂಡ್ರೆಡ್ ಬಾರಿಸಿಲ್ಲ. ಗಂಗೂಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈ ಎಲ್ಲರೂ ಕ್ಯಾಪ್ಟನ್ ಆಗಿದ್ದರೂ ಆಂಗ್ಲರ ನಾಡಿನಲ್ಲಿ ದ್ವಿಶತಕ ಗಳಿಸಿಲ್ಲ. ಆದರೆ ಶುಭ್​ಮನ್ ಗಿಲ್ ಅವರು ದ್ವಿಶತಕ ಬಾರಿಸುವ ಮೂಲಕ ಮಹತ್ತರವಾದ ಸಾಧನೆ ಮಾಡಿದವರು ಆಗಿದ್ದಾರೆ. ​ಸದ್ಯ ಭಾರತ 500 ರನ್​ಗಳತ್ತ ಮುನ್ನುಗ್ಗುತ್ತಿದೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment