ಗಿಲ್ ಭರ್ಜರಿ ಹ್ಯಾಟ್ರಿಕ್​ ಅರ್ಧಶತಕ.. 2 ರನ್​ ಇಂದ ಸುದರ್ಶನ್ ಹಾಫ್​ಸೆಂಚುರಿ ಮಿಸ್

author-image
Bheemappa
Updated On
ಹೈದ್ರಾಬಾದ್​ ಪ್ಲೇ ಆಫ್​ ಕನಸು ಭಗ್ನ..? ಬೃಹತ್ ಟಾರ್ಗೆಟ್​ ನೀಡಿದ್ದ ಗಿಲ್ ಪಡೆಗೆ ಗೆಲುವು
Advertisment
  • ಟಾಸ್ ಸೋತರೂ ಮೊದಲ ಬ್ಯಾಟಿಂಗ್ ಮಾಡಿದ ಜಿಟಿ
  • SRH​ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಓಪನರ್ಸ್
  • 4, 4, 4, 4, 4, 4, 6, 6; ಶುಭ್​ಮನ್ ಅಮೋಘ ಅರ್ಧಶತಕ

ಸನ್​ ರೈಸರ್ಸ್​ ಹೈದ್ರಾಬಾದ್ ವಿರುದ್ಧ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡದ ಕ್ಯಾಪ್ಟನ್​ ಶುಭ್​ಮನ್​ ಗಿಲ್ ಅಮೋಘವಾದ ಅರ್ಧಶತಕ ಬಾರಿಸಿದ್ದಾರೆ.

ಅಹಮದಾಬಾದ್​ನ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದ್ರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಹೀಗಾಗಿ ಗುಜರಾತ್​ ಟೈಟನ್ಸ್​ ಮೊದಲ ಬ್ಯಾಟಿಂಗ್​ ಮಾಡುತ್ತಿದೆ. ಪಂದ್ಯದಲ್ಲಿ ಓಪನರ್ಸ್ ಅಗಿ ಕ್ರೀಸ್​ಗೆ​ ಆಗಮಿಸಿದ ಕ್ಯಾಪ್ಟನ್ ಶುಭ್​ಮನ್ ಹಾಗೂ ಸಾಯಿ ಸುದರ್ಶನ್​ ಒಳ್ಳೆಯ ಆರಂಭ ಪಡೆದರು.

ಸಾಯಿ ಸುದರ್ಶನ್ 48 ರನ್​ಗಳಿಂದ ಆಡುವಾಗ ಕೀಪರ್​ಗೆ ಕ್ಯಾಚ್​ ಕೊಟ್ಟು ಹೊರ ನಡೆದರು. ಹಾಫ್​ ಸೆಂಚುರಿ ಹೊಸ್ತಿಲಿನಲ್ಲಿ ಸುದರ್ಶನ್ ಮತ್ತೊಮ್ಮೆ ಎಡವಿ ಬಿದ್ದರು. ಪಂದ್ಯದಲ್ಲಿ ಕೇವಲ 23 ಬಾಲ್​ಗಳನ್ನು ಎದುರಿಸಿದ ಸುದರ್ಶನ್, ಸಿಕ್ಸರ್​ಗಳಿಲ್ಲದೇ ಕೇವಲ 9 ಬೌಂಡರಿಗಳಿಂದ 48 ರನ್​ ಗಳಿಸಿದರು.

ಇದನ್ನೂ ಓದಿ:RCB vs CSK ಹೈವೋಲ್ಟೇಜ್ ಪಂದ್ಯ ನಡೆಯುತ್ತಾ.. ವೆದರ್ ರಿಪೋರ್ಟ್ ಏನ್ ಹೇಳುತ್ತೆ?

publive-image

ಆದರೆ ಇನ್ನೊಂದೆಡೆ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಶುಭ್​ಮನ್​ ಗಿಲ್, ಹೈದ್ರಾಬಾದ್​ ಬೌಲರ್​ಗಳನ್ನ ಬೆಂಡೆತ್ತಿದರು. ಕೇವಲ 26 ಬಾಲ್​ಗಳಲ್ಲಿ ಹಾಫ್​ಸೆಂಚುರಿ ಬಾರಿಸಿದರು. ಇದರಲ್ಲಿ 6 ಬೌಂಡರಿ ಜೊತೆಗೆ 2 ಬಿಗ್​ ಸಿಕ್ಸರ್​ಗಳು ಕೂಡ ಸೇರಿವೆ. ಪಂದ್ಯದಲ್ಲಿ ಒಟ್ಟು 38 ಎಸೆತ ಎದುರಿಸಿದ ಗಿಲ್ 10 ಫೋರ್, 2 ಸಿಕ್ಸರ್​​ನಿಂದ 76 ರನ್​ ಗಳಿಸಿ ರನೌಟ್​ ಆದರು.

ಇನ್ನು ಇದು ಶುಭ್​ಮನ್ ಗಿಲ್ ಅವರ 25ನೇ ಐಪಿಎಲ್​ ಅರ್ಧಶತಕವಾಗಿದ್ದು ಈ ಸೀಸನ್​ನಲ್ಲಿ 5ನೇ ಅರ್ಧಶತಕವಾಗಿದೆ. ಅಲ್ಲದೇ ಹ್ಯಾಟ್ರಿಕ್​ ಹಾಫ್​​ಸೆಂಚುರಿಯನ್ನು ಗಿಲ್ ಗಳಿಸಿದಂತೆ ಅಗಿದೆ. ಶುಭ್​ಮನ್ ಗಿಲ್ ಕೋಲ್ಕತ್ತಾ ವಿರುದ್ಧ 90 ರನ್​ ಗಳಿಸಿದ್ದರು. ಇದಾದ ಮೇಲೆ ರಾಜಸ್ಥಾನ ರಾಯಲ್ಸ್​ ಜೊತೆ 84 ರನ್​ಗಳನ್ನು ಸಿಡಿಸಿದ್ದರು. ಈ ಎರಡು ಅರ್ಧಶತಕದ ಬಳಿಕ ಇದೀಗ ಹೈದ್ರಾಬಾದ್​ ವಿರುದ್ಧವೂ ಅಮೋಘವಾದ ಹಾಫ್​ಸೆಂಚುರಿ ಸಿಡಿಸುವ ಮೂಲಕ ಹ್ಯಾಟ್ರಿಕ್​ ಸಾಧನೆ ಮಾಡಿದಂತೆ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment