/newsfirstlive-kannada/media/post_attachments/wp-content/uploads/2025/06/GILL-3.jpg)
ಟೀಮ್​ ಇಂಡಿಯಾ ಟೆಸ್ಟ್​​ ತಂಡದಲ್ಲಿ ಹೊಸ ಪರ್ವದ ಆರಂಭಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಇಂಗ್ಲೆಂಡ್​​ ಸರಣಿಯ ಆರಂಭದೊಂದಿಗೆ ಕ್ಯಾಪ್ಟನ್​ ಗಿಲ್​ ಪರ್ವ ಅಧಿಕೃತವಾಗಿ ಆರಂಭವಾಗಲಿದೆ. ಶುಭಾರಂಭದ ನಿರೀಕ್ಷೆಯಲ್ಲಿರೋ ಗಿಲ್​, ಆಂಗ್ಲರ ನಾಡಲ್ಲಿ ಇತಿಹಾಸ ಸೃಷ್ಟಿಸೋ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಕೇವಲ ಇದೊಂದು ಸರಣಿಯಲ್ಲಿ ಸುದೀರ್ಘ ಕಾಲ ತಂಡವನ್ನ ಮುನ್ನಡೆಸಲು ಹಲವು ಪ್ಲಾನ್​​ ರೂಪಿಸಿಕೊಂಡಿದ್ದಾರೆ. ನಾಯಕನ ಪಟ್ಟವೇರಿದ ಬಳಿಕ ಮೊದಲ ಬಾರಿ ಗಿಲ್​ ಮಾತನಾಡಿದ್ದಾರೆ.
ಟೆಸ್ಟ್​ ಚಾಂಪಿಯನ್​ಶಿಪ್ ಮೆಸ್​​​​ ಗೆಲ್ಲೋದೇ ಗುರಿ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನ ಮೊದಲ 2 ಆವೃತ್ತಿಗಳಲ್ಲಿ ಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ಎಡವಿತ್ತು. ಅಂತಿಮ ಪಂದ್ಯಗಳಲ್ಲಿ ಮೊದಲ ಬಾರಿ ನ್ಯೂಜಿಲೆಂಡ್​, 2ನೇ ಬಾರಿ ಆಸಿಸ್​ ಎದುರು ಸೋಲುಂಡಿತ್ತು. 3ನೇ ಸೀಸನ್​ನಲ್ಲಿ ಫೈನಲ್​ ಕ್ವಾಲಿಫೈ ಆಗುವಲ್ಲೇ ಟೀಮ್​ ಇಂಡಿಯಾ ವೈಫಲ್ಯ ಅನುಭವಿಸಿತ್ತು. ಇದೀಗ ಗಿಲ್​ ಟೀಮ್​ ಇಂಡಿಯಾವನ್ನ ಟೆಸ್ಟ್​ನಲ್ಲಿ ಚಾಂಪಿಯನ್​ ಮಾಡುವ ಗುರಿ ಇಟ್ಕೊಂಡಿದ್ದಾರೆ.
ಗಂಭೀರ್​​, ಅಗರ್ಕರ್​ ಕೊಟ್ಟಿರೋ ಟಾಸ್ಕ್​ ಏನು?
ನ್ಯೂಜಿಲೆಂಡ್​ ಎದುರಿನ ಸರಣಿ, ಆಸ್ಟ್ರೇಲಿಯಾ ಪ್ರವಾಸದ ಹೀನಾಯ ವೈಫಲ್ಯದ ಬೆನ್ನಲ್ಲೇ ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದೆ. ಈ ಬದಲಾವಣೆಯ ಭಾಗವಾಗಿ ಗಿಲ್​ಗೆ ಪಟ್ಟಾಭಿಷೇಕ ಮಾಡಲಾಗಿದೆ. ಟೀಮ್​ ಇಂಡಿಯಾದ ನಾಯಕತ್ವ ಅಂದ್ರೆ ಅದು ಸುಮ್ಮನೇ ಬರಲ್ಲ. ಷರತ್ತುಗಳು ಅನ್ವಯ ಅನ್ನೋ ಟ್ಯಾಗ್​ ಇದ್ದೇ ಇರುತ್ತದೆ. ಅತಿ ಹೆಚ್ಚು ಪ್ರೆಶರ್​, ಎಕ್ಸ್​ಪೆಕ್ಟೇಶನ್​ ಎಲ್ಲವೂ ಇರುತ್ತದೆ. ಸೆಲೆಕ್ಷನ್​ ಕಮಿಟಿ ಮುಖ್ಯಸ್ಥ ಅಜಿತ್​ ಅಗರ್ಕರ್, ಹೆಡ್​​ಕೋಚ್​ ಗೌತಮ್​ ಗಂಭೀರ್​ ಇದ್ಯಾವುದೇ ಒತ್ತಡವನ್ನ ಗಿಲ್​ಗೆ ಹೇರಿಲ್ಲವಂತೆ..
ಆಟಗಾರರಿಗೆ ಸ್ವಾತಂತ್ರ್ಯ ನನ್ನ ಮೂಲ ಮಂತ್ರ
ಜಂಟಲ್​ಮನ್​ ಗೇಮ್​ ಕ್ರಿಕೆಟ್​ನಲ್ಲಿ ಆಟಗಾರರಿಗೆ ಸ್ವಾತಂತ್ರ್ಯ ಅನ್ನೋದು ಬಹುಮುಖ್ಯ. ತನ್ನ ಕ್ಯಾಪ್ಟನ್ಸಿ ಸ್ಟೈಲ್​ ಬಗ್ಗೆ ಮಾತನಾಡಿರೋ ಗಿಲ್​, ಆಟಗಾರರ ಸಂಪೂರ್ಣ ಸ್ವಾತಂತ್ರ್ಯ ನೀಡೋದಾಗಿ ಹೇಳಿದ್ದಾರೆ. ಮೊದಲು ಅವರ ಪ್ಲಾನ್​​ಗೆ ಪ್ರಿಪರೆನ್ಸ್​ ಕೊಡ್ತೀನಿ. ಅದು ವರ್ಕ್​ ಆಗಲಿಲ್ಲ ಅಂದ್ರೆ ನನ್ನ ಸಲಹೆ ನೀಡೋದಾಗಿ ಗಿಲ್​ ತನ್ನ ಕ್ಯಾಪ್ಟೆನ್ಸಿ ಮಂತ್ರವನ್ನ ರಿವೀಲ್​ ಮಾಡಿದ್ದಾರೆ.
ಡ್ರೆಸ್ಸಿಂಗ್​ ರೂಮ್​ ವಾತಾವರಣ ಚೆನ್ನಾಗಿರಬೇಕು..
ಯುವ ನಾಯಕ ಗಿಲ್​​ ಮುಂದಿರೋ ಬಿಗ್ಗೆಸ್ಟ್​ ಟಾಸ್ಕ್​ ಡ್ರೆಸ್ಸಿಂಗ್​​ ರೂಮ್​ನ ವಾತಾವರಣ ಚೆನ್ನಾಗಿಟ್ಟುಕೊಳ್ಳೋದು. ಕೊಹ್ಲಿ, ರೋಹಿತ್​ ಶರ್ಮಾರಂತಹ ಸೀನಿಯರ್​ ಆಟಗಾರರು ತಂಡದಲ್ಲಿಲ್ಲ. ಹಲವು ಯುವ ಆಟಗಾರರು ತಂಡಕ್ಕೆ ಬಂದಿದ್ದಾರೆ. ಇವ್ರ ಜೊತೆಗೆ ಗಿಲ್​ಗಿಂತ ಸೀನಿಯರ್​ ಆಟಗಾರರು ಕೂಡ ತಂಡದಲ್ಲಿದ್ದಾರೆ. ಯುವ ಹಾಗೂ ಅನುಭವಿ ಒಳಗೊಂಡ ತಂಡವನ್ನ 25 ವರ್ಷದ ಹ್ಯಾಂಡಲ್​ ಮಾಡಬೇಕಿದೆ. ಈ ಬಿಗ್​ ಟಾಸ್ಕ್​ ಎದುರಿಸೋಕೆ ಸ್ಪೆಷಲ್​ ಪ್ಲಾನ್​ನೊಂದಿಗೆ ಗಿಲ್​ ರೆಡಿಯಾಗಿದ್ದಾರೆ.
ಇದನ್ನೂ ಓದಿ: ಇಂಡಿಯಾ vs ಇಂಡಿಯಾ A ಅಭ್ಯಾಸ​ ಪಂದ್ಯ.. KL ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್..!
ರೋಹಿತ್​, ಕೊಹ್ಲಿ ಜೊತೆ ಆಡಿದ ಅನುಭ
ಟೀಮ್​ ಇಂಡಿಯಾದ ಮಾಜಿ ನಾಯಕರಾದ ರೋಹಿತ್​ ಶರ್ಮಾ, ವಿರಾಟ್​​ ಕೊಹ್ಲಿ ನಾಯಕತ್ವದಡಿಯಲ್ಲಿ ಆಡಿದ್ರ ಅನುಭವ ನಾಯಕನಾಗಿ ನನಗೆ ಸಹಾಯ ಮಾಡುತ್ತೆ ಅನ್ನೋ ಗಿಲ್​ ನಂಬಿಕೆಯಾಗಿದೆ. ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ ತಂಡವನ್ನ ಮುನ್ನಡೆಸ್ತಿದ್ದ ಬಗೆಯನ್ನ ನೋಡಿ ನಾನು ಬಹಳಷ್ಟು ಕಲಿತಿದ್ದೇನೆ. ಆ ಅನುಭವ ನಾಯಕನಾಗಿ ನನಗೆ ನೆರವಾಗುತ್ತೆ ಅನ್ನೋದು ಗಿಲ್​ ನಂಬಿಕೆ ಆಗಿದೆ.
ಕ್ರಿಕೆಟ್​ ಕರಿಯರ್​ನ​ ಹೊಸ ಅಧ್ಯಾಯ ಆರಂಭಿಸೋಕೆ ಗಿಲ್​ ಫುಲ್​ ಕಾನ್ಫಿಡೆಂಟ್​ ಆಗಿ ಸಜ್ಜಾಗಿದ್ದಾರೆ. ಅಂದುಕೊಂಡಂತೆ ಆಂಗ್ಲರ ನಾಡಲ್ಲಿ ಶುಭ್​ಮನ್​ ಶುಭಾರಂಭ ಮಾಡಲಿ. ಟೀಮ್​ ಇಂಡಿಯಾ ಸರಣಿ ಗೆಲ್ಲಲಿ ಅನ್ನೋದು ನಮ್ಮ ಆಶಯವೂ ಕೂಡ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ