/newsfirstlive-kannada/media/post_attachments/wp-content/uploads/2025/05/GILL.jpg)
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಬ್ಮನ್ ಗಿಲ್ ಅವರು, ತುಂಬಾ ಗರಂ ಆಗಿ ಕಾಣಿಸಿಕೊಂಡರು. ಅದಕ್ಕೆ ಕಾರಣ ಅಂಪೈರ್ಗಳು ಕೊಟ್ಟ ತೀರ್ಪು.
ಬ್ಯಾಟಿಂಗ್ ವೇಳೆ ತಮ್ಮನ್ನು ಔಟ್ ಎಂದು ಘೋಷಿಸಿದಾಗ ನೇರವಾಗಿ ಅಂಪೈರ್ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಅಲ್ಲದೇ ಗಿಲ್ ಅವರ ಮುಖದಲ್ಲಿ ಕೋಪ ಎದ್ದು ಕಾಣುತಿತ್ತು. ಅಷ್ಟಕ್ಕೆ ಗಿಲ್ ಅವರ ಕೋಪ ತಣ್ಣಗೆ ಆಗಲಿಲ್ಲ. ತಾಳ್ಮೆ ಕಳೆದುಕೊಂಡ ಗಿಲ್, ಫೀಲ್ಡಿಂಗ್ ಅವಧಿಯಲ್ಲೂ ಅಂಪೈರ್ ಜೊತೆ ವಾಗ್ವಾದಕ್ಕೆ ಇಳಿದರು.
ಇದನ್ನೂ ಓದಿ: ಪಾಕ್ನ ಬಣ್ಣ ಬಯಲು ಮಾಡಿದ NIA.. ಪಹಲ್ಗಾಮ್ ದಾಳಿ ತನಿಖೆಗೆ ಹೊಸ ತಿರುವು..!
14ನೇ ಓವರ್ನಲ್ಲಿ ಅಭಿಷೇಕ್ ಶರ್ಮಾಗೆ ವಿಕೆಟ್ ಪಡೆಯಲು ಗುಜರಾತ್ ಟೈಟನ್ಸ್ ಡಿಆರ್ಎಸ್ ಮೂಲಕ ಮನವಿ ಮಾಡಿಕೊಂಡಿತ್ತು. ಆದರೆ ಥರ್ಡ್ ಅಂಪೈರ್, ಔಟಿಲ್ಲ ಎಂದು ಘೋಷಣೆ ಮಾಡಿದರು. ಅಂಪೈರ್ ಕಾಲ್ ಆಧಾರದ ಮೇಲೆ ಔಟ್ ನೀಡಲು ನಿರಾಕರಿಸಿದರು. ಆದರೆ ಅದು ಔಟ್ ಎಂದು ವಾದಿಸಿದ ಗಿಲ್, ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲೇ ಇವತ್ತು RCB ಮ್ಯಾಚ್.. ಫ್ಯಾನ್ಸ್ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ
ಕೆಲವು ಸೆಕೆಂಡ್ಗಳ ಬಳಿಕ ಅಂಪೈರ್ ಮತ್ತು ಗಿಲ್ ನಡುವಿನ ವಾಗ್ಯುದ್ಧ ಶಾಂತಗೊಂಡಿತ್ತು. ಬೆನ್ನಲ್ಲೇ, ಫಿಸಿಯೋ ಮೂಲಕ ರಿಕವರಿ ಆಗುತ್ತಿದ್ದ ಅಭಿಷೇಕ್ ಶರ್ಮಾ ಬಳಿಕ ಬಂದ ಗಿಲ್, ಅಂಪೈರ್ ಬಳಿ ಅಸಮಾಧಾನ ಹೊರ ಹಾಕಿದರು. ಅಭಿಷೇಕ್ ಶರ್ಮಾ ಕಾಲಿಗೆ ಒದ್ದು ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗಿಲ್ ಅವರು ಅಂಪೈರ್ ಮೇಲಿನ ಕೋಪವನ್ನು ಅಭಿಷೇಕ್ ಶರ್ಮಾ ಮೇಲೆ ತೋರಿಸಿಕೊಂಡಿದ್ದಾರೆ. ಆದರೆ ಅಭಿಷೇಕ್ ಶರ್ಮಾ, ಗಿಲ್ ಒದೆಯುತ್ತಿದ್ದಂತೆಯೇ, ನಗುತ್ತಲೇ ಸ್ವೀಕಾರ ಮಾಡಿದರು. ಗಿಲ್ ಮತ್ತು ಅಭಿಷೇಕ್ ಮಧ್ಯೆ ಉತ್ತಮ ಬಾಂಧವ್ಯ ಇದೆ. ಇಬ್ಬರು ಟೀಂ ಇಂಡಿಯಾದ ಆರಂಭಿಕ ಆಟಗಾರರು. ಜೊತೆಗೆ ಒಳ್ಳೆಯ ಸ್ನೇಹಿತರೂ ಹೌದು.
ಇದನ್ನೂ ಓದಿ: ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಮಳೆಯ ಆತಂಕ.. ಹವಾಮಾನ ಇಲಾಖೆ ಏನು ಹೇಳಿದೆ..?
https://twitter.com/TheKalkispeaks/status/1918357102805848547
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್