ಟೆಸ್ಟ್​ನಲ್ಲಿ ‘ವಿರಾಟ್​’ರೂಪ ದರ್ಶನ.. ಇಂಗ್ಲೆಂಡ್ ಬ್ಯಾಟರ್​​ಗಳ ಮೇಲೆ ಕೆಂಡಕಾರಿದ ಕ್ಯಾಪ್ಟನ್ ಗಿಲ್​​!

author-image
Bheemappa
Updated On
ಟೆಸ್ಟ್​ನಲ್ಲಿ ‘ವಿರಾಟ್​’ರೂಪ ದರ್ಶನ.. ಇಂಗ್ಲೆಂಡ್ ಬ್ಯಾಟರ್​​ಗಳ ಮೇಲೆ ಕೆಂಡಕಾರಿದ ಕ್ಯಾಪ್ಟನ್ ಗಿಲ್​​!
Advertisment
  • ವಿರಾಟ್ ಕೊಹ್ಲಿ ನಾಯಕತ್ವ ನೆನಪಿಸಿತಾ ಪಂಜಾಬ್ ಪುತ್ತರ್ ಕ್ಯಾಪ್ಟನ್ಸಿ?
  • ಮೊದಲ ನಾಯಕತ್ವದ ಪಂದ್ಯದಲ್ಲಿ ಸೆಂಚುರಿ ಬಾರಿಸಿರುವ ಶುಭ್​​ಮನ್​
  • ಶುಭ್​ಮನ್ ಗಿಲ್ ಅವರು ಕಿಂಗ್ ಕೊಹ್ಲಿ ಹಾದಿಯಲ್ಲೇ ಸಾಗುತ್ತಿದ್ದಾರಾ?

ಟೀಮ್ ಇಂಡಿಯಾ ಕ್ರಿಕೆಟ್ ಫ್ಯಾನ್ಸ್​ಗೆ ಒಂದು ನೋವಿತ್ತು. ವಿರಾಟ್ ಕೊಹ್ಲಿ ಇಲ್ಲದ, ಟೆಸ್ಟ್ ಕ್ರಿಕೆಟ್ ನಿಜಕ್ಕೂ ಬೋರಿಂಗ್, ಹೇಗಪ್ಪ ನೋಡೋದು ಅಂತಾ. ಲಾರ್ಡ್ಸ್​ ಟೆಸ್ಟ್​ನಲ್ಲಿ ನಮಗೆ ವಿರಾಟರೂಪ ದರ್ಶನವಾಗಿದೆ. ಬ್ಯಾಟಿಂಗ್​ನಲ್ಲಿ ಮಾತ್ರವಲ್ಲ, ಕ್ಯಾಪ್ಟನ್ಸಿಯಲ್ಲಿ ಪ್ರಿನ್ಸ್​ ಶುಭ್​ಮನ್​ ಗಿಲ್​, ಕಿಂಗ್​ ಕೊಹ್ಲಿಯನ್ನ ಫಾಲೋ ಮಾಡ್ತಿದ್ದಾರೆ.

2021 ಲಾರ್ಡ್ಸ್​​​ ಟೆಸ್ಟ್​ನಲ್ಲಿ ಕಿಂಗ್ ಕೊಹ್ಲಿ ಉಗ್ರಾವತಾರ..!

ಡಿಫರೆಂಟ್.. ಬಟ್​.. ಸೇಮ್ ಟು ಸೇಮ್.. ವಿರಾಟ್ ಕೊಹ್ಲಿ ರೋಷಾವೇಶ. ಶುಭ್​ಮನ್ ಗಿಲ್​ರ ಉಗ್ರರೂಪ ಸೇಮ್ ಟು ಸೇಮ್. ಲಾರ್ಡ್ಸ್​ ಟೆಸ್ಟ್​ನ 3ನೇ ದಿನದಾಟದ ಕೊನೆಯಲ್ಲಿ ಗಿಲ್​ ಇಂಗ್ಲೆಂಡ್ ಬ್ಯಾಟರ್​​ಗಳ ಮೇಲೆ ಕೆಂಡಕಾರಿದರು. ಪಂಜಾಬ್ ಪುತ್ತರ್​ ರೋಷಾಗ್ನಿ ಆ ಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿತು.

publive-image

ಕಿಂಗ್ ಕೊಹ್ಲಿ ಸ್ಟ್ರೈಲ್​​ನಲ್ಲೇ ಇಂಗ್ಲೆಂಡ್​ಗೆ​​ ವಾರ್ನಿಂಗ್..!

ಶುಭ್​ಮನ್ ಕ್ಯಾಪ್ಟನ್​ ಆದ್ಮೇಲೆ ಎಲ್ಲರೂ ಊಹಿಸಿದ್ದು, ಪಕ್ಕಾ ಕೂಲ್ ಕ್ಯಾಪ್ಟನ್ ಆಗ್ತಾರೆ ಅಂತ. ಆದ್ರೆ, ಮೊದಲ ಸರಣಿಯಲ್ಲೇ ಅಗ್ರೆಸ್ಸಿವ್ ಕ್ಯಾಪ್ಟನ್ಸಿ ಪ್ರದರ್ಶಿಸಿರುವ ಶುಭ್​ಮನ್ ಗಿಲ್, ವಿರಾಟ್​ ಕೊಹ್ಲಿ ಸ್ಟ್ರೈಲ್ ಆಫ್ ಕ್ಯಾಪ್ಟನ್ಸಿಯನ್ನ ನೆನಪಿಸಿದ್ದಾರೆ.

ಲಾರ್ಡ್ಸ್​ ಟೆಸ್ಟ್​ನ 3ನೇ ದಿನದಾಟ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಟೈಮ್ ವೇಸ್ಟ್​ ಮಾಡ್ತಿತ್ತು. ಇದ್ರಿಂದ ಕುಪಿತಗೊಂಡ ಶುಭ್​ಮನ್ ಗಿಲ್​, ಜಾಕ್ ಕ್ರಾವ್ಲಿ ಮೇಲೆ ಕೆಂಡ ಕಾರಿದರು. ಬೆರಳು ತೋರಿಸಿ ಥೇಟ್​ ವಿರಾಟ್ ಕೊಹ್ಲಿಯಂತೆಯೇ ವಾರ್ನಿಂಗ್ ನೀಡಿದರು.

ಅಷ್ಟೆ ಅಲ್ಲ, ಸಬೂಬು ನೀಡಲು ಬಂದಿದ್ದ ಬೆನ್ ಡಕೆಟ್​ಗೆ ಶುಭ್​ಮನ್ ಗಿಲ್​ಗೆ ಕಣ್ಣಲ್ಲೇ ಕಣ್ಣಿಟ್ಟು ದಿಟ್ಟ ಉತ್ತರ ನೀಡ್ತಿದರು. ಇದಲ್ಲೆವೂ ವಿರಾಟ್​ ಕೊಹ್ಲಿಯ ಕ್ಯಾಪ್ಟನ್ಸಿಯನ್ನೇ ನೆನಪಿಸಿತ್ತು.

ಕ್ಯಾಪ್ಟನ್ಸಿ ಮಾತ್ರವಲ್ಲ..! ಆಟವೂ ಕೊಹ್ಲಿಯನ್ನೇ ನೆನಪಿಸುತ್ತೆ..!

ವಿರಾಟ್​​ ಕೊಹ್ಲಿಯದ್ದು, ಏಟಿಗೆ ಏಟು ತಿರುಗೇಟು ನೀಡುವ ಸ್ವಭಾವ. ಅದನ್ನೇ ಶುಭ್​ಮನ್ ಗಿಲ್​ ನೆನಪಿಸಿದ್ದಾರೆ. ಕ್ಯಾಪ್ಟನ್ಸಿಯಲ್ಲಿ ಕೊಹ್ಲಿಯನ್ನೇ ಫಾಲೋ ಮಾಡೋ ಮುನ್ಸೂಚನೆ ಶುಭ್​ಮನ್ ನೀಡಿದ್ದಾರೆ. ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಅನ್ನೋದನ್ನೂ ಪ್ರೂವ್​ ಮಾಡಿದ್ದಾರೆ.

ಇದನ್ನೂ ಓದಿ: ಟೆಸ್ಟ್​​ನಲ್ಲಿ ಒಂದೇ ಚೆಂಡಿನಿಂದ 80 ಓವರ್​ ಮಾಡಬೇಕಾ..? ಡ್ಯೂಕ್ ಬಾಲ್ ಬಗ್ಗೆ ಗಿಲ್, ಸ್ಟೋಕ್ಸ್ ಅಸಮಾಧಾನ!

publive-image

ವಿರಾಟ್​, ಟೆಸ್ಟ್​ ನಾಯಕನಾದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. 2ನೇ ಟೆಸ್ಟ್​ನಲ್ಲೂ ಶತಕ ದಾಖಲಿಸಿದ್ದರು. ಅದೇ ಮಾದರಿಯಲ್ಲೇ ಶುಭ್​ಮನ್, ಟೆಸ್ಟ್ ತಂಡದ ನಾಯಕನಾದ ಮೊದಲ ಹಾಗೂ 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸಿದ್ದ ಸಿಡಿಸಿದ್ದಾರೆ. ವಿರಾಟ್​ ಕೊಹ್ಲಿಯಿಂದ ತೆರವಾದ ನಂಬರ್​-4 ಸ್ಲಾಟ್​ನಲ್ಲೇ ಬ್ಯಾಟಿಂಗ್ ಮಾಡ್ತಿರುವ ಶುಭ್​ಮನ್, ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲೇ ಅನ್ನೋದನ್ನ ನಿರೂಪಿಸಿದ್ದಾರೆ.

ಆನ್​ಫೀಲ್ಡ್​ನಲ್ಲಿ ಕೊಹ್ಲಿ ಸ್ಟ್ರೈಲ್ ಆಫ್ ಕ್ಯಾಪ್ಟನ್ಸಿ, ಬ್ಯಾಟಿಂಗ್​ನಿಂದ ಗಿಲ್​ ಗಮನ ಸೆಳೆದಿದ್ದಾರೆ. ​ಅದೇ ಅಗ್ರೆಷನ್, ಅದೇ ಬ್ಯಾಟಿಂಗ್, ಅದೇ ಫೈಟಿಂಗ್ ಸ್ಪಿರಿಟ್ ತೋರಿದ್ದಾರೆ. ಇದೇ ಆಟ ಮುಂದುವರೆಸಿ ವಿರಾಟ್​ ಕೊಹ್ಲಿಯ ಸ್ಥಾನ ಮುಂದೆಯೂ ಶುಭ್​ಮನ್​ ಗಿಲ್​ ಸಮರ್ಥವಾಗಿ ತುಂಬಲಿ ಅನ್ನೋದು ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment