/newsfirstlive-kannada/media/post_attachments/wp-content/uploads/2025/03/Gill.jpg)
ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಓಪನರ್ ಶುಭ್ಮನ್ ಗಿಲ್ ಬಾರಿಸಿದ ಬಾಲ್ ಅನ್ನು ಕಿವೀಸ್ ಪ್ಲೇಯರ್ ಅತ್ಯದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ. ಈ ಮೂಲಕ ಶುಭ್ಮನ್ ಗಿಲ್ 31 ರನ್ಗೆ ತನ್ನ ಬ್ಯಾಟಿಂಗ್ ಮುಗಿಸಿದ್ದಾರೆ.
ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ್ದ ಕಿವೀಸ್ 7 ವಿಕೆಟ್ಗೆ 252 ರನ್ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನ ಹತ್ತಿರುವ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿತ್ತು. ಓಪನರ್ಗಳಾದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಒಳ್ಳೆಯ ಪರ್ಫಾಮೆನ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಅದೊಂದು ಕ್ಯಾಚ್ ಈ ಇಬ್ಬರ ಜೋಡಿಯನ್ನು ಮುರಿಯಿತು.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಇನ್ನೊಬ್ಬ ಯುವತಿ ಜೊತೆ ಸ್ಟಾರ್ ಕ್ರಿಕೆಟರ್ ಚಹಲ್.. ಆ ಹುಡುಗಿ ಯಾರು?
31 ರನ್ ಗಳಿಸಿ ಶುಭ್ಮನ್ ಗಿಲ್, ಕ್ಯಾಪ್ಟನ್ ರೋಹಿತ್ಗೆ ಸಾಥ್ ಕೊಡುತ್ತ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ 19ನೇ ಓವರ್ ಮಾಡಲು ಬಂದ ಸ್ಯಾಂಟ್ನರ್ 3ನೇ ಬಾಲ್ ಹಾಕಿದರು. ಈ ಎಸೆತವನ್ನು ಗಿಲ್ ಗ್ಯಾಪ್ ನೋಡಿ ಜೋರಾಗಿ ಬೌಂಡರಿಗಾಗಿ ಬಾರಿಸಿದ್ದರು. ಆದರೆ ಆಫ್ಸೈಡ್ ಸ್ಟ್ರೇಟ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗ್ಲೇನ್ ಪಿಲೀಫ್ಸ್ ಅತ್ಯದ್ಭುತವಾಗಿ ಜಂಪ್ ಮಾಡಿ ಕ್ಯಾಚ್ ಹಿಡಿದರು.
ಗಿಲ್ ಹೊಡೆದ ಬಾಲ್ ಅನ್ನು ಕ್ಷಣಾರ್ಧದಲ್ಲೇ ಗ್ಲೇನ್ ಪಿಲೀಫ್ಸ್ ಚಂಗನೇ ಹಾರಿ ಹಿಡಿದಿರುವುದು ನೋಡಗರನ್ನ ಅಚ್ಚರಿಗೆ ತಳ್ಳಿದೆ. ಈ ರೀತಿಯೂ ಕ್ಯಾಚ್ ಹಿಡಿಯಬಹುದಾ ಎಂದುಕೊಳ್ಳುವಂತೆ ಚೆಂಡನ್ನು ಹಿಡಿದಿದ್ದರು. ಸದ್ಯ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪ್ರಮುಖವಾದ ಎರಡು ವಿಕೆಟ್ಗಳನ್ನು ಕಳೆದುಕೊಂಡು 26 ಓವರ್ಗೆ 122 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ಕ್ರೀಸ್ನಲ್ಲಿ ಕ್ಯಾಪ್ಟನ್ ರೋಹಿತ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
Flying man does it again 😱
What a catch by Glenn Phillips 🫡#INDvsNZ#ChampionsTrophy2025pic.twitter.com/CXlmPIJpfo
— 𝐊𝐀𝐑𝐍𝐀 🏹🌞🇮🇳 (@Suryaputhra07)
Flying man does it again 😱
What a catch by Glenn Phillips 🫡#INDvsNZ#ChampionsTrophy2025pic.twitter.com/CXlmPIJpfo— 🅐🅣🅗🅤🅛 🕊️ (@Suryaputhra07) March 9, 2025
">March 9, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ