/newsfirstlive-kannada/media/post_attachments/wp-content/uploads/2025/07/JADEJA_SUNDAR_GILL.jpg)
ಇಂಗ್ಲೆಂಡ್​ ವಿರುದ್ಧ ನಡೆದ 4ನೇ ಟೆಸ್ಟ್​ ಪಂದ್ಯವನ್ನು ಶುಭ್​ಮನ್​ ಗಿಲ್​ ನೇತೃತ್ವದ ಟೀಮ್ ಇಂಡಿಯಾ ಡ್ರಾ ಮಾಡಿಕೊಂಡಿದೆ. ಇದರಿಂದ ಭಾರತ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದು ಇನ್ನು ಎಲ್ಲ ಕುತೂಹಲ 5ನೇ ಟೆಸ್ಟ್ ಪಂದ್ಯದ ಮೇಲೆ ಇದೆ.
ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದುಕೊಂಡಿದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡಿ ಕೇವಲ 358 ರನ್​ಗಳಿಗೆ ಆಲೌಟ್​ ಆಗಿತ್ತು. ಇದಾದ ಮೇಲೆ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 669 ರನ್​ಗಳ ಬೃಹತ್​ ಸ್ಕೋರ್ ಕಲೆ ಹಾಕಿ ಆಲೌಟ್​ ಆಗಿದ್ದರು. ಹೀಗಾಗಿ ಇಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲೇ 311 ರನ್​ಗಳ ಮುನ್ನಡೆಯಲ್ಲಿತ್ತು.
/newsfirstlive-kannada/media/post_attachments/wp-content/uploads/2025/07/GILL_100_ENG.jpg)
ಇದಾದ ಮೇಲೆ 4ನೇ ದಿನದಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದ ಟೀಮ್ ಇಂಡಿಯಾ ಬ್ಯಾಟಿಂಗ್​​ನಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಓಪನರ್ ಆದ ಜೈಸ್ವಾಲ್​ ಡಕೌಟ್ ಆಗಿದ್ರೆ, ಇವರ ಬೆನ್ನಲ್ಲೇ ಸಾಯಿ ಸುದರ್ಶನ್​ ಕೂಡ ಡಕೌಟ್ ಆಗಿದ್ದರು. ಆದರೆ ಈ ವೇಳೆ ಕನ್ನಡಿಗ ಕೆ.ಎಲ್ ರಾಹುಲ್ ಜೊತೆಗೂಡಿದ ನಾಯಕ ಗಿಲ್​ ಅತ್ಯುತ್ತಮ ಇನ್ನಿಂಗ್ಸ್​ ಕಟ್ಟಿದ್ದರು.
ಪಂದ್ಯದಲ್ಲಿ ಕೆ.ಎಲ್ ರಾಹುಲ್ ಒಟ್ಟು 230 ಬಾಲ್ ಎದುರಿಸಿ 8 ಬೌಂಡರಿಗಳಿಂದ 90 ರನ್​ ಗಳಿಸಿ ಸೆಂಚುರಿ ಮಿಸ್ ಮಾಡಿಕೊಂಡಿದ್ದರು. ಆದರೆ ನಾಯಕ ಗಿಲ್ ಅವರು ಒಟ್ಟು 232 ಬಾಲ್​ಗಳನ್ನು ಎದುರಿಸಿ 12 ಬೌಂಡರಿಗಳಿಂದ ಅದ್ಭುತವಾದ ಶತಕ ಬಾರಿಸಿದರು. 103 ರನ್​ ಗಳಿಸಿ ಆಡುವಾಗ ಜೆಮಿಯಾ ಸ್ಮಿತ್​​ಗೆ ಕ್ಯಾಚ್ ಕೊಟ್ಟು ಹೊರ ನಡೆದರು. ಇನ್ನು ಈ ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಶುಭ್​ಮನ್ ಗಿಲ್ ಅವರ 4ನೇ ಸೆಂಚುರಿ ಇದಾಗಿತ್ತು.
/newsfirstlive-kannada/media/post_attachments/wp-content/uploads/2025/07/SUNDAR.jpg)
ರಾಹುಲ್​ ಬಳಿಕ ಕ್ರೀಸ್​ಗೆ ಆಗಮಿಸಿದ್ದ ವಾಷಿಂಗ್ಟನ್ ಸುಂದರ್, ಇಂಗ್ಲೆಂಡ್​ ಬೌಲರ್​ಗಳಿಗೆ ಬೆವರಿಸಿದರು. ಆಲ್​ರೌಂಡರ್ ಬ್ಯಾಟಿಂಗ್ ಪ್ರದರ್ಶನ ಮಾಡಿದ ಸುಂದರ್ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನಿಂಗ್ಸ್​ನಲ್ಲಿ 206 ಬಾಲ್ ಆಡಿದ ಅವರು 9 ಬೌಂಡರಿ ಹಾಗೂ 1 ಸಿಕ್ಸರ್​ನಿಂದ ಅಜೇಯ 101 ರನ್​ ಗಳಿಸಿದರು. ಈ ಸರಣಿಯಲ್ಲಿ ಸುಂದರ್ ಅವರ ಇದು ಮೊದಲ ಸೆಂಚುರಿಯಾಗಿದೆ.
ಶುಭ್​ಮನ್ ಗಿಲ್ ಔಟ್​ ಆದ ಬಳಿಕ ಕ್ರೀಸ್​ಗೆ ಬಂದಿದ್ದ ಇನ್ನೊಬ್ಬ ಅನುಭವಿ ಆಲ್​ರೌಂಡರ್​ ರವೀಂದ್ರ ಜಡೇಜಾ, ಆಂಗ್ಲರನ್ನ ಮತ್ತೊಮ್ಮೆ ದಂಡಿಸಿದರು. ಬ್ಯಾಟಿಂಗ್​ಗೆ ಬಂದವರೇ ವೇಗದಲ್ಲಿ ರನ್​ಗಳಿಸಲು ಮುಂದಾದರು. ಕೇವಲ 185 ಎಸೆತಗಳಲ್ಲಿ 13 ಮನಮೋಹಕ ಬೌಂಡರಿಗಳು ಹಾಗೂ 1 ಸಿಕ್ಸರ್​ನಿಂದ 107 ರನ್​ಗಳನ್ನ ಚಚ್ಚಿದರು. ಹೀಗಾಗಿ ಸುಂದರ್ ಹಾಗೂ ಜಡೇಜಾ ಇನ್ನು ಔಟ್​ ಆಗೋಲ್ಲ ಎಂದು ಹಾಗೂ ಇಂದು ಟೆಸ್ಟ್​ನ ಕೊನೆ ದಿನವಾಗಿದ್ದರಿಂದ ಇಬ್ಬರು ಕ್ಯಾಪ್ಟನ್​ಗಳು ಡ್ರಾ ಘೋಷಣೆ ಮಾಡಿದರು. ಭಾರತ 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್​​ಗೆ 425 ರನ್​ಗಳನ್ನ ಗಳಿಸಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us