/newsfirstlive-kannada/media/post_attachments/wp-content/uploads/2025/06/GILL_PANT_JAISWAL.jpg)
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್, ನಾಯಕ ಗಿಲ್ ಹಾಗೂ ರಿಷಭ್ ಪಂತ್ ಅವರ ಭರ್ಜರಿ ಶತಕಗಳಿಂದ ಟೀಮ್ ಇಂಡಿಯಾ 471 ರನ್ಗಳಿಗೆ ಆಲೌಟ್ ಆಗಿದೆ.
ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿತು. ಅದರಂತೆ ಭಾರತದ ಪರ ಓಪನರ್ ಆಗಿ ಕ್ರೀಸ್ಗೆ ಬಂದ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್ ರಾಹುಲ್ ಅವರು ಉತ್ತಮ ಆರಂಭ ಪಡೆದರು. 42 ರನ್ ಗಳಿಸಿ ಆಡುವಾಗ ಕೆ.ಎಲ್ ರಾಹುಲ್ ಅವರು, ರೂಟ್ಗೆ ಕ್ಯಾಚ್ ಕೊಟ್ಟು ಹಾಫ್ ಸೆಂಚುರಿ ಮಿಸ್ ಮಾಡಿಕೊಂಡರು.
ಇನ್ನೊಂದೆಡೆ ಬ್ಯಾಟಿಂಗ್ ಮಾಡುತ್ತಿದ್ದ ಜೈಸ್ವಾಲ್, ಭರ್ಜರಿ ಶತಕ ಸಿಡಿಸಿದರು. ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 150 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 1 ಸಿಕ್ಸರ್, 16 ಬೌಂಡರಿಗಳಿಂದ ಅಮೋಘವಾದ ಶತಕ ಬಾರಿಸಿ ಸಂಭ್ರಮಿಸಿದರು. ಬೆನ್ ಸ್ಟೋಕ್ಸ್ ಬೌಲಿಂಗ್ನಲ್ಲಿ ಜೈಸ್ವಾಲ್ ಔಟ್ ಆಗಿ ಹೊರ ನಡೆದರು. ಯಂಗ್ ಬ್ಯಾಟರ್ ಸಾಯಿ ಸುದರ್ಶನ್ 4 ಬಾಲ್ ಆಡಿ ಡಕೌಟ್ ಆದರು.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ನಾಯಕ ಶುಭ್ಮನ್ ಗಿಲ್ ಜವಾಬ್ದಾರಿಯುತ ಆಡ ಆಡಿದರು. ಈ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. 140 ಎಸೆತ ಆಡಿದ ಗಿಲ್ ಅವರು 14 ಬೌಂಡರಿಗಳಿಂದ 102 ರನ್ ಗಳಿಸಿದ್ದರು. ಇಂದು ಕೂಡ ಬ್ಯಾಟಿಂಗ್ ಮುಂದುವರೆಸಿದ್ದ ಗಿಲ್, ಒಟ್ಟು 227 ಎಸೆತಗಳಲ್ಲಿ 19 ಬೌಂಡರಿ ಒಂದು ಸಿಕ್ಸರ್ನಿಂದ 147 ರನ್ ಗಳಿಸಿ ಆಡುವಾಗ ಕ್ಯಾಚ್ ಔಟ್ ಆದರು. ಕೇವಲ 3 ರನ್ಗಳಿಂದ 150 ರನ್ ಮಿಸ್ ಮಾಡಿಕೊಂಡರು.
ಇದನ್ನೂ ಓದಿ:Video; ಸಿಕ್ಸರ್ ಸಿಡಿಸಿ ಸೆಂಚುರಿ ಬಾರಿಸಿದ ರಿಷಭ್ ಪಂತ್, ಫ್ರಂಟ್ಫ್ಲಿಪ್ ಮಾಡಿ ಸೆಲೆಬ್ರೆಷನ್.. ಕನ್ನಡಿಗ ಡಕೌಟ್!
ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಟೆಸ್ಟ್ ಮ್ಯಾಚ್ ಆದರೂ ಏಕದಿನ ಪಂದ್ಯದಂತೆ ರನ್ಗಳು ಹರಿದು ಬಂದವು. ಮೊದಲ ಇನ್ನಿಂಗ್ಸ್ನಲ್ಲಿ 146 ಬಾಲ್ ಎದುರಿಸಿದ ಪಂತ್ 10 ಬೌಂಡರಿ ಹಾಗೂ 3 ಸಿಕ್ಸರ್ಗಳಿಂದ ಹಂಡ್ರೆಡ್ ಬಾರಿಸಿದರು. ಪಂತ್ ಅವರ ಇನ್ನೊಂದು ವಿಶೇಷತೆ ಎಂದರೆ 99 ರನ್ ಆಗಿದ್ದಾಗ ಸಿಕ್ಸರ್ ಬಾರಿಸಿ 100 ರನ್ಗಳ ಗಡಿ ದಾಟಿದರು. ಒಟ್ಟು 178 ಬಾಲ್ಗಳನ್ನು ಆಡಿದ ಪಂತ್ 12 ಬೌಂಡರಿ, 6 ಸಿಕ್ಸರ್ ಸಮೇತ 134 ರನ್ಗಳಿಸಿ, ಎಲ್ಬಿಗೆ ಬಲಿಯಾದರು.
ರಿಷಭ್ ಪಂತ್ ಬಳಿಕ ಬ್ಯಾಟಿಂಗ್ಗೆ ಬಂದ ಯಾವ ಆಟಗಾರನೂ ಸರಿಯಾದ ಪ್ರದರ್ಶನ ತೋರಲಿಲ್ಲ. ಹೀಗಾಗಿ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಒಟ್ಟು 113 ಓವರ್ ಬ್ಯಾಟಿಂಗ್ ಮಾಡಿ ಎಲ್ಲ ವಿಕೆಟ್ ಕಳೆದುಕೊಂಡು 471 ರನ್ಗಳನ್ನು ಗಳಿಸಿದೆ. ಇನ್ನು ಇಂಗ್ಲೆಂಡ್ ಪರ ನಾಯಕ ಬೆನ್ಸ್ಟೋಕ್ಸ್ ಹಾಗೂ ಜೋಶ್ ಟಂಗ್ ತಲಾ 4 ವಿಕೆಟ್ ಪಡೆದಿದ್ದಾರೆ. 2ನೇ ದಿನದಾಟದಲ್ಲಿ ಭಾರತ ಆಲೌಟ್ ಆಗ್ತಿದ್ದಂತೆ ಮೈದಾನದಲ್ಲಿ ಮಳೆ ಬರುತ್ತಿದ್ದರಿಂದ ಸದ್ಯ ಪಂದ್ಯವನ್ನು ನಿಲ್ಲಿಸಲಾಗಿದೆ. ಮಳೆ ನಿಂತರೆ ಇಂಗ್ಲೆಂಡ್ ಬ್ಯಾಟಿಂಗ್ ಮಾಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ