/newsfirstlive-kannada/media/post_attachments/wp-content/uploads/2025/07/GILL_PANT_CATCH_MISS.jpg)
ಮೊದಲ ಟೆಸ್ಟ್​​ನಲ್ಲಿ ಮಾಡಿದ ಯಡವಟ್ಟಿನಿಂದ ಟೀಮ್​ ಇಂಡಿಯಾ ಪಾಠ ಕಲಿತಂತೆ ಕಾಣ್ತಿಲ್ಲ. ಎಡ್ಜ್​​​ಬಾಸ್ಟನ್​ ಟೆಸ್ಟ್​​ನಲ್ಲೂ ಕ್ಯಾಚ್​ ಕೈ ಚೆಲ್ಲಿ ಟೀಮ್​ ಇಂಡಿಯಾ ಕೆಟ್ಟಿದೆ. ಆ 3 ಕ್ಯಾಚ್​ ಹಿಡಿದಿದ್ರೆ ಮ್ಯಾಚ್​ನ ಕಥೆ ಬೇರೆನೇ ಇರುತ್ತಿತ್ತು. ಆದರೆ ಈಗ ಪಾತಾಳಕ್ಕೆ ಕುಸಿಯಬೇಕಿದ್ದ ಇಂಗ್ಲೆಂಡ್​ ದಿಟ್ಟ ಹೋರಾಟದ ಖಡಕ್​ ಆನ್ಸರ್​ ಕೊಟ್ಟಿದೆ.
catch drop match drop ಲೀಡ್ಸ್​ನಲ್ಲಿ ನಡೆದ ಫಸ್ಟ್​ ಟೆಸ್ಟ್​ನಲ್ಲಿ ಕ್ಯಾಚ್​ ಡ್ರಾಪ್​ ಮಾಡಿ ಟೀಮ್​ ಇಂಡಿಯಾ ಪಂದ್ಯದಲ್ಲಿ ಸೋಲಿಗೆ ಶರಣಾಯಿತು. ಆ ಮಹಾ ಪ್ರಮಾದದಿಂದ ಟೀಮ್​ ಇಂಡಿಯಾ ಪಾಠ ಕಲಿತಂತೆ ಕಾಣ್ತಿಲ್ಲ. ಯಾಕಂದ್ರೆ, 2ನೇ ಟೆಸ್ಟ್​ನಲ್ಲೂ ಅದೇ ರಾಗ ಅದೇ ಹಾಡು. ಕ್ಯಾಚ್​ ಡ್ರಾಪ್ ಮಾಡೋ ಕೆಟ್ಟ​​ ಪರಿಪಾಠ ಮುಂದುವರೆದಿದೆ. ಇನ್​​​ಫ್ಯಾಕ್ಟ್ ಫಾಲೋಆನ್​ ಭೀತಿ ಎದುರಿಸ್ತಾ ಇದ್ದ ಇಂಗ್ಲೆಂಡ್ ರೋಚಕ ಕಮ್​ಬ್ಯಾಕ್​ ಮಾಡಿರೋದಕ್ಕೆ ಈ ಕ್ಯಾಚ್​​ ಡ್ರಾಪೇ ಕಾರಣ.
ಕ್ಯಾಚ್​ ಡ್ರಾಪ್​ ನಂ.1: ಸುಲಭದ ಕ್ಯಾಚ್​ ಡ್ರಾಪ್​ ಮಾಡಿದ ಶುಭ್​ಮನ್​
ನಾಯಕನಾಗಿ ಬ್ಯಾಟಿಂಗ್​ನಲ್ಲಿ ಉಳಿದ ಆಟಗಾರರಿಗೆ ಎಕ್ಸಾಂಪಲ್​ ಸೆಟ್​ ಮಾಡ್ತಿರೋ ಶುಭ್​ಮನ್​​ ಗಿಲ್​, ಫೀಲ್ಡಿಂಗ್​ನಲ್ಲಿ ಫ್ಲಾಪ್​ ಆಗಿದ್ದಾರೆ. 37ನೇ ಓವರ್​ನ 2ನೇ ಎಸೆತ ಅದು. ರವೀಂದ್ರ ಜಡೇಜಾ ಬೌಲಿಂಗ್​​ನಲ್ಲಿ ಹ್ಯಾರಿ ಬ್ರೂಕ್​ ಬ್ಯಾಟ್​​ಗೆ ಸವರಿದ ಚೆಂಡು ಸೀದಾ ಸ್ಲಿಪ್​ನಲ್ಲಿ ಶುಭಮನ್​ ಗಿಲ್​ ಕಡೆಗೆ ಬಂತು. ತೀರಾ ಸುಲಭದ ಕ್ಯಾಚ್​ ಅದು. ಅದನ್ನ ಶುಭ್​ಮನ್​ ಗಿಲ್​ ಡ್ರಾಪ್​ ಮಾಡಿಬಿಟ್ಟರು. ಆಗ ಬ್ರೂಕ್​ ಗಳಿಸಿದ್ದಿದ್ದು 63 ರನ್​ ಮಾತ್ರ.
ಕ್ಯಾಚ್​ ಡ್ರಾಪ್​ ನಂ.2: ಜೇಮಿ ಸ್ಮಿತ್​ಗೆ ಸುಂದರ್​​ ಜೀವದಾನ
42ನೇ ಓವರ್​ನಲ್ಲಿ​​ ಮತ್ತೊಂದು ಆಪರ್ಚುನಿಟಿ ಕ್ರಿಯೇಟ್​ ಆಗಿತ್ತು. ಈ ಬಾರಿ ವಾಷಿಂಗ್ಟನ್​ ಸುಂದರ್​ ಬೌಲಿಂಗ್​ನಲ್ಲಿ ವಾಷಿಂಗ್ಟನ್​​ ಸುಂದರ್​​ಗೇ ಕ್ಯಾಚ್​​ ಹಿಡಿಯೋ ಅವಕಾಶ ಸಿಕ್ಕಿತ್ತು. ಆದ್ರೆ ಅವಕಾಶವನ್ನ ಕೈ ಚೆಲ್ಲಿದ ಸುಂದರ್​ ಜೇಮಿ ಸ್ಮಿತ್​ಗೆ ಜೀವದಾನ ನೀಡಿದರು.
ಕ್ಯಾಚ್​ ಡ್ರಾಪ್​ ನಂ.3: ಕ್ಯಾಚ್​ ಬಿಟ್ಟ ಪಂತ್​, ಸ್ಮಿತ್​​ಗೆ ಮತ್ತೊಂದು ಚಾನ್ಸ್​​
ಅಬ್ಬರದ ಆಟದಿಂದ ಟೀಮ್​ ಇಂಡಿಯಾಗೆ ಕಂಟಕವಾಗಿದ್ದ ಜೇಮಿ ಸ್ಮಿತ್​ಗೆ ರಿಷಭ್​ ಪಂತ್​ ಮತ್ತೊಂದು ಜೀವದಾನ ನೀಡಿದರು. 54ನೇ ಓವರ್​ನ ಮೊದಲ ಎಸೆತದಲ್ಲೇ ನಿತೀಶ್​ ರೆಡ್ಡಿ ಮತ್ತೊಂದು ಚಾನ್ಸ್​ನ ಕ್ರಿಯೇಟ್​ ಮಾಡಿದರು. ಆದ್ರೆ, ರಿಷಭ್​ ಪಂತ್​ ಕ್ಯಾಚ್​ ಕೈ ಚೆಲ್ಲಿ ನಿರಾಸೆ ಮೂಡಿಸಿದರು. ಇವುಗಳ ಜೊತೆಗೆ ಇನ್ನೂ 2-3 ಚಾನ್ಸ್​ಗಳೂ ಕ್ರಿಯೇಟ್​ ಆಗಿದ್ವು. ಸುಲಭದ ಕ್ಯಾಚ್​ಗಳನ್ನೇ ಕೈಚೆಲ್ಲಿದ ಮೇಲೆ ಟಫ್​ ಚಾನ್ಸ್​ಗಳನ್ನ ಇವ್ರು ಕ್ಯಾಚ್​ ಆಗಿ ಕನ್ವರ್ಟ್ ಮಾಡ್ತಾರಾ.?
ಇವತ್ತು ಎಡ್ಜ್​​ಬ್ಯಾಸ್ಟನ್​​ ಟೆಸ್ಟ್​ನಲ್ಲಿ ಇಂಗ್ಲೆಂಡ್​ ತಂಡ ರೋಚಕ ಕಮ್​ಬ್ಯಾಕ್​ ಮಾಡಿದೆ ಅಂದ್ರೆ ಅದಕ್ಕೆ ಕಾರಣ ಈ ಕ್ಯಾಚ್​ ಡ್ರಾಪ್​. 84 ರನ್​ಗೆ 5 ವಿಕೆಟ್​ ಕಳೆದುಕೊಂಡು ಫಾಲೋಆನ್​ ಭೀತಿಗೆ ಸಿಲುಕಿದ್ದ ಇಂಗ್ಲೆಂಡ್​​ ಅಂತ್ಯದಲ್ಲಿ ಗಳಿಸಿದ್ದು 407 ರನ್​. ಜೇಮಿ ಸ್ಮಿತ್​- ಹ್ಯಾರಿ ಬ್ರೂಕ್​​​ 5ನೇ ವಿಕೆಟ್​ಗೆ ಆಡಿದ 303 ರನ್​ಗಳ ಪಾರ್ಟನರ್​ಶಿಪ್​ ಇದಕ್ಕೆ ಪ್ರಮುಖ ಕಾರಣ. ಸರಿಯಾಗಿ ಫೀಲ್ಡಿಂಗ್​ ಮಾಡಿದ್ರೆ, 200ರ ಆಸುಪಾಸಿನಲ್ಲಿ ಆಂಗ್ಲರನ್ನ ಕಟ್ಟಿ ಹಾಕಬಹುದಿತ್ತು.
ಮೊದಲ ಪಂದ್ಯದಲ್ಲಿ 6 ಕ್ಯಾಚ್​​ ಡ್ರಾಪ್​, ಇದೀಗ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 3 ಕ್ಯಾಚ್​ಗಳನ್ನ ಟೀಮ್​ ಇಂಡಿಯಾ ಆಟಗಾರರು ಕೈ ಚೆಲ್ಲಿದ್ದಾರೆ. ಇದನ್ನ ನೋಡಿದ ಮೇಲೆ ಇವ್ರು ನಿಜವಾಗ್ಲೂ ಪ್ರೋಫೆಶನಲ್​ ಕ್ರಿಕೆಟರ್ಸಾ.? ಅಥವಾ ಗಲ್ಲಿ ಕ್ರಿಕೆಟರ್ಸಾ.? ಅನ್ನೋ ಡೌಟ್​ ಬರದೇ ಇರಲ್ಲ. ಕೆಟ್ಟ ಮೇಲೂ ಬುದ್ಧಿ ಕಲಿಯಲ್ಲ ಅಂದ್ರೆ, ಏನ್​ ಹೇಳೋದು?.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ