/newsfirstlive-kannada/media/post_attachments/wp-content/uploads/2024/11/GILL_TEST.jpg)
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಲು ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದಲ್ಲಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಭಾರತದ ಆಟಗಾರರು ಮೈದಾನದಲ್ಲಿ ಪ್ರಾಕ್ಟೀಸ್ ಮಾಡುವಾಗ ಒಬ್ಬರಲ್ಲ, ಒಬ್ಬರು ಗಾಯಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಓಪನರ್ ಶುಭ್ಮನ್ ಗಿಲ್ ಅವರು ಗಾಯಕ್ಕೆ ಒಳಗಾಗಿ ಮೊದಲ ಟೆಸ್ಟ್ ಪಂದ್ಯ ಆಡುವುದಿಲ್ಲ ಎಂದು ತಿಳಿದು ಬಂದಿದೆ.
ಶುಭ್ಮನ್ ಗಿಲ್ ಅವರು ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಚೆಂಡು ಅವರ ಎಡಗೈ ಹೆಬ್ಬೆರಳಿಗೆ ಬಲವಾಗಿ ಬಡಿದಿದೆ. ಇದರಿಂದ ನೋವಿಗೆ ಒಳಗಾಗಿರುವ ಗಿಲ್ ಮೊದಲ ಪಂದ್ಯದಲ್ಲಿ ಬ್ಯಾಟ್ ಬೀಸುವುದಿಲ್ಲ ಎನ್ನಲಾಗಿದೆ. ಫಸ್ಟ್ ಸ್ಲಿಪ್ನಲ್ಲಿ ನಿಂತು ಫೀಲ್ಡಿಂಗ್ ಮಾಡುತ್ತಿದ್ದ ಶುಭ್ಮನ್ ಗಿಲ್ ಕ್ಯಾಚ್ ಹಿಡಿಯಲು ಹೋಗಿದ್ದಾರೆ. ಆದರೆ ಈ ವೇಳೆ ಬಾಲ್ ಅವರ ಎಡಗೈನ ಹೆಬ್ಬೆರಳಿಗೆ ತಾಗಿದೆ. ಇದರಿಂದ ಅವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಸಂಜು ಸಿಡಿಸಿದ ಪವರ್ ಫುಲ್ ಸಿಕ್ಸರ್.. ಮಹಿಳಾ ಅಭಿಮಾನಿಗೆ ಬಡಿದ ಚೆಂಡು, ನೋವಿನಿಂದ ಕಣ್ಣೀರು
ಕ್ಯಾಪ್ಟನ್ ರೋಹಿತ್ ಶರ್ಮಾ ಇನ್ನು ಮುಂಬೈನಲ್ಲೇ ಇದ್ದು ಮೊದಲ ಟೆಸ್ಟ್ ಪಂದ್ಯಕ್ಕೆ ಹಾಜರಾಗುವುದಿಲ್ಲ ಎನ್ನಲಾಗಿದೆ. ರೋಹಿತ್ ಹಾಗೂ ರಿತಿಕಾ ದಂಪತಿಗೆ 2ನೇ ಮಗು ಜನಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿಲ್ಲ. ಇದರಿಂದ ಆರಂಭಿಕ ಬ್ಯಾಟ್ಸ್ಮನ್ಗಳ ಕೊರತೆ ಟೀಮ್ ಇಂಡಿಯಾದಲ್ಲಿ ಕಾಡುತ್ತಿದೆ. ಯಶಸ್ವಿ ಜೈಸ್ವಾಲ್ ಜೊತೆ ಓಪನರ್ ಯಾರು ಎಂಬುದು ತಿಳಿದು ಬರಬೇಕಿದೆ.
ಆಸಿಸ್ ವಿರುದ್ಧದ 5 ಪಂದ್ಯಗಳ ಸರಣಿಗೆ ಭಾರತಕ್ಕೆ ಹೆಚ್ಚಿನ ಗಾಯದ ಆತಂಕಗಳು ಕಾಡುತ್ತಿವೆ. ಈ ಸರಣಿಗೆ ತಯಾರಿ ನಡೆಸುವಾಗ ಕೆಎಲ್ ರಾಹುಲ್ ಹಾಗೂ ಸರ್ಫರಾಜ್ ಖಾನ್ ಕೂಡ ನೋವಿಗೆ ಒಳಗಾಗಿದ್ದಾರೆ. ರಾಹುಲ್ ಅವರ ಬಲ ಮೊಣಕೈಗೆ ಪೆಟ್ಟಾಗಿದ್ದು ಅಷ್ಟೇನೂ ಗಂಭೀರವಾಗಿಲ್ಲ. ಅದರಂತೆ ಸರ್ಫರಾಜ್ ಮೊಣಕೈಗೂ ಏಟು ಆಗಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ