newsfirstkannada.com

ಕೊನೆಗೂ ಗಿಲ್ ಜವಾಬ್ದಾರಿಯುತ ಆಟ.. ಟೆಸ್ಟ್​​ನಲ್ಲೂ ಸ್ಫೋಟಕ ಶತಕ ಬಾರಿಸಿದ ಯಂಗ್​ಗನ್..!

Share :

Published February 4, 2024 at 1:29pm

Update February 4, 2024 at 1:32pm

    ಟೀಕೆಗಳಿಗೆ ಶುಬ್ಮನ್ ಗಿಲ್ ‘ಶತಕದ ಉತ್ತರ’

    ಎರಡನೇ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಗಿಲ್ ಆಧಾರ

    ಮೊದಲ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್ ಅದ್ಭುತ ದ್ವಿಶತಕ

ವೈಜಾಗ್​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಶುಭ್​ಮನ್​ ಗಿಲ್​ ಭರ್ಜರಿ ಶತಕ ಸಿಡಿಸಿದಿದ್ದಾರೆ.

ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟೆಸ್ಟ್​ನ 3ನೇ ದಿನದಲ್ಲಿ ಶುಭ್​​ಮನ್ ಗಿಲ್​ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ. 132 ಎಸೆತಗಳನ್ನು ಎದುರಿಸಿದ ಗಿಲ್​ 11 ಬೌಂಡರಿ 2 ಮನಮೋಹಕವಾದ ಸಿಕ್ಸರ್ ಸಹಿತ ಸೆಂಚುರಿ ಬಾರಿಸಿದರು. ಈ ಮೂಲಕ ತಮ್ಮ ಟೆಸ್ಟ್​ ವೃತ್ತಿ ಜೀವನದ 3ನೇ ಶತಕವನ್ನು ಸಿಡಿಸಿ ಬ್ಯಾಟ್ ಎತ್ತಿ ಗಿಲ್ ಸಂಭ್ರಮಿಸಿದರು.

ಇನ್ನು ಶುಭ್​ಮನ್​ ಗಿಲ್​ಗೆ ಆಲ್​ರೌಂಡರ್​ ಅಕ್ಷರ್ ಪಟೇಲ್ ಸಾಥ್ ನೀಡುತ್ತಿದ್ದಾರೆ. 4 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 205 ರನ್​ ಗಳಿಸಿ ಬೃಹತ್ ಮೊತ್ತದತ್ತ ಹೆಜ್ಜೆಯನ್ನು ಇಡುತ್ತಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 348 ರನ್​ಗಳ ಮುನ್ನಡೆಯನ್ನು ಸಾಧಿಸಿದೆ.  ಮೊದಲ ಇನ್ನಿಂಗ್ಸ್​​ನಲ್ಲಿ ಯಶಸ್ವಿ ಜೈಸ್ವಾಲ್ ಮಿಂಚಿನ ದ್ವಿಶತಕ ಸಿಡಿಸಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊನೆಗೂ ಗಿಲ್ ಜವಾಬ್ದಾರಿಯುತ ಆಟ.. ಟೆಸ್ಟ್​​ನಲ್ಲೂ ಸ್ಫೋಟಕ ಶತಕ ಬಾರಿಸಿದ ಯಂಗ್​ಗನ್..!

https://newsfirstlive.com/wp-content/uploads/2024/02/GILL_100.jpg

Load More