ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?

author-image
Ganesh
Updated On
ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?
Advertisment
  • ಭಾರತ-ಇಂಗ್ಲೆಂಡ್ ನಡುವೆ​ 3ನೇ ಟೆಸ್ಟ್​ ಪಂದ್ಯ
  • 22 ರನ್​ಗಳ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್​
  • ಟೀಮ್​ ಇಂಡಿಯಾಗೆ ವಿರೋಚಿತ ಸೋಲು

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡಿದೆ. ಪಂದ್ಯ ಸೋತ ಬಳಿಕ ಮಾತನಾಡಿರುವ ಗಿಲ್, ನಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.

ತುಂಬಾ ಹೆಮ್ಮೆಯಿದೆ, ಟೆಸ್ಟ್ ಕ್ರಿಕೆಟ್ ಇದಕ್ಕಿಂತ ಹತ್ತಿರವಾಗಲು ಸಾಧ್ಯವಿಲ್ಲ. ಬೆಳಗ್ಗೆ ನಮಗೆ ತುಂಬಾ ಆತ್ಮವಿಶ್ವಾಸವಿತ್ತು. ವಿಕೆಟ್​ಗಳು ಉಳಿದಿದ್ದವು. ಆದರೆ ಅಗ್ರ ಕ್ರಮಾಂಕದಲ್ಲಿ ಪಾರ್ಟ್ನರ್​​ಶಿಪ್ ಬರಲಿಲ್ಲ. ಅವರು ನಮಗಿಂತ ಉತ್ತಮ ಪ್ರದರ್ಶನ ನೀಡಿದರು.
ಭರವಸೆ ಇದೆ. ಗುರಿ ದೊಡ್ಡದಾಗಿರಲಿಲ್ಲ. ಜಡ್ಡು (ರವೀಂದ್ರ ಜಡೇಜಾ) ತುಂಬಾ ಅನುಭವಿ, ನಾನು ಅವರಿಗೆ ಯಾವುದೇ ಸಂದೇಶ ನೀಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ನಮಗೆ ಮುಖ್ಯವಾಗುತ್ತಿತ್ತು. ಪಂತ್ ಅವರ ರನೌಟ್ ನಮಗೆ ಹೊಡೆತ ನೀಡಿತು.

ಇದನ್ನೂ ಓದಿ: ಒಂದು ಬ್ಯಾಡ್​ ಲಕ್, ಗೆಲುವು ಮಿಸ್​ -ಕ್ರಿಕೆಟ್ ಅಭಿಮಾನಿಗಳಿಗೆ ನೋವು ತಂದ ಈ ವಿಡಿಯೋ

ಸ್ಪೆಲ್ ಮಧ್ಯದಲ್ಲಿ ನಾನು ತುಂಬಾ ಉತ್ಸುಕನಾಗಿದ್ದೆ. ಎಕ್ಸ್‌ಟ್ರಾ ಕವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ಚೆಂಡು ನನ್ನ ಬಳಿಗೆ ಬಂದಿತು. ರಿಷಭ್ ಹಿಂಜರಿಯುತ್ತಿರುವುದನ್ನು ನಾನು ನೋಡಿದೆ. ಚೆಂಡನ್ನು ಎಸೆದಾಗ ಅದು ಸ್ಟಂಪ್​ಗೆ ಬೀಳುತ್ತದೆ ಅನ್ನೋದು ನನ್ನ ಭಾವನೆ ಎಂದಿದ್ದಾರೆ. ಎರಡು ಬಲಿಷ್ಠವಾಗಿವೆ ಎಂದಿದ್ದಾರೆ.

ಮೂರನೇ ಟೆಸ್ಟ್​ನಲ್ಲಿ ಭಾರತ ತಂಡವು 22 ರನ್​ಗಳ ಅಂತರದಲ್ಲಿ ವಿರೋಚಿತ ಸೋಲನ್ನು ಕಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ತಂಡವು 387 ರನ್​ಗಳಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ 192 ರನ್​ಗಳಿಸಿತ್ತು. ಇನ್ನು ಭಾರತ ಕೂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 387 ರನ್​ಗಳಿಸಿದ್ರೆ, ಎರಡನೇ ಇನ್ನಿಂಗ್ಸ್​ನಲ್ಲಿ 170 ರನ್​ಗಳಿಸಿತ್ತು. ಆ ಮೂಲಕ ಟೀಂ ಇಂಡಿಯಾ 22 ರನ್​ಗಳ ಅಂತರದಲ್ಲಿ ಸೋಲನ್ನು ಎದುರಿಸಿತು. ಐದು ಟೆಸ್ಟ್​​ಗಳ ಸರಣಿಯಲ್ಲಿ ಎರಡು ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡರೆ, ಭಾರತ ಒಂದ ಟೆಸ್ಟ್ ಗೆದ್ದಿದೆ.

ಇದನ್ನೂ ಓದಿ: ಸರೋಜಾದೇವಿ ಅವರ ಅಂತಿಮ ದರ್ಶನ ಪಡೆದ ಸಿಎಂ -ಸಕಲ ಸರ್ಕಾರಿ ಗೌರವ ನೀಡುವ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment