ಮೊದಲ ಟೆಸ್ಟ್ ಸೋಲಿಗೆ ಹೊಣೆ ಮಾಡಿದ ಗಿಲ್.. ನಾಯಕ ಬೊಟ್ಟು ಮಾಡಿದ್ದು ಯಾರ ಮೇಲೆ..?

author-image
Ganesh
Updated On
ಮೊದಲ ಟೆಸ್ಟ್ ಸೋಲಿಗೆ ಹೊಣೆ ಮಾಡಿದ ಗಿಲ್.. ನಾಯಕ ಬೊಟ್ಟು ಮಾಡಿದ್ದು ಯಾರ ಮೇಲೆ..?
Advertisment
  • ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತಕ್ಕೆ ಸೋಲು
  • ಐದು ವಿಕೆಟ್​ಗಳ ಅಂತರದಿಂದ ಸೋಲು ಕಂಡ ಗಿಲ್ ಪಡೆ
  • ತಂಡದ ಸೋಲಿನ ಬಗ್ಗೆ ನಾಯಕ ಶುಬ್ಮನ್ ಗಿಲ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐದು ವಿಕೆಟ್‌ಗಳ ಸೋಲನ್ನು ಕಂಡಿದೆ. ಪಂದ್ಯ ಮುಗಿದ ಬಳಿಕ ನಾಯಕ ಗಿಲ್, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಅಸಮರ್ಥರಾಗಿರೋದೇ ಸೋಲಿಗೆ ಕಾರಣ ಎಂದು ತಿಳಿಸಿದ್ದಾರೆ.

ಗಿಲ್ ಹೇಳಿದ್ದೇನು..?

ಉತ್ತಮ ಟೆಸ್ಟ್ ಪಂದ್ಯವಾಗಿತ್ತು. ನಮಗೆ ಅವಕಾಶಗಳು ಸಿಕ್ಕವು. ಆದರೆ ಕ್ಯಾಚ್‌ಗಳನ್ನು ಕೈಬಿಟ್ಟೆವು. ಕೆಳ ಕ್ರಮಾಂಕದಲ್ಲಿಯೂ ರನ್‌ಗಳು ಬರಲಿಲ್ಲ. ತಂಡದ ಬಗ್ಗೆ ಹೆಮ್ಮೆ ಇದೆ. ಒಟ್ಟಾರೆಯಾಗಿ ಇದು ಉತ್ತಮ ಪ್ರಯತ್ನ. 430 ರನ್‌ಗಳನ್ನು ಗಳಿಸಿದ ನಂತರ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಬಗ್ಗೆ ಯೋಚಿಸುತ್ತಿದ್ದೆವು. ಕೆಳ ಕ್ರಮಾಂಕದಲ್ಲಿ ರನ್‌ಗಳ ಕೊರತೆಯಿಂದಾಗಿ ಅದು ಕಷ್ಟಕರವಾಯಿತು.

ಇದನ್ನೂ ಓದಿ: ಗಿಲ್ ಪಡೆಗೆ ಭಾರೀ ಮುಖಭಂಗ.. ಚೆನ್ನಾಗಿಯೇ ಆಡಿ, ಕೊನೆಯ ದಿನ ಫೇಲ್ ಆದ ಟೀಂ ಇಂಡಿಯಾ..!

ಕೆಳ ಕ್ರಮಾಂಕದಲ್ಲಿ ಬಹು ಬೇಗನ ವಿಕೆಟ್​​ಗಳು ಬಿದ್ದವು. ಮುಂಬರುವ ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಸುಧಾರಣೆ ತರುತ್ತೇವೆ ಎಂದರು. ಕ್ಯಾಚ್ ಕೈಬಿಟ್ಟಿರೋದನ್ನು ಸಮರ್ಥಿಸಿಕೊಂಡ ಅವರು, ಇಂತಹ ವಿಕೆಟ್‌ಗಳಲ್ಲಿ ಅವಕಾಶಗಳು ಸುಲಭವಾಗಿ ಸಿಗಲ್ಲ. ಇದು ಯುವ ತಂಡ ಮತ್ತು ನಾವು ಕಲಿಯುತ್ತಿದ್ದೇವೆ. ಭವಿಷ್ಯದಲ್ಲಿ ಆ ತಪ್ಪುಗಳು ನಡೆಯಲ್ಲ ಎಂದರು. ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.

ಉಪನಾಯಕ ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದರೆ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಕೂಡ ಶತಕ ಗಳಿಸಿದರು. ಭಾರತ ಎರಡೂ ಇನ್ನಿಂಗ್ಸ್‌ಗಳಲ್ಲಿ ನಿರೀಕ್ಷಿತ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಅನೇಕ ಪ್ರಮುಖ ಕ್ಯಾಚ್‌ಗಳನ್ನು ಸಹ ಕೈಬಿಟ್ಟು ಪಂದ್ಯದಲ್ಲಿ ಸೋಲನ್ನು ಕಂಡರು. ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳಿಗೆ 359 ರನ್‌ಗಳ ಸ್ಕೋರ್ ಮಾಡಿತ್ತು. ನಂತರ ಇಡೀ ತಂಡವು 471 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೊನೆಯ ಆರು ವಿಕೆಟ್‌ಗಳು 77 ರನ್‌ಗಳ ಒಳಗೆ ಪತನಗೊಂಡವು.

ಇದನ್ನೂ ಓದಿ: ‘ಮಗಾ, ಪ್ರಸಿದ್ಧ್ ಚೆನ್ನಾಗಿ ಹೋಗ್ತಿದೆ..’ ಮೈದಾನದಲ್ಲಿ ರಾಹುಲ್​​ರ ಕನ್ನಡ ಕೇಳೋದೇ ಚೆಂದ..! VIDEO

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment