/newsfirstlive-kannada/media/post_attachments/wp-content/uploads/2023/12/ROHIT-SHARMA_GILL.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ದಾಖಲೆ ಬರೆದಿದೆ. ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆದ್ದಿರೋ ಭಾರತ ಕ್ರಿಕೆಟ್​ ತಂಡ ಸೆಮಿಫೈನಲ್​ಗೆ ಎಂಟ್ರಿ ನೀಡಿದೆ.
ಸೆಮೀಸ್​ಗೆ ಎಂಟ್ರಿ ನೀಡಿದ್ರೂ ಟೀಮ್​ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಕೊನೆಯ ಪಂದ್ಯ ಆಡಲೇಬೇಕಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೈ ಕೊಟ್ಟಿದ್ದಾರೆ. ಹಾಗಾಗಿ ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​​ ಗಿಲ್​ ಅವರಿಗೆ ದೊಡ್ಡ ಜವಾಬ್ದಾರಿ ಸಿಗೋ ಸಾಧ್ಯತೆ ಇದೆ.
ರೋಹಿತ್​​ಗೆ ವಿಶ್ರಾಂತಿ
ಕ್ಯಾಪ್ಟನ್​ ರೋಹಿತ್​ ಶರ್ಮಾ ಪಾಕ್ ವಿರುದ್ಧ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಎರಡು ದಿನಗಳ ರೆಸ್ಟ್​ ಬಳಿಕ ಭಾರತ ಅಭ್ಯಾಸ ಆರಂಭಿಸಿದೆ. ಈ ವೇಳೆ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರು. ಆದ್ರೆ, ಇನ್ನೂ ಫಿಟ್​ ಆಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇವರ ಬದಲಿಗೆ ಶುಭ್ಮನ್​​ ಗಿಲ್​​ ತಂಡವನ್ನು ಲೀಡ್​ ಮಾಡಲಿದ್ದಾರೆ.
ಗಿಲ್​​ಗೆ​ ದೊಡ್ಡ ಜವಾಬ್ದಾರಿ
ಸದ್ಯ ನಡೆಯುತ್ತಿರೋ ಐಸಿಸಿ ಮೆಗಾ ಟೂರ್ನಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಓಪನಿಂಗ್​ ಬ್ಯಾಟರ್​ ಶುಭ್ಮನ್​ ಗಿಲ್​ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇವರು ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ರು. ತಾನು ಎದುರಿಸಿದ 129 ಎಸೆತಗಳಲ್ಲಿ ಬ್ಯಾಕ್​ ಟು ಬ್ಯಾಕ್​ 9 ಫೋರ್​​, 2 ಸಿಕ್ಸರ್ ಚಚ್ಚಿ 101 ರನ್​​ ಬಾರಿಸಿದ್ರು. ಈಗ ಸ್ಟಾರ್ ಬ್ಯಾಟರ್​​ ಶುಭ್ಮನ್​ ಗಿಲ್​ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇದೇ ಹೊತ್ತಲ್ಲೇ ಟೀಮ್​ ಇಂಡಿಯಾವನ್ನು ಲೀಡ್ ಮಾಡಲು ಗಿಲ್​ಗೆ ಅವಕಾಶ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us