newsfirstkannada.com

T20 ವಿಶ್ವಕಪ್​ನಿಂದ ಸ್ಟಾರ್​ ಪ್ಲೇಯರ್​ ಶುಭ್ಮನ್​ ಗಿಲ್​ ಔಟ್​​; ಅಸಲಿ ಕಾರಣವೇನು?

Share :

Published April 17, 2024 at 7:31pm

  ಐಪಿಎಲ್​ ಬೆನ್ನಲ್ಲೇ ನಡೆಯಲಿದೆ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಟೂರ್ನಿ

  ಮೆಗಾ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸಲು ಸೆಲೆಕ್ಷನ್​ ಕಮಿಟಿ ಸರ್ಕಸ್​​​

  ಟಿ20 ವಿಶ್ವಕಪ್​​​ನಿಂದ ಸ್ಟಾರ್​​ ಬ್ಯಾಟರ್​​ ಶುಭ್ಮನ್​ ಗಿಲ್​ ಔಟ್​​ ಅನ್ನೋ ಮಾಹಿತಿ!

ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿದ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಟೂರ್ನಿ ನಡೆಯಲಿದೆ. ಯುಎಸ್ಎ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರೋ ಈ ಮೆಗಾ ಟೂರ್ನಿಗೆ ಸೂಕ್ತ ಆಟಗಾರರನ್ನು ಗುರುತಿಸಲು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸಾಕಷ್ಟು ಹೋಮ್​ ವರ್ಕ್​ ನಡೆಸುತ್ತಿದೆ. ಅದಕ್ಕಾಗಿ ಸದ್ಯ ನಡೆಯುತ್ತಿರೋ 2024ರ ಐಪಿಎಲ್ ಮೇಲೆ ಕಣ್ಣಿಟ್ಟಿದೆ.

ಇನ್ನು, ಈಗಾಗಲೇ ಹಲವು ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಪಕ್ಕಾ ಆಗಿದೆ. ಇಷ್ಟಾದ್ರೂ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡಬೇಕು, ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ರೀತಿ ಆಟಗಾರರಿಗೆ ಚಾನ್ಸ್​ ಕೊಡಬೇಕಾ? ಬೇಡವೋ? ಅನ್ನೋ ಚರ್ಚೆ ನಡೆಯುತ್ತಿದೆ.

ಇದರ ಮಧ್ಯೆ ಇತ್ತೀಚೆಗೆ ಮುಂಬೈನಲ್ಲಿ ಟೀಮ್​ ಇಂಡಿಯಾದ ಕೋಚ್​​​ ರಾಹುಲ್​ ದ್ರಾವಿಡ್​​, ಸೆಲೆಕ್ಷನ್​ ಕಮಿಟಿ ಚೀಫ್​ ಅಜಿತ್​​ ಅಗರ್ಕರ್​ ಅವರನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಭೇಟಿಯಾಗಿದ್ದರು. ಈ ಮೂವರ ಮಧ್ಯೆ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಜೋಡಿ ಟಿ20 ವಿಶ್ವಕಪ್​​ನಲ್ಲಿ ಟೀಮ್​​ ಇಂಡಿಯಾ ಪರ ಓಪನಿಂಗ್​ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಶುಭ್ಮನ್​ ಗಿಲ್​ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗೋದು ಡೌಟ್​ ಎನ್ನುತ್ತಿವೆ ಮೂಲಗಳು.

ಶುಭ್ಮನ್​​ ಗಿಲ್​ ಟೀಮ್​ ಇಂಡಿಯಾದ ಸ್ಟಾರ್​ ಪ್ಲೇಯರ್​. ಸದ್ಯ ಐಪಿಎಲ್​ನಲ್ಲಿ ಶುಭ್ಮನ್​ ಗಿಲ್​ ಅವರು ಗುಜರಾತ್​ ಟೈಟನ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜತೆಗೆ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ಕೂಡ ನೀಡುತ್ತಿದ್ದಾರೆ.

ಇದನ್ನೂ ಓದಿ: ಶಾಕಿಂಗ್​ ನ್ಯೂಸ್​​​.. ಟಿ20 ವಿಶ್ವಕಪ್​ನಿಂದ ಸ್ಟಾರ್​ ಪ್ಲೇಯರ್​​ ಹಾರ್ದಿಕ್​ ಪಾಂಡ್ಯ ಔಟ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​ನಿಂದ ಸ್ಟಾರ್​ ಪ್ಲೇಯರ್​ ಶುಭ್ಮನ್​ ಗಿಲ್​ ಔಟ್​​; ಅಸಲಿ ಕಾರಣವೇನು?

https://newsfirstlive.com/wp-content/uploads/2024/04/Shubhman_Gill.jpg

Load More