ಗಿಲ್​​ಗೆ ಕ್ಯಾಪ್ಟನ್ಸಿಯಿಂದ ಕೊಕ್.. ಗುಜರಾತ್​ ಟೈಟನ್ಸ್​ಗೆ ಹೊಸ ನಾಯಕ..!

author-image
Ganesh
Updated On
ಗಿಲ್​​ಗೆ ಕ್ಯಾಪ್ಟನ್ಸಿಯಿಂದ ಕೊಕ್.. ಗುಜರಾತ್​ ಟೈಟನ್ಸ್​ಗೆ ಹೊಸ ನಾಯಕ..!
Advertisment
  • ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕಿಳಿಯುವ ಸೂಚನೆ
  • ಕಳೆದ ವರ್ಷ ಗಿಲ್ ನೇತೃತ್ವದಲ್ಲಿ ತಂಡಕ್ಕೆ ಹೀನಾಯ ಸೋಲು
  • ಟ್ವೀಟ್ ಮಾಡಿ ಹೊಸ ಚರ್ಚೆ ಹುಟ್ಟುಹಾಕಿದ ಗುಜರಾತ್ ಟೈಟನ್ಸ್

ಗುಜರಾತ್ ಟೈಟನ್ಸ್​​ ಫ್ರಾಂಚೈಸಿ ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ನಾಯಕನ ಬದಲಾವಣೆಯ ಸುಳಿವು ನೀಡಿದೆ. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್​ರ ಫೋಟೋ ಪೋಸ್ಟ್ ಹಾಕಿರುವ ಗುಜರಾತ್, ಕ್ಲೀನ್ ಸ್ಲೇಟ್.. ಎ ನ್ಯೂ ಸ್ಟೋರಿ ಎಂಬ ಕ್ಯಾಪ್ಶನ್​ ನೀಡಿದೆ.

ಈ ಪೋಸ್ಟ್​​ ನಾಯಕ ಬದಲಾವಣೆಯ ಚರ್ಚೆಗೆ ಕಾರಣವಾಗಿದೆ. ಕಳೆದ ಬಾರಿ ಶುಭ್​ಮನ್​ ಗಿಲ್ ನಾಯಕತ್ವದಡಿ ಕಣಕ್ಕಿಳಿದಿದ್ದ ಗುಜರಾತ್​, 14 ಪಂದ್ಯಗಳಲ್ಲಿ ಕೇವಲ 5 ಪಂದ್ಯ ಗೆದ್ದಿತ್ತು. ಹೀಗಾಗಿ ಈ ಬಾರಿ ರಶೀದ್ ಖಾನ್​ಗೆ ಗುಜರಾತ್​ ಫ್ರಾಂಚೈಸಿ ಪಟ್ಟ ಕಟ್ಟುವ ಸಾಧ್ಯತೆ ಇದೆ.

ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಯಲ್ಲಿ ಬಂಗಾರದ ಮನುಷ್ಯರು.. ವರ್ಷದ ಮೊದಲ ದಿನ ಭಕ್ತರಿಗೆ ಸರ್ಪ್ರೈಸ್..! Photos

publive-image

ಗಿಲ್​ಗೆ ಕ್ಯಾಪ್ಟನ್ಸಿಯಿಂದ ಕೊಕ್​

ಶುಭ್ಮನ್​ ಗಿಲ್​ ಮುಂದಿನ ಸೀಸನ್​ನಲ್ಲಿ ಐಪಿಎಲ್ 2022ರ ವಿಜೇತ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್​ ಆಗಿ ಮುಂದುವರಿಯೋದು ಡೌಟ್​. ಐಪಿಎಲ್ 2024ರಲ್ಲಿ ಗಿಲ್ ನಾಯಕತ್ವದಲ್ಲಿ ಟೈಟನ್ಸ್ ತಂಡವು 8ನೇ ಸ್ಥಾನ ಪಡೆದಿತ್ತು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ತನ್ನ ಚೊಚ್ಚಲ ಐಪಿಎಲ್ ಆವೃತ್ತಿ 2022 ರಲ್ಲಿ ಚಾಂಪಿಯನ್ ಆಗಿತ್ತು. ಪ್ರಶಸ್ತಿ ಗೆದ್ದ ನಂತರದ ಸೀಸನ್​ನಲ್ಲೂ ಫೈನಲ್ ತಲುಪಿದ್ದ ಗುಜರಾತ್ ರನ್ನರ್​ ಅಪ್​ ಆಗಿತ್ತು. ಹಾರ್ದಿಕ್ ಪಾಂಡ್ಯ ತಂಡವನ್ನು ಎರಡು ಬಾರಿ ಫೈನಲ್‌ಗೆ ಕರೆದೊಯ್ದಿದ್ದರು.

ಇದನ್ನೂ ಓದಿ: ಟೀಮ್​ ಇಂಡಿಯಾದಲ್ಲಿ ಈಗಲೂ ನಡೆಯೋದು ಕೊಹ್ಲಿ ಮಾತೇ; ವಿರಾಟ್​​ ಕಂಡ್ರೆ ಬಿಸಿಸಿಐಗೆ ಭಯ ಏಕೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment