/newsfirstlive-kannada/media/post_attachments/wp-content/uploads/2024/12/KL_RAHUL-3.jpg)
ಭಾರತ-ಪಾಕ್ ಘರ್ಷಣೆಯಿಂದ ಐಪಿಎಲ್ ಮುಂದೂಡಿಕೆಯಾಗಿದೆ. ಐಪಿಎಲ್ ಮರು ಆಯೋಜನೆಯ ತಲೆನೋವಿನ ಜೊತೆಗೆ ಬಿಸಿಸಿಐ ವಲಯದಲ್ಲಿ ಮತ್ತೊಂದು ಟೆನ್ಶನ್ ಮನೆ ಮಾಡಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತಯಾರಿ ನಡೆಸ್ತಿರುವ ಬಿಸಿಸಿಐ ವಲಯದಲ್ಲಿ, ಹೊಸ ನಾಯಕನ ಹುಡುಕಾಟ ಜೋರಾಗಿದೆ.
ಇಂಡೋ-ಪಾಕ್ ಯುದ್ಧ ಭೀತಿಯೊಂದಾಗಿ ಐಪಿಎಲ್ 1 ವಾರ ಮುಂದೂಡಿದೆ. ಇತ್ತ ಐಪಿಎಲ್ ಮುಂದೂಡಿರುವ ಬಿಸಿಸಿಐ, ಮತ್ತೊಂದ್ಕಡೆ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಸದ್ದಿಲ್ಲದೇ ಪ್ರಿಪರೇಶನ್ ನಡೆಸ್ತಿದೆ. ಇನ್ನೇ ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸುವ ಲೆಕ್ಕಾಚಾರದಲ್ಲಿರುವ ಸೆಲೆಕ್ಷನ್ ಕಮಿಟಿಗೆ, ಟೆಸ್ಟ್ ತಂಡಕ್ಕೆ ನೂತನ ನಾಯಕನನ್ನ ಸೆಲೆಕ್ಟ್ ಮಾಡುವುದೇ ಬಿಗ್ ಟಾಸ್ಕ್ ಆಗಿದೆ.
ಟೆಸ್ಟ್ ಕ್ರಿಕೆಟ್ಗೆ ಹಿಟ್ಮ್ಯಾನ್ ರೋಹಿತ್, ದಿಢೀರ್ ಗುಡ್ ಬೈ ಹೇಳಿದ್ದಾರೆ. ಈ ಬೆನ್ನಲ್ಲೇ ಟೀಮ್ ಇಂಡಿಯಾದ ಟೆಸ್ಟ್ ತಂಡದ ಮುಂದಿನ ಕ್ಯಾಪ್ಟನ್ ಯಾರ್ ಆಗ್ತಾರೆ ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟ ನಡೀತಿದೆ. ಕೆಲ ಆಟಗಾರರ ಹೆಸರುಗಳು ನಾಯಕತ್ವದ ರೇಸ್ನಲ್ಲಿ ಕೇಳಿ ಬರುತ್ತಿವೆ. ಈ ಪೈಕಿ ನಾಯಕತ್ವದ ಪಟ್ಟವನ್ನೇರಲು ಒಬ್ಬ ಯುವ ಆಟಗಾರನ ಹೆಸರು ಮುಂಚೂಣಿಯಲ್ಲಿದೆ.
ಬೂಮ್ರಾ, ಕೆ.ಎಲ್.ರಾಹುಲ್ಗೆ ಇಲ್ಲ ಟೆಸ್ಟ್ ಕ್ಯಾಪ್ಟನ್ಸಿ!
ಟೆಸ್ಟ್ ಕ್ಯಾಪ್ಟನ್ ಎಂದಾಕ್ಷಣ ಎಲ್ಲರ ಕಣ್ಣು ವೇಗಿ ಜಸ್ಪ್ರೀತ್ ಬೂಮ್ರಾ, ಕೆ.ಎಲ್.ರಾಹುಲ್ ಮೇಲೆ ಬಿದ್ದೇ ಬೀಳುತ್ತೆ. ಇದಕ್ಕೆ ಕಾರಣ ಇವರಿಬ್ಬರ ಟೆಸ್ಟ್ ಸಕ್ಸಸ್. ಹೀಗಾಗಿ ಇವರಿಬ್ಬರು ಟೆಸ್ಟ್ ಕ್ಯಾಪ್ಟನ್ಸಿಗೆ ಸ್ಟ್ರಾಂಗ್ ಕಂಟೇಡರ್ಗಳು ಎನ್ನಲಾಗಿತ್ತು.
ರೋಹಿತ್ ಅಲಭ್ಯತೆಯಲ್ಲಿ ಕೆ.ಎಲ್.ರಾಹುಲ್, ಜಸ್ಪ್ರೀತ್ ಬೂಮ್ರಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ರು. ಇವರಿಬ್ಬರು ಟೆಸ್ಟ್ ಫಾರ್ಮೆಟ್ನಲ್ಲಿ ಮ್ಯಾಚ್ ವಿನ್ನರ್ಗಳು ಕೂಡ ಹೌದು. ಸೇನಾ ಕಂಟ್ರಿಗಳಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ ಇವರಿಬ್ಬರು ಟೆಸ್ಟ್ ನಾಯಕತ್ವಕ್ಕೆ ಬೆಸ್ಟ್ ಎಂಬ ಮಾತುಗಳಿದ್ವು. ಆದ್ರೆ, ಪದೇ ಪದೇ ಬ್ಯಾಕ್ ಇಂಜುರಿಗೆ ತುತ್ತಾಗ್ತಿರುದೋ ಜಸ್ಪ್ರೀತ್ ಬೂಮ್ರಾ ನಾಯಕತ್ವದ ಕನಸಿಗೆ ಕೊಳ್ಳಿ ಇಟ್ಟಿದೆ. ಅತ್ತ ಕೆ.ಎಲ್.ರಾಹುಲ್ಗೆ ವಯಸ್ಸೇ ಮುಳುವಾಗಿದೆ.
ಶುಭ್ಮನ್ ಗಿಲ್ V/S ಪಂತ್ ನಡುವೆ ಫೈಟ್..!
ಕೆ.ಎಲ್.ರಾಹುಲ್, ಜಸ್ಪ್ರೀತ್ ಬೂಮ್ರಾ ಅಲ್ದೇ, ಮತ್ಯಾರು ಟೆಸ್ಟ್ ತಂಡದ ನಾಯಕತ್ವಕ್ಕೆ ಸೂಕ್ತ ಎಂಬ ಪ್ರಶ್ನೆಗೆ ಉತ್ತರ ಶುಭ್ಮನ್ ಗಿಲ್, ರಿಷಭ್ ಪಂತ್. ಈಗಾಗಲೇ ಏಕದಿನ ಹಾಗೂ ಟಿ20 ತಂಡದ ಉಪ ನಾಯಕನೂ ಆಗಿರುವ ಶುಭ್ಮನ್ ಗಿಲ್, ಫಸ್ಟ್ ಚಾಯ್ಸ್ ಎನಿಸಿದ್ದಾರೆ. ಆದ್ರೆ, ಶುಭ್ಮನ್ಗೆ ಹೋಲಿಸಿದ್ರೆ, ವಿಕೆಟ್ ಕೀಪರ್ ರಿಷಭ್ ಪಂತ್ ಸೇನಾ ದೇಶಗಳಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಟಫ್ ಫೈಟ್ ನಡೀತಿದೆ. ಆದ್ರೂ ಸೆಲೆಕ್ಷನ್ ಕಮಿಟಿಯ ಒಲವು ಶುಭ್ಮನ್ ಗಿಲ್ ಮೇಲಿದೆ.
ಟೆಸ್ಟ್ ಸಾರಥಿಯಾಗಿ ಪ್ರಿನ್ಸ್ ಗಿಲ್ಗೆ ಪಟ್ಟಾಭಿಷೇಕ..?
ಇಂಗ್ಲೆಂಡ್ ಸರಣಿಯೊಂದಿಗೆ ನ್ಯೂ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್ ಆರಂಭವಾಗಲಿದೆ. ಈ ಟೆಸ್ಟ್ ಸಿರೀಸ್ನಿಂದಲೇ ಶುಭ್ಮನ್ ಗಿಲ್, ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಅನ್ನೋದು ಬಿಸಿಸಿಐ ಮೂಲಗಳ ಬಲವಾದ ಮಾಹಿತಿಯಾಗಿದೆ. ಶುಭ್ಮನ್ ಗಿಲ್ರನ್ನೇ ಟೆಸ್ಟ್ ತಂಡದ ನಾಯಕನಾಗಿ ಮಾಡಲು ಹಲವು ಕಾರಣಗಳೂ ಇವೆ.
ಇದನ್ನೂ ಓದಿ: ಸೆಂಚುರಿ ಸಿಡಿಸಿದ ಸ್ಮೃತಿ ಮಂದಾನ.. ತ್ರಿಕೋನ ಏಕದಿನ ಸರಣಿಯ ಫೈನಲ್ನಲ್ಲಿ ಟೀಮ್ ಇಂಡಿಯಾ ಜಯಭೇರಿ
ಯಾಕೆ ಶುಭ್ಮನ್ ಗಿಲ್..?
- ಕೂಲ್ & ಕಾಮ್ ವ್ಯಕ್ತಿತ್ವ, ಪ್ರಬುದ್ಧತೆ
- ಕನ್ಸಿಸ್ಟೆನ್ಸಿ ಹಾಗೂ ಟೆಕ್ನಿಕಲಿ ಸ್ಟ್ರಾಂಗ್
- ಲಾಂಗ್ ಟರ್ಮ್ ಕ್ಯಾಪ್ಟನ್ಸಿಗೆ ಬೆಸ್ಟ್ ಚಾಯ್ಸ್
- ನ್ಯೂ ಜನರೇಷನ್ ಲೀಡರ್ಶಿಪ್ಗೆ ಸಕಾಲ
- ಸಹ ಆಟಗಾರರ ಜೊತೆ ಉತ್ತಮ ಬಾಂಧವ್ಯ
ಕೆ.ಎಲ್.ರಾಹುಲ್, ಜಸ್ಪ್ರೀತ್ ಬೂಮ್ರಾ, ರಿಷಭ್ ಪಂತ್ಗೆ ಹೋಲಿಕೆ ಮಾಡಿದ್ರೆ, ಶುಭ್ಮನ್ ಗಿಲ್ ಫಿಟ್ & ಫೈನ್ ಆಗಿದ್ದಾರೆ. ಇಂಜುರಿ ಪ್ರೀ ಆಗಿರೋ ಗಿಲ್ ಪ್ರತಿ ಟೂರ್ಗೂ ಲಭ್ಯ ಇರುವ ಆಟಗಾರ. ಸದ್ಯ ಐಪಿಎಲ್ನಲ್ಲೂ ನಾಯಕನಾಗಿ ಮೆಚ್ಯುರಿಟಿ ತೋರಿಸಿರುವ ಶುಭ್ಮನ್, ಟಿ20, ಏಕದಿನ ತಂಡದ ಉಪ ನಾಯಕನೂ ಆಗಿದ್ದಾರೆ. ಹೀಗಾಗಿ ಶುಭ್ಮನ್ ಗಿಲ್ಗೆ ಟೆಸ್ಟ್ ನಾಯಕತ್ವ ನೀಡೋದು ಬಹುತೇಕ ಪಕ್ಕಾ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರ ಬೀಳಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ