newsfirstkannada.com

ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​.. ಪಂಜಾಬ್​ಗೆ 199 ರನ್​ಗಳ ದೊಡ್ಡ ಸವಾಲೆಸೆದ ಗುಜರಾತ್​ ನಾಯಕ

Share :

Published April 4, 2024 at 9:15pm

Update April 4, 2024 at 9:19pm

  ಗುಜರಾತ್​ ನಾಯಕನ ಅದ್ಭುತ ಆಟಕ್ಕೆ ಶಿಳ್ಳೆ ಹೊಡೆದ ಫ್ಯಾನ್ಸ್​

  ಶುಭ್ಮನ್​ ಬ್ಯಾಟ್​ ಬೀಸಿದ್ದನ್ನು ಕಂಡು ಪಂಜಾಬ್​ ಕಲಿಗಳು ಶಾಕ್​

  ಗುಜರಾತ್​​ ನಾಯಕನ ವಿಕೆಟ್​ ಉರುಳಿಸಲು ಪಂಜಾಬ್​ ಪರದಾಟ

ಟಾಸ್​ ಸೋತರೇನಂತೆ. ಗುಜರಾತ್​​ ತನ್ನ ತವರಿನಲ್ಲಿ ಭರ್ಜರಿ ಓಪನಿಂಗ್​ ಮಾಡಿದೆ. ಪಂಜಾಬ್​ ಕಲಿಗಳ ಎಸೆತಕ್ಕೆ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ 199 ರನ್​​ಗಳ ಸವಾಲೆಸೆದಿದೆ.

ಪ್ರಾರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಶುಭ್ಮನ್​ ಗಿಲ್​ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿಸಿದ್ದಾರೆ. 48 ಎಸೆತಕ್ಕೆ 6 ಬೌಂಡರಿ ಜೊತೆಗೆ 4 ಸಿಕ್ಸ್​ ಬಾರಿಸುವ ಮೂಲಕ 89 ರನ್​ ಬಾರಿಸಿದ್ದಾರೆ.

ಅತ್ತ ಸಾಯಿ ಸುದರ್ಶನ್​ ಕೂಡ 19 ಎಸತಕ್ಕೆ 6 ಬೌಂಡರಿ ಹೊಡೆಯುವ ಮೂಲಕ 33 ರನ್​ ಬಾರಿಸಿದ್ದಾರೆ. ಆದರೆ ಹರ್ಷದ್​ ಪಟೇಲ್​ ಎಸೆತಕ್ಕೆ ಜಿತೇಶ್​ ಶರ್ಮಾಗೆ ಕ್ಯಾಚ್ ನೀಡಿ ಔಟ್​ ಆದರು. ಇನ್ನು ಕೇನ್​ ವಿಲಿಯಂಸನ್​ 22 ಎಸೆತಕ್ಕೆ 26 ರನ್​ ಬಾರಿಸಿ ಹರ್ಪ್ರೀತ್​ಗೆ ಎಸೆತಕ್ಕೆ ಕ್ಯಾಚ್​ ನೀಡಿ ಔಟ್​ ಆದರು.

ವಿಜಯ್​ ಶಂಕರ್​ 10 ಎಸೆತ ಎಸದುರಿಸಿ 8 ರನ್​ಗೆ ಔಟ್​ ಆದರು. ರಬಾಡ ಎಸೆತಕ್ಕೆ ಕ್ಯಾಚ್​ ನೀಡಿ ಹೊರನಡೆದರು. ನಂತರ ಬಂದ ರಾಹುಲ್ ತೆವಾಟಿಯ 8 ಎಸೆತಕ್ಕೆ 3 ಬೌಂಡರಿ ಮತ್ತಿ 1 ಸಿಕ್ಸ್​ ಬಾರಿಸುವ ಮೂಲಕ 23 ರನ್​ ಬಾರಿಸಿದ್ದಾರೆ.

ಅತ್ತ ಪಂಜಾಬ್ ಬೌಲರ್​ಗಳು ಗುಜರಾತ್ ವಿಕೆಟ್​ ಹೊಡೆದುರುಳಿಸಲು ವಿಫಲರಾದರು. ಹರ್ಪ್ರೀತ್​, ಹರ್ಷಲ್​ ಪಟೇಲ್​​ ತಲಾ ಒಂದು ವಿಕೆಟ್​ ಪಡೆದರೆ, ಕಗಿಸೋ ರಬಾಡ 2 ವಿಕೆಟ್​ ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​.. ಪಂಜಾಬ್​ಗೆ 199 ರನ್​ಗಳ ದೊಡ್ಡ ಸವಾಲೆಸೆದ ಗುಜರಾತ್​ ನಾಯಕ

https://newsfirstlive.com/wp-content/uploads/2024/04/Shubhman-Gill.jpg

Load More