/newsfirstlive-kannada/media/post_attachments/wp-content/uploads/2024/12/Shyam-Benegal.jpg)
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಇಂದು ನಿಧನರಾದರು. ಇತ್ತೀಚೆಗೆ 90 ವರ್ಷದ ಹಿರಿಯ ಜೀವಿಯಾದ ಇವರು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು. ಈಗ ಇಹಲೋಕ ತ್ಯಜಿಸಿದ್ದಾರೆ.
ಯಾರು ಶ್ಯಾಮ್ ಬೆನಗಲ್?
ಶ್ಯಾಮ್ ಬೆನಗಲ್ ಅವರು 1934ರಲ್ಲಿ ಡಿಸೆಂಬರ್ 14ನೇ ತಾರೀಕಿನಂದು ಜನಿಸಿದರು. ಇವರ ತಂದೆ ಶ್ರೀಧರ್ ಬಿ. ಬೆನಗಲ್ ಮೂಲತಃ ಕರ್ನಾಟಕದವರು. ಇವರು ಖ್ಯಾಯ ಛಾಯಾಗ್ರಾಹಕರಾಗಿದ್ದರು.
ಬೆನಗಲ್ ಅವರನ್ನು ಭಾರತ ಸರ್ಕಾರ ಪದ್ಮಶ್ರೀ ಮತ್ತು ಪದ್ಮಭೂಷಣ ನೀಡಿ ಗೌರವಿಸಿದೆ. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 18 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಇವರಿಗೆ ಹಲವು ಪುರಸ್ಕಾರಗಳು ಸಂದಿವೆ.
ಇವರು ಅಂಕುರ್ (1974) ಚಿತ್ರದ ಮೂಲಕ ನಿರ್ದೇಶಕರಾಗಿ ಡೆಬ್ಯೂ ಮಾಡಿದ್ರು. ಅನಂತ್ ನಾಗ್ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ರು. ಇವರ ನಿಶಾಂತ್ (1975) ಅನ್ನೋ ಸಿನಿಮಾ 1976ರ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ನಾಮನಿರ್ದೇಶನಗೊಂಡಿತು.
ಇದನ್ನೂ ಓದಿ:ಮ್ಯಾಕ್ಸ್ ಪ್ರೀ ರಿಲೀಸ್ ಇವೆಂಟ್ ನೋಡಿ ಬರುತ್ತಿದ್ದಾಗ ಅವಘಡ; ಅಪಘಾತದಲ್ಲಿ ಜೀವ ಬಿಟ್ಟ ಸುದೀಪ್ ಫ್ಯಾನ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ