newsfirstkannada.com

ರೌಡಿ ಶೀಟರ್​​​ ಸಿದ್ದಾಪುರ ಮಹೇಶ್​​ನನ್ನು ಕೊಚ್ಚಿ ಜೀವ ತೆಗೆದಿದ್ದ ಹಂತಕರು; 11 ಮಂದಿ ಪೊಲೀಸ್​​ ವಶಕ್ಕೆ

Share :

Published August 7, 2023 at 3:51pm

    ರೌಡಿ ಶೀಟರ್​​ ಕೊಲೆ ಕೇಸ್​​​..!

    11 ಮಂದಿ ಪೊಲೀಸ್​ ವಶಕ್ಕೆ

    ಸದ್ಯ ಪೊಲೀಸರಿಂದ ವಿಚಾರಣೆ

ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿ ಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಬೀದಿ ಹೆಣವಾಗಿದ್ದ. ಶುಕ್ರವಾರ ರಾತ್ರಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​​ ಮಹೇಶ್​​ನನ್ನು ಕೊಚ್ಚಿ ಕೊಲೆ ಮಾಡಿದ್ದರು ಎನ್ನಲಾಗಿತ್ತು. ಹೀಗಾಗಿ ಆರೋಪಿಗಳ ಪತ್ತೆಗಾಗಿ ಬೆಂಗಳೂರು ಪೊಲೀಸರು ಬಲೆ ಬೀಸಿದ್ದರು. ಹೀಗಿರುವಾಗಲೇ ನಿನ್ನೆ ಪ್ರಮುಖ ಆರೋಪಿ ಸಿದ್ದಾಪುರ ಸುನೀಲ್​ ಸೇರಿ ಐವರು ಪೊಲೀಸರಿಗೆ ಸರೆಂಡರ್​ ಆಗಿದ್ದಾರೆ. ಈಗ ಕೊನೆಗೂ ಪೊಲೀಸರು ಕೇಸ್​ ಸಂಬಂಧ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಗ್ರೇಸ್ ವಾಲ್ಟರ್, ಶ್ರೀನಿವಾಸ ಅಲಿಯಾಸ್​​​ ಪಾಪ, ಗೋಕುಲ್, ಸುರೇಶ್​​​​​, ಕಾರ್ತಿಕ್, ವಾಲೆ ಪ್ರವೀಣ, ಸಿದ್ದಾಪುರ ಸುನೀಲ್,‌ ಕಣ್ಣನ್ ವೇಲ, ಪ್ರದೀಪ್, ಮನು ಸೇರಿ 11 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ರೌಡಿಶೀಟರ್​ ವಿಲ್ಸನ್ ​ಗಾರ್ಡನ್​ ನಾಗನಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರ ರಾತ್ರಿ ಪ್ರಮುಖ ಆರೋಪಿಗಳಾದ ಸಿದ್ದಾಪುರ ಸುನೀಲ್​​, ವಾಲ್ಟರ್​​ ಸೇರಿ ಐವರು ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಶರಣಾಗಿದ್ದರು. ಇದಾದ ಬೆನ್ನಲ್ಲೇ ಪೊಲೀಸರು ತೀವ್ರ ಶೋಧಕಾರ್ಯ ನಡೆಸಿ 11 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.

ಪೊಲೀಸ್​​ ತಂಡ ರಚನೆ

ಈ ಹಿಂದೆ ಡಿಸಿಪಿ ಸೌತ್​​-ಈಸ್ಟ್​​​ ಮತ್ತು ಸಿಸಿಬಿ ಪೊಲೀಸರ ತಂಡ ರಚನೆಯಾಗಿದೆ. ಮಹೇಶ್​ ಮೇಲೂ 2 ಕೊಲೆ ಸೇರಿ 11 ಕೇಸ್​ ಇವೆ. ತನಿಖೆ ನಡೆಯುತ್ತಿರೋ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಮಹೇಶ್​​ ಹೆಂಡತಿ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​​ ಮೇಲೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ಆಗಲಿದೆ ಎಂದು ಕಮಿಷನರ್​​ ದಯಾನಂದ್​ ಮಾಹಿತಿ ನೀಡಿದ್ದರು.

ಏನಿದು ಕೇಸ್​..​?

ರೌಡಿ ಶೀಟರ್​​ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿ ಸೇರಿ ಹಲವು ಕೇಸ್‍ನಲ್ಲಿ ಜೈಲು ಸೇರಿದ್ದ. ಶುಕ್ರವಾರ ರಾತ್ರಿ ಜಾಮೀನು ಮೇಲೆ ಹೊರ ಬಂದಿದ್ದ. ಜೈಲಿನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ವಿಲ್ಸನ್ ಗಾರ್ಡನ್ ನಾಗ ಮತ್ತವನ ಗ್ಯಾಂಗ್​​ ಕಾರಿಗೆ ಅಡ್ಡ ಹಾಕಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್​ ಆಗಿದ್ದರು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೌಡಿ ಶೀಟರ್​​​ ಸಿದ್ದಾಪುರ ಮಹೇಶ್​​ನನ್ನು ಕೊಚ್ಚಿ ಜೀವ ತೆಗೆದಿದ್ದ ಹಂತಕರು; 11 ಮಂದಿ ಪೊಲೀಸ್​​ ವಶಕ್ಕೆ

https://newsfirstlive.com/wp-content/uploads/2023/08/Sideesha.jpg

Load More