newsfirstkannada.com

ಬೊಮ್ಮಾಯಿ ನನ್ನ ತುಂಬಾನೇ LOVE ಮಾಡ್ತಾನೆ -ಸಿದ್ದರಾಮಯ್ಯ, ಮಾಜಿ ಸಿಎಂ ನಡುವೆ ಸ್ವಾರಸ್ಯಕರ ಮಾತುಕತೆ..!

Share :

Published February 20, 2024 at 1:17pm

  ಕಲಾಪದ ಗಮನ ಸೆಳೆದ ಪ್ರೀತಿ ಮಾಡೋ ವಿಷ್ಯ

  ಇಬ್ಬರ ನಡುವೆ ಇಂಟ್ರೆಸ್ಟಿಂಗ್ ವಿಚಾರಗಳು ಚರ್ಚೆ

  ಸಿದ್ದು-ಬೊಮ್ಮಾಯಿ ನಡುವಿನ ಚರ್ಚೆಯ ವಿಡಿಯೋ

ವಿಧಾನಸಭೆ: ಕಲಾಪದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಇರುವ ‘ಪ್ರೀತಿಯ ಬಾಂಧವ್ಯ’ ಕುರಿತ ಚರ್ಚೆ ಎಲ್ಲರ ಗಮನ ಸೆಳೆಯಿತು.

ಬಜೆಟ್​ ಮೇಲೆ ವಿಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಇಂದು ಸಿದ್ದರಾಮಯ್ಯ ಒಂದೊಂದೇ ಉತ್ತರವನ್ನು ನೀಡುತ್ತ ಬಂದರು. ಸಿದ್ದರಾಮಯ್ಯರ ಮಾತಿನ ಮಧ್ಯೆ ಬೊಮ್ಮಾಯಿ ಕೌಂಟರ್ ನೀಡಲು ಮುಂದಾಗುತ್ತಾರೆ. ಅದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಬೊಮ್ಮಾಯಿ ಅವರೇ, ನಾವಿಬ್ಬರೂ ಒಂದೇ. ಅದು ಹೊರಗಡೆ’ ಎನ್ನುತ್ತಾರೆ.

ಅದಕ್ಕೆ ‘ಹಂ ಹೌದು, ಹೊರಗಡೆ ಯಾಕೆ’ ಎಂದು ಬೊಮ್ಮಾಯಿ ಹೇಳ್ತಿದ್ದಂತೆ ಮಧ್ಯಪ್ರವೇಶಿಸಿದ ಸಿದ್ದು, ಇಲ್ಲಿ ಮಾತ್ರ ಬೇರೇ ಬೇರೆ ಅಂತಾ ಹೇಳಿದರು. ಆಗ ಹೊರಗಡೆ ಯಾಕೆ? ಎಲ್ಲಾ ಕಡೆ ನಾವಿಬ್ಬೂ ಒಂದೇ. ಅದರಲ್ಲಿ ಏನಿದೆ ಎನ್ನುತ್ತ ನಕ್ಕು ಆಸನದ ಮೇಲೆ ಕುಳಿತುಕೊಳ್ತಾರೆ ಬೊಮ್ಮಾಯಿ. ಆಗ ಸಿದ್ದರಾಮಯ್ಯ ತಮ್ಮ ಒಂದು ಕೈಯನ್ನು ಹಿಂಬದಿಗೆ ಕಟ್ಟಿ ಬೊಮ್ಮಾಯಿ ಅವರತ್ತ ನೋಡುತ್ತ.. ‘ನೋಡಿ.. ಬೊಮ್ಮಾಯಿ ಯೂ ಲವ್ ಮೀ ವೆರಿ ಮಚ್ (You love me very much). ಅವರು ಹೊರಗಡೆ ಇದ್ದಾಗ ಲವ್ ಮಾಡ್ತಾರೆ. ಇಲ್ಲಿ ಬಂದಾಗ ರಾಜಕೀಯವಾಗಿ ವಿರೋಧ ಮಾಡ್ತಾರೆ. ಪಾಪ! ಮಾಡಬೇಕು ಅಂತಾ ಸಿದ್ದರಾಮಯ್ಯ ಹೇಳ್ತಾರೆ.

ಆಗ ಎದ್ದು ನಿಂತ ಬೊಮ್ಮಾಯಿ.. ವೈಯಕ್ತಿಕ ಸಂಬಂಧ ಬೇರೆ, ರಾಜಕೀಯ ಸಂಬಂಧ ಬೇರೆ ಎಂದು ಸಿದ್ದರಾಮಯ್ಯಗೆ ಹೇಳಲು ಪ್ರಯತ್ನಿಸ್ತಾರೆ. ಆಗ ಕರೆಕ್ಟ್, ನೀವು ಹೇಳ್ತಿರೋದು ಕರೆಕ್ಟ್​. ನೀವು ಹೇಳ್ತಿರೋದು ನಿಜವಾಗಿಯೂ ಸತ್ಯ. ರಾಜಕೀಯ ಸಂಬಂಧ ಬೇರೆ. ವೈಯಕ್ತಿಕ ಸಂಬಂಧ ಬೇರೆ. ನಿಮ್ಮ ಮಾತನ್ನು ನಾನು ಒಪ್ಪಿಕೊಳ್ತೇನೆ. ಐ ಅಗ್ರಿ ವಿಥ್ ಯೂ.. ಎನ್ನುತ್ತ ಸಿದ್ದರಾಮಯ್ಯ ತಮ್ಮ ಮಾತನ್ನು ಮುಂದುವರಿಸುತ್ತಾರೆ. ಇಬ್ಬರ ನಡುವಿನ ಸ್ವಾರಸ್ಯಕರ ಮಾತುಗಳು ತುಂಬಾನೇ ಕುತೂಹಲಕಾರಿಯಾಗಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೊಮ್ಮಾಯಿ ನನ್ನ ತುಂಬಾನೇ LOVE ಮಾಡ್ತಾನೆ -ಸಿದ್ದರಾಮಯ್ಯ, ಮಾಜಿ ಸಿಎಂ ನಡುವೆ ಸ್ವಾರಸ್ಯಕರ ಮಾತುಕತೆ..!

https://newsfirstlive.com/wp-content/uploads/2024/02/BOMMAI.jpg

Load More