/newsfirstlive-kannada/media/post_attachments/wp-content/uploads/2025/02/SIDDU-DK.jpg)
ರಾಜ್ಯ ಹಸ್ತಪಡೆಯಲ್ಲಿ ಎಲ್ಲವೂ ಸರಿಯಲ್ಲ ಅನ್ನೋದು ಜಗಜ್ಜಾಹೀರಾಗಿದೆ. ಸಿಎಂ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ದು ಇಂದು ಡಿಸಿಎಂ ಡಿಕೆಶಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಇತ್ತ ನಾಳೆ ಸಿಎಂ ದೆಹಲಿ ಪ್ರವಾಸ ಮಾಡಲಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಶಾಸಕರ ದುಃಖ ದುಮ್ಮಾನ ಆಲಿಸಲಿದ್ದಾರೆ.
ಸೆಪ್ಟೆಂಬರ್ ಕ್ರಾಂತಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಹಲ್ಚಲ್ ಎಬ್ಬಿಸಿದೆ. ಸಿಎಂ ಕುರ್ಚಿಗಾಗಿ ಫೈಟ್ ನಡೆಯುತ್ತಲೇ ಇದೆ. 5 ವರ್ಷ ನಾನೇ ಸಿಎಂ ಎಂಬ ಮಾತು ಹಸ್ತದಲ್ಲಿ ಗುಲ್ಲೆಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ರಾಜ್ಯ ರಾಜಕಾರಣದಿಂದ ರಾಷ್ಟ್ರರಾಜಕಾರಣಕ್ಕೆ ಸ್ಥಾನಪಲ್ಲಟ ಮಾಡ್ತಾರೆಂಬ ಗುಸುಗುಸು ಜೋರಾಗಿದೆ. ಈ ಎಲ್ಲಾ ಅಂತೆ-ಕಂತೆಗಳ ಮಧ್ಯೆ ಸಿಎಂ-ಡಿಸಿಎಂ ದೆಹಲಿ ಯಾತ್ರೆ ಬೆಳೆಸಿದ್ದಾರೆ.
ಇದನ್ನೂ ಓದಿ: ದೆವ್ವ ಬಿಡಿಸುವ ಮಂತ್ರವಾದಿಯ ಕೋಲಿನ ಹೊಡೆತಕ್ಕೆ ಮಹಿಳೆ ಬಲಿ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ದೆಹಲಿ ಪ್ರವಾಸ
ಹೈಕಮಾಂಡ್ ಸೂಚನೆ ಕೊಟ್ಟರೂ ರಾಜ್ಯದಲ್ಲಿ ಸಿಎಂ ಕುರ್ಚಿ ಫೈಟ್ ತಣ್ಣಗಾಗೋ ಲಕ್ಷಣ ಕಾಣಿಸ್ತಿಲ್ಲ. ರಾಜಕೀಯ ನಾಯಕರು ಸುಮ್ಮನಿದ್ರೂ ಡಿಕೆಶಿ ಸಿಎಂ ಆಗಲಿ ಅಂತ ರಂಭಾಪುರಿ ಜಗದ್ಗುರು ಶ್ರೀಗಳು ಮತ್ತೆ ಕಿಚ್ಚು ಹಚ್ಚಿದ್ರು. ಈ ಎಲ್ಲಾ ಆಗು-ಹೋಗುಗಳ ಬೆನ್ನಲ್ಲೇ ರಾಜ್ಯದ ಸುದ್ದಿಗಳನ್ನು ಹೈಕಮಾಂಡ್ಗೆ ರಿಪೋರ್ಟಿಂಗ್ ಮಾಡಲು ಸಿಎಂ-ಡಿಸಿಎಂ ದೆಹಲಿ ಪ್ರಯಾಣ ಬೆಳೆಸಿದ್ದಾರೆ. ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿ ಕೆಪಿಸಿಸಿ ಹುದ್ದೆ ಸೇರಿದಂತೆ ಇನ್ನೀತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.
ನಾಳೆ ಸಿಎಂ ದೆಹಲಿ ಪ್ರವಾಸ
- ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ
- ಮಧ್ಯಾಹ್ನ 1.55ಕ್ಕೆ ದೆಹಲಿಗೆ, ಸಂಜೆ 4ಕ್ಕೆ ರಾಜನಾಥ್ ಸಿಂಗ್ ಭೇಟಿ
- ಮೈಸೂರು ದಸರಾದಲ್ಲಿ ವೈಮಾನಿಕ ಪ್ರದರ್ಶನ ಆಯೋಜನೆ ಬಗ್ಗೆ ಚರ್ಚೆ
- ದೆಹಲಿಯಲ್ಲೇ ವಾಸ್ತವ್ಯ, ಹೈಕಮಾಂಡ್ ಭೇಟಿ ಮಾಡಿ ರಾಜ್ಯದ ಸ್ಥಿತಿಗತಿ ಚರ್ಚೆ
- ಪರಿಷತ್ ಸ್ಥಾನ, ನಿಗಮ-ಮಂಡಳಿ, ಕೆಪಿಸಿಸಿ ಪದಾಧಿಕಾರಿಗಳ ನೇಮಕ
ಹಲವು ವಿಚಾರಗಳ ಬಗ್ಗೆ ಹೈಕಮಾಂಡ್ ಜೊತೆ ಸಿದ್ದರಾಮಯ್ಯ ಖಾಸ್ಬಾತ್
ಇಂದು 20ಕ್ಕೂ ಹೆಚ್ಚು ಶಾಸಕರ ಜೊತೆ ಸುರ್ಜೇವಾಲಾ ಸಭೆ
ಇಂದು ಕೂಡ ಕಾಂಗ್ರೆಸ್‌ನಲ್ಲಿ ಶಾಸಕರನ್ನ ಸಮಾಧಾನ ಮಾಡುವ ಕಾರ್ಯ ಮುಂದುವರೆಯಲಿದೆ. ನಿನ್ನೆ ಮತ್ತೆ ರಾಜ್ಯಕ್ಕೆ ಆಗಮಿಸಿರೋ ರಾಜ್ಯ ಕೈ ಉಸ್ತುವಾರಿ ಸುರ್ಜೇವಾಲಾ ಒಳಬೇಗುದಿಯನ್ನ ತಣಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಿನ್ನೆ 20ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿರುವ ಸುರ್ಜೇವಾಲಾ ಅವರ ದು:ಖ ದುಮ್ಮಾನಗಳನ್ನು ಆಲಿಸಿದ್ದಾರೆ. ಇಂದು ಕೂಡ 20ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ಮಾಡಿ ಒನ್ ಟು ಒನ್ ಮಾತುಕತೆ ನಡೆಸಲಿದ್ದಾರೆ.
ಒಟ್ಟಾರೆ ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಎಳೆದಂತಾಗಿದೆ ಹಸ್ತಪಡೆಯ ಸ್ಥಿತಿ. ಸಿಎಂ-ಡಿಸಿಎಂ ಮಧ್ಯೆ ಮಾತ್ರವಲ್ಲ ಶಾಸಕರು-ಸಚಿವರ ಮಧ್ಯೆಯೂ ತಾಳ ಮೇಳ ಇಲ್ಲದಂತಾಗಿದೆ. ಇದನ್ನೇ ಸರಿಪಡಿಸಲು ಸುರ್ಜೇವಾಲಾ ಮತ್ತೆ ಆಗಮಿಸಿದ್ದಾರೆ. ನಿನ್ನೆಯಿಂದ ಆರಂಭವಾದ ಮೂರು ದಿನಗಳ ಸಭೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಈ ಎಲ್ಲಾ ಚರ್ಚೆ ಬಳಿಕವಾದ್ರೂ ಶಾಸಕರ ಅಸಮಾಧಾನ ಶಮನವಾಗುತ್ತಾ ಕಾದು ನೋಡಬೇಕು.
ಇದನ್ನೂ ಓದಿ: ಮೆದುಳು ಸದಾ ಚುರುಕಾಗಿ, ಆ್ಯಕ್ಟಿವ್ ಆಗಿ ಕೆಲಸ ಮಾಡಬೇಕಾ..? ಹಾಗಾದ್ರೆ ಮಾಡಬೇಕಾಗಿದ್ದು ಇಷ್ಟೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ