newsfirstkannada.com

‘ಇಲ್ಲಿಯವರೆಗೂ ದೆಹಲಿಯಲ್ಲಿ ಪ್ರತಿಭಟನೆ ಮಾಡಿರಲಿಲ್ಲ, ಆದರೆ..’ ಜಂಟಿ ಸುದ್ದಿಗೋಷ್ಟಿಯಲ್ಲಿ ಸಿದ್ದು, ಡಿಕೆಶಿ ವಾಗ್ದಾಳಿ

Share :

Published February 5, 2024 at 11:59am

    14ನೇ ಹಣಕಾಸು ಆಯೋಗದಲ್ಲಿ ಶೇ.42 ರಷ್ಟು ಅನುದಾನ ಹಂಚಿಕೆ

    15ನೇ ಆಯೋಗದಲ್ಲಿ ಉದ್ದೇಶಪೂರ್ವಕವಾಗಿ ಶೇ.41ಕ್ಕೆ ಇಳಿಕೆ-ಸಿಎಂ

    ರಾಜ್ಯದಿಂದ ಕೇಂದ್ರಕ್ಕೆ, ರಾಜ್ಯಕ್ಕೆ ಸಿಗ್ತಿರುವ ಸಂಪನ್ಮೂಲದ ವಿವರ ರಿಲೀಸ್

ಬೆಂಗಳೂರು: ಅನುದಾನ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡ್ತಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಇವತ್ತು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ರಾಜ್ಯದಿಂದ ಕೇಂದ್ರಕ್ಕೆ ನೀಡುತ್ತಿರುವ ಹಾಗೂ ರಾಜ್ಯಕ್ಕೆ ಸಿಗುತ್ತಿರುವ ಸಂಪನ್ಮೂಲದ ವಿವರಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಕಡಿತವಾಗಿರುವ ಅನುದಾನದ ಬಗ್ಗೆಯೂ ಮಾಹಿತಿಯನ್ನು ನೀಡಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಹೇಳಿದ್ದೇನು..?
ಕೇಂದ್ರ ಸರ್ಕಾರ ಇದೂವರೆಗೂ ಬರಗಾಲದ ಹಣವನ್ನು ನೀಡಿಲ್ಲ. ಕೊನೆ ಪಕ್ಷ ಬರಗಾಲ ಕಾರಣ ಕೂಲಿಗೂ ಹಣ ನೀಡಿಲ್ಲ. ಎಷ್ಟು ಅಂತಾ ನಾವು ನಮ್ಮ ನೋವನ್ನು ಸಹಿಸಿಕೊಳ್ಳಲು ಸಾಧ್ಯ? ರಾಜ್ಯದ ನ್ಯಾಯಕ್ಕಾಗಿ ಹೋರಾಡಬೇಕಿದೆ. ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನ ನೀಡಿದ್ದೇವೆ ಎಂದರು.

ಸಿದ್ದರಾಮಯ್ಯ ಏನಂದ್ರು?
ಫೆಬ್ರವರಿ 7ರಂದು ದೆಹಲಿಯ ಜಂತರ್ ಮಂಥರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಮೂಲಕ ದೇಶದ ಜನರ ಗಮನವನ್ನು ಸೆಳೆಯುತ್ತೇವೆ. ಇದೂವರೆಗೂ ನಾವು ದೆಹಲಿಯಲ್ಲಿ ಪ್ರತಿಭಟನೆ ಮಾಡಿಲ್ಲ. ಈಗ ಅನಿವಾರ್ಯ ಕಾರಣಗಳಿಂದಾಗಿ ಪ್ರತಿಭಟನೆ ಮಾಡಬೇಕಾಗಿದೆ. ಇದು ಕಾಂಗ್ರೆಸ್ ಪಕ್ಷ, ಬಿಜೆಪಿ ವಿರುದ್ಧ ಮಾಡುವ ಪ್ರತಿಭಟನೆ ಅಲ್ಲ. ರಾಜಕೀಯ ಪ್ರತಿಭಟನೆ ಅಲ್ಲವೇ ಅಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ. ಹಣಕಾಸು ಹಂಚಿಕೆಯಲ್ಲಿ ಆಗಿರುವ ತಾರತಮ್ಯ, ಬರಗಾಲದಲ್ಲಿ ತೋರಿಸಿರುವ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟಿಸುತ್ತೇವೆ ಎಂದರು.

ನಾಳೆ ಸಂಜೆ ದೆಹಲಿಗೆ ಹೋಗುತ್ತೇವೆ
ಎಲ್ಲಾ ಶಾಸಕರು, ಸಚಿವರು, ಪರಿಷತ್ ಸದಸ್ಯರು ಭಾಗವಹಿಸುತ್ತಾರೆ. ನಾಳೆ ಸಂಜೆ ಎಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ನಾಡಿದ್ದು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣ ಅಂದ್ರೆ ಅದು ರಾಜ್ಯಗಳಿಂದ ವಸೂಲಾಗುವ ತೆರಿಗೆ ಹಣ. ಈ ತೆರಿಗೆ ಜಿಎಸ್‌ಟಿ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಸೆಸ್ ಗಳಿಂದ ಸಂಗ್ರಹಿಸುವ ಹಣವಾಗಿದೆ. ಹಣಕಾಸು ಆಯೋಗ ರಾಜ್ಯಗಳಿಗೆ ಹೇಗೆ ಹಣ ಹಂಚಿಕೆ ಆಗಬೇಕು ಎಂಬುದನ್ನು ಹೇಳುತ್ತದೆ.

ಮೋದಿ ಅವಧಿಯಲ್ಲಿ ಕಡಿಮೆ
ಹಣಕಾಸು ಆಯೋಗ ಸ್ವತಂತ್ರ ಸಂಸ್ಥೆ. ರಾಜ್ಯಗಳಿಗೆ ಹಂಚಿಕೆಯಾಗುವ ಹಣದ ಬಗ್ಗೆ ಹೇಳುತ್ತದೆ. ಇಲ್ಲಿಯವರೆಗೆ ಹದಿನೈದು ಹಣಕಾಸು ಆಯೋಗಗಳು ರಚನೆ ಆಗಿವೆ. ಪ್ರತಿ ಐದು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚನೆಯಾಗುತ್ತದೆ. ಈಗ ಹದಿನಾರನೇ ಹಣಕಾಸು ಆಯೋಗ ರಚನೆಯಾಗಿದೆ. ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇಕಡಾ 42 ಹಂಚಿಕೆ ಮಾಡಿದೆ. ಹದಿನೈದನೇ ಹಣಕಾಸು ಆಯೋಗ ಶೇಕಡಾ 41ಕ್ಕೆ ಇಳಿಸಿದೆ. ಮೋದಿ ಪ್ರಧಾನಿಯಾದ ಬಳಿಕ ಹದಿನೈದನೇ ಹಣಕಾಸು ಆಯೋಗ ರಚನೆಯಾಗಿರೋದು. ಇವರ ಅವಧಿಯಲ್ಲಿ ಹಣದ ಹಂಚಿಕೆ ಕಡಿಮೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ಹಣಕಾಸು ಆಯೋಗಗಳು ಹಂಚಿಕೆ ಮಾಡುವಾಗ ಮನವರಿಕೆ ಆಗಿದೆ. 5495 ಕೋಟಿ ರೂಪಾಯಿ ವಿಶೇಷ ಅನುದಾನವನ್ನ ಮಧ್ಯಂತರ ವರದಿಯಲ್ಲಿ ನೀಡುವಂತೆ ಶಿಫಾರಸು ಮಾಡಿದ್ದರು. ಇದನ್ನ ಕೇಳುವಂತೆ ನಾನು ಸದನದಲ್ಲಿ ಪ್ರಸ್ತಾಪಿಸಿದ್ದೆ. ಕೇಂದ್ರ ಸರ್ಕಾರವನ್ನ ಕೇಳಿ ಅಂತಾ ಯಡಿಯೂರಪ್ಪ, ಬೊಮ್ಮಾಯಿಗೂ ಹೇಳಿದ್ದೆ. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನ ತಿರಸ್ಕಾರ ಮಾಡಿದ್ದರು ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇಲ್ಲಿಯವರೆಗೂ ದೆಹಲಿಯಲ್ಲಿ ಪ್ರತಿಭಟನೆ ಮಾಡಿರಲಿಲ್ಲ, ಆದರೆ..’ ಜಂಟಿ ಸುದ್ದಿಗೋಷ್ಟಿಯಲ್ಲಿ ಸಿದ್ದು, ಡಿಕೆಶಿ ವಾಗ್ದಾಳಿ

https://newsfirstlive.com/wp-content/uploads/2024/02/SIDDARAMAIAH-20.jpg

Load More