newsfirstkannada.com

‘ಸಿದ್ದರಾಮಯ್ಯ ಬಜೆಟ್‌ನಲ್ಲಿ ಕುಡುಕರಿಗೆ ಅನ್ಯಾಯ’- ಮದ್ಯಪ್ರಿಯರ ಪರ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ

Share :

Published July 9, 2023 at 3:55pm

Update July 9, 2023 at 3:59pm

    ‘ಕೂಲಿ ಕಾರ್ಮಿಕರು ಪ್ರತಿನಿತ್ಯ ಕುಡಿಯೋದು ಬಿಡೋಕೆ ಆಗೊಲ್ಲ’

    ಹುಮ್ನಾಬಾದ್ BJP ಶಾಸಕ ಸಿದ್ದು ಪಾಟೀಲ ವಿವಾದಾತ್ಮಕ ಹೇಳಿಕೆ

    ಸಿದ್ದರಾಮಯ್ಯ ಸರ್ಕಾರದ ಬಜೆಟ್ ಒಂದೇ ಸಮುದಾಯಕ್ಕೆ ಮೀಸಲು

ಬೀದರ್: ಸಿಎಂ ಸಿದ್ದರಾಮಯ್ಯ ಮಂಡಿಸಿದ 2023-24ನೇ ಸಾಲಿನ ಬಜೆಟ್‌ ಅನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಹುಮ್ನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ, ಬಜೆಟ್‌ನಲ್ಲಿ ಕುಡುಕರಿಗೆ ಅನ್ಯಾಯ ಮಾಡಿದ್ದಾರೆ. ಎಲ್ಲ ಸಮುದಾಯಗಳಿಗೂ ಮಾನ್ಯತೆ ನೀಡಿ, ಬಜೆಟ್ ಮಾಡಬೇಕಿತ್ತು. ಆದರೆ ಒಂದೇ ಸಮುದಾಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಪಾಲು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಬಜೆಟ್‌ ಕುರಿತು ಮಾತನಾಡಿದ ಶಾಸಕ ಸಿದ್ದು ಪಾಟೀಲ ಅವರು ಸಿಎಂ ಸಿದ್ದರಾಮಯ್ಯ ಕುಡುಕರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಮದ್ಯದ ಮೇಲೆ ಹೆಚ್ಚಿನ ಟ್ಯಾಕ್ಸ್ ಹಾಕಿದೆ. ಕೆಲಸ ಮಾಡಿ ಸುಸ್ತಾದಾಗ, ಬಡ ಕೂಲಿ ಕಾರ್ಮಿಕರು ಪ್ರತಿನಿತ್ಯ ಕುಡಿತಾರೆ. ಚಟ ಮಾಡೋರು ಕುಡಿಯೋದು ಬಿಡೋಕೆ ಆಗೊಲ್ಲ. ಸಾಲ ಸೋಲ‌ಮಾಡಿ ಆದರೂ ಕುಡಿತಾರೆ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಕುಡುಕರು ಸೇರಿದಂತೆ ಎಲ್ಲರಿಗೂ ನಿರಾಸೆ ತಂದಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಒಂದೇ ಸಮುದಾಯಕ್ಕೆ ಮೀಸಲು ಮಾಡಿ ಬಜೆಟ್ ಮಾಡಿದ್ದಾರೆ. ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಬೇಕಿತ್ತು. ಬೀದರ್ ಜಿಲ್ಲೆಗೆ ಉತ್ತಮ ಅನುದಾನ ನೀಡಬೇಕಿತ್ತು. ಆದರೆ ಬೀದರ್ ಅನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ ಬಜೆಟ್ ಮಾಡಿದ್ದಾರೆ. ಬಿಜೆಪಿ ಅವಧಿಯ ಅನೇಕ‌ ಜನಪರ ಯೋಜನೆಗಳನ್ನು ಕೈ ಬಿಟ್ಟಿದ್ದಾರೆ. ಕಾಂಗ್ರೆಸ್‌‌ನವರು ಹೇಳೊದೊಂದು ಮಾಡೊದೊಂದು. ಬಡಜನರಿಗೆ ತುಂಬಾ ಅನ್ಯಾಯವಾದ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ಇದು ರಾಜ್ಯಕ್ಕೆ ಒಳ್ಳೆಯ ಬಜೆಟ್ ಅಲ್ಲ ಎಂದು ಸಿದ್ದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಸಿದ್ದರಾಮಯ್ಯ ಬಜೆಟ್‌ನಲ್ಲಿ ಕುಡುಕರಿಗೆ ಅನ್ಯಾಯ’- ಮದ್ಯಪ್ರಿಯರ ಪರ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ

https://newsfirstlive.com/wp-content/uploads/2023/07/Siddu-Patil-on-Siddarmaiah.jpg

Load More